Advertisement
ಹೊಸ ಯುದ್ಧ ನೌಕೆಗೆ “003′ ಎಂಬ ಹೆಸರು ಇರಿಸಲಾಗಿದ್ದು, 85 ಸಾವಿರ ಟನ್ ತೂಕ ಇರಲಿದೆ. ಅದರಲ್ಲಿ ಎಲೆಕ್ಟ್ರೋ ಮ್ಯಾಗ್ನೆಟಿಕ್ ಏರ್‌ಕ್ರಾಫ್ಟ್ ಲಾಂಚ್ ಸಿಸ್ಟಮ್ (ಇಎಂಎಎಲ್‌ಎಸ್) ವ್ಯವಸ್ಥೆ ಇರಲಿದೆ. ಇಂಥ ವ್ಯವಸ್ಥೆ ಮೂಲಕ ಬದಲಿ ಇಂಧನ ಬಳಕೆ ಮಾಡಿ ಹಾರಿಸುವ ಯುದ್ಧ ವಿಮಾನವನ್ನೂ ಶತ್ರು ರಾಷ್ಟ್ರಗಳತ್ತ ಹಾರಿಸಲು, ತನ್ನ ವಿರುದ್ಧ ನಿಂತ ರಾಷ್ಟ್ರಗಳ ಮೇಲೆ ನೆಲದಿಂದಷ್ಟೇ ಅಲ್ಲ, ಸಮುದ್ರದಿಂದಲೂ ಆಕ್ರಮಣ ಮಾಡುವ ಅನುಕೂಲ ಚೀನಕ್ಕೆ ಸಿಗಲಿದೆ ಎಂದು ಹೇಳಲಾಗಿದೆ.
ಎಲ್‌ಎಸಿಯುದ್ದಕ್ಕೂ ಭಾರತದ ವಿರುದ್ಧ ಹೋರಾಡಲು ಚೀನ ಸೇನೆಯು ಟಿಬೆಟಿಯನ್ ಯುವಕರನ್ನು ಬಳಸುವ ಹೊಸ ತಂತ್ರ ಹೂಡಿದೆ. ಎತ್ತರದ ಪ್ರದೇಶಗಳಲ್ಲಿ ವಿಶೇಷ ಕಾರ್ಯಾಚರಣೆ ನಡೆಸಲು ಟಿಬೇಟಿಯನ್ ಪಡೆಗಳಿಗೆ ಚೀನ ಸೇನೆ ತರಬೇತಿ ನೀಡುತ್ತಿದೆ. ಭಾರತದ ವಿಶೇಷ ಮುಂಚೂಣಿ ಪಡೆ ಮಾದರಿಯಲ್ಲೇ ಹೊಸ ಪಡೆಯನ್ನು ಸೃಷ್ಟಿಸುವುದು ಚೀನದ ಉದ್ದೇಶವಾಗಿದೆ. ಭಾರತವು ಈಗಾಗಲೇ ಪರ್ವತ ಶ್ರೇಣಿಗಳಲ್ಲಿ ಯುದ್ಧ ಮಾಡುವ ಛಾತಿ ಹೊಂದಿರುವ ಟಿಬೆಟಿಯನ್ನರನ್ನು ಸೇರಿಸಿ ರಹಸ್ಯವಾದ ವಿಶೇಷ ಪಡೆ (ಎಸ್‌ಎಫ್ಎಫ್)ಯನ್ನು ಸನ್ನದ್ಧಗೊಳಿಸಿದೆ. ಕಳೆದ ವರ್ಷದ ಆಗಸ್ಟ್ ನಲ್ಲಿ ಪಾಂಗಾಂಗ್ ತ್ಸೋ ದಕ್ಷಿಣ ತಟದಲ್ಲಿ ಚೀನ ಸೇನೆ ದುಸ್ಸಾಹಸ ತೋರಿದಾಗ, ಅದನ್ನು ಹಿಮ್ಮೆಟ್ಟಿಸುವಲ್ಲಿ ಟಿಬೆಟಿಯನ್ನರನ್ನು ಒಳಗೊಂಡ ಈ ವಿಶೇಷ ಪಡೆಯು ಭಾರತೀಯ ಸೇನೆಗೆ ನೆರವು ನೀಡಿತ್ತು.