Advertisement

ಎನ್‌ಎಸ್‌ಜಿ ಸದಸ್ಯತ್ವಕ್ಕೆ ಚೀನ ವಿರೋಧ

12:56 AM Jun 22, 2019 | mahesh |

ಬೀಜಿಂಗ್‌: ಉಗ್ರ ಮಸೂದ್‌ ಅಜರ್‌ಗೆ ಅಂತಾರಾಷ್ಟ್ರೀಯ ನಿಷೇಧ ಹೇರುವ ಕುರಿತು ಈವರೆಗೆ ಆಕ್ಷೇಪ ಎತ್ತುತ್ತಿದ್ದ ಚೀನ ಈಗ ಭಾರತದ ಪರಮಾಣು ಪೂರೈಕೆ ಗುಂಪಿನ (ಎನ್‌ಎಸ್‌ಜಿ) ಸದಸ್ಯತ್ವಕ್ಕೂ ಕ್ಯಾತೆ ತೆಗೆಯುತ್ತಿದೆ. ಅಣ್ವಸ್ತ್ರ ನಿಶ್ಶಸ್ತ್ರೀಕರಣ ತಂಡದ ಹೊರಗಿನ ಸದಸ್ಯರು ಪರಮಾಣು ಪೂರೈಕೆ ಗುಂಪಿಗೆ ಸೇರುವ ಕುರಿತು ಸ್ಪಷ್ಟ ಯೋಜನೆ ರೂಪಿಸದೇ, ಭಾರತಕ್ಕೆ ಎನ್‌ಎಸ್‌ಜಿ ಸದಸ್ಯತ್ವದ ಕುರಿತು ಚರ್ಚೆ ನಡೆಸಲಾಗದು ಎಂದಿದೆ. ಎನ್‌ಎಸ್‌ಜಿಗೆ ಸದಸ್ಯತ್ವ ಕೋರಿ 2016ರಲ್ಲಿಭಾರತ ಅರ್ಜಿ ಸಲ್ಲಿಸಿದಾಗಿ ನಿಂದಲೂ ಚೀನ ಆಕ್ಷೇಪ ಎತ್ತುತ್ತಿದೆ. ಅಣ್ವಸ್ತ್ರ ನಿಶ್ಶಸ್ತ್ರೀಕರಣ ಒಪ್ಪಂದಕ್ಕೆ ಸಹಿ ಹಾಕಿದರೆ ಮಾತ್ರವೇ ಎನ್‌ಎಸ್‌ಜಿ ಸದಸ್ಯತ್ವ ನೀಡಬೇಕು ಎಂದು ಚೀನ ಒತ್ತಡ ಹಾಕುತ್ತಿದೆ. ಭಾರತ ಈವರೆಗೂ ಅಣ್ವಸ್ತ್ರ ನಿಶ್ಶಸ್ತ್ರೀಕರಣಕ್ಕೆ ಸಹಿ ಹಾಕಿಲ್ಲ.

Advertisement
Advertisement

Udayavani is now on Telegram. Click here to join our channel and stay updated with the latest news.

Next