Advertisement
ಲಡಾಖ್ ಬಿಕ್ಕಟ್ಟಿನ ನಡುವೆ ಚೀನ ಇಂಥದ್ದೊಂದು ಉದ್ಧಟತನದ ಹೇಳಿಕೆ ಕೊಟ್ಟಿದೆ. ಅರುಣಾಚಲ ಪ್ರದೇಶದ ಐವರು ಪ್ರಜೆಗಳನ್ನು ಅಪಹರಿಸಿ ಹೈಡ್ರಾಮಾ ಸೃಷ್ಟಿಸುತ್ತಿರುವ ಚೀನ ಈ ಪ್ರಕರಣವನ್ನು ರಹಸ್ಯವಾಗಿ ಮುಚ್ಚಿಡಲೆತ್ನಿಸುತ್ತಿದೆ. “ಐವರನ್ನು ಸುರಕ್ಷಿತವಾಗಿ ಬಿಡುಗಡೆ ಮಾಡಿ’ ಎಂಬ ಭಾರತೀಯ ಸೇನೆ ಮಾಡಿರುವ ಮನವಿಗೆ ಉತ್ತರಿಸುವಾಗ, ಚೀನ ವಿದೇಶಾಂಗ ಸಚಿವ ಝಾವೊ ಲಿಜಿಯಾನ್ ಅರುಣಾಚಲದ ಬಗ್ಗೆ ಹೀಗೆ ಹಗುರವಾಗಿ ಹೇಳಿದ್ದಾರೆ.
Related Articles
ಭಾರತ- ಚೀನ ಬಿಕ್ಕಟ್ಟಿನ ನಡುವೆ ಬೃಹತ್ ಸಂಖ್ಯೆಯ ಉಗ್ರರನ್ನು ಎಲ್‌ಒಸಿ ಮೂಲಕ ಕಾಶ್ಮೀರಕ್ಕೆ ನುಗ್ಗಿಸಲು ಪಾಕಿಸ್ಥಾನ ಯತ್ನಿ ಸುತ್ತಿದೆ ಎಂದು “ನ್ಯೂಸ್ 18′ ವರದಿ ಮಾಡಿದೆ. ಪ್ರಸ್ತುತ 400ಕ್ಕೂ ಹೆಚ್ಚು ಉಗ್ರ ರನ್ನು ಎಲ್‌ಒಸಿ ಬಳಿಯ ವಿವಿಧ ಲಾಂಚ್‌ಪ್ಯಾಡ್‌ಗಳಲ್ಲಿ ಪಾಕಿಸ್ಥಾನ ಒಟ್ಟುಗೂಡಿಸಿದೆ. ಈ ಉಗ್ರರಿಗೆ ಎಲ್‌ಒಸಿ ದಾಟಲು ಸಹಾಯ ಮಾಡಲೆಂದೇ ಪಾಕಿ ಸ್ತಾನ ಸೇನೆಯ ಎಸ್‌ಎಸ್‌ಐ ವಿಶೇಷ ತಂಡ ವನ್ನು ರಚಿಸಿದೆ ಎಂದು ವರದಿ ತಿಳಿಸಿದೆ.
Advertisement
ಬಿಪಿಸಿಎಲ್ ಬಿಡ್‌ನಲ್ಲೂ ಚೀನ ಮೇಲೆ ನಿಗಾಸರಕಾರಿ ಸ್ವಾಮ್ಯದಲ್ಲಿದ್ದ ಭಾರತ್ ಪೆಟ್ರೋಲಿಯಂ ಕಾರ್ಪೋರೇಶನ್ ಲಿಮಿಟೆಡ್ ಅನ್ನು (ಬಿಪಿಸಿಎಲ್) ಖಾಸಗಿ ವಲಯಕ್ಕೆ ಮಾರುವ ವಿಚಾರದಲ್ಲಿಯೂ ಕೇಂದ್ರ ಸರಕಾರ ಚೀನದ ಮೇಲೆ ನಿಗಾ ಇಟ್ಟಿದೆ. ಬಿಪಿಸಿಎಲ್ ಬಿಡ್‌ದಾರರನ್ನು ಚೀನದೊಂದಿಗೆ ಸಂಪರ್ಕ ಹೊಂದಿದ್ದಾರೆಯೇ ಎಂಬುದನ್ನು ಪರಿಶೀಲಿಸಲು ಕೇಂದ್ರ ಮುಂದಾಗಿದೆ. ಪ್ರಸ್ತುತ ಕೇಂದ್ರ ಸರಕಾರ 2.10 ಲಕ್ಷ ಕೋಟಿ ರೂ.ಗಳಿಗೆ ಬಿಪಿಸಿಎಲ್ ಮಾರಲು ಉದ್ದೇಶಿಸಿದೆ. ಚೀನ, ಪಾಕಿಸ್ಥಾನದಂಥ ದೇಶಗಳೊಂದಿಗೆ ಸಂಬಂಧ ಹೊಂದಿದ ಬಿಡ್‌ದಾರರು ದೊಡ್ಡ ಮೊತ್ತದ ಮೂಲಕ ಬಿಡ್‌ನಲ್ಲಿ ಪಾಲ್ಗೊಳ್ಳುವ ಸಾಧ್ಯತೆ ಇದೆ ಎಂದು ಸರಕಾರ ಶಂಕಿಸಿದೆ. ಚುಶುಲ್ ಸಮೀಪ ಸೈನಿಕರನ್ನು ಹೆಚ್ಚಿಸಿದ ಚೀನ
ರಷ್ಯಾದಲ್ಲಿ ಉಭಯ ರಾಷ್ಟ್ರಗಳ ರಕ್ಷಣಾ ಸಚಿವರ ಸಭೆ ಒಮ್ಮತದ ನಿರ್ಣಯಕ್ಕೆ ಬರಲು ವಿಫಲವಾದ ಬೆನ್ನಲ್ಲೇ ಚುಶುಲ್ ವಲಯ ಸಮೀಪದ ಚೀನ ಸೇನೆ ನಿಯೋಜನೆಯನ್ನು ಹೆಚ್ಚಿಸುತ್ತಿದೆ ಎಂದು ಮೂಲಗಳು ತಿಳಿಸಿವೆ. ಪ್ಯಾಂಗಾಂಗ್‌ನ ದಕ್ಷಿಣ ದಂಡೆಯ ಸಮೀಪದಲ್ಲಿ 10 ಸಾವಿರ ಸೈನಿಕರನ್ನು ಪಿಎಲ್‌ಎ ಪಡೆ ನಿಯೋಜಿಸುವ ಪ್ರಕ್ರಿಯೆ ಆರಂಭಿಸಿದೆ. ಕಾಲಾಳುಪಡೆ ವಾಹನಗಳು, ಭಾರೀ ಫಿರಂಗಿಗಳನ್ನು ನಿಯೋಜಿಸುತ್ತಿರುವ ದೃಶ್ಯಗಳು ಉಪಗ್ರಹ ತೆಗೆದ ಚಿತ್ರಗಳಲ್ಲಿ ಸ್ಪಷ್ಟವಾಗಿವೆ. ಸೆ. 10ಕ್ಕೆ ರಷ್ಯಾದಲ್ಲಿ ಮತ್ತೆ ಇಂಡೋ- ಚೀನ ಮಾತುಕತೆ
ಭಾರತ- ಚೀನ ಗಡಿಬಿಕ್ಕಟ್ಟು ಕುರಿತು ಚರ್ಚಿಸಲು ವಿದೇ ಶಾಂಗ ಸಚಿವ ಎಸ್. ಜೈಶಂಕರ್ ರಷ್ಯಾ ಪ್ರವಾಸ ಕೈಗೊಂಡಿದ್ದಾರೆ. ಸೆ.10ರಂದು ಚೀನ ವಿದೇಶಾಂಗ ಸಚಿವ ವಾಂಗ್ ಯೀ ಜತೆ ದ್ವಿಪಕ್ಷೀಯ ಮಾತುಕತೆಯಲ್ಲಿ ಅವರು ಪಾಲ್ಗೊಳ್ಳಲಿದ್ದಾರೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ. ರಷ್ಯಾ ಒಕ್ಕೂಟ ಆಯೋಜಿಸಿರುವ ಎಸ್‌ಸಿಒ ಶೃಂಗದ ಭಾಗವಾಗಿ ಈ ಮಾತು ಕತೆ ಜರುಗಲಿದೆ. ಇತ್ತೀಚೆಗಷ್ಟೇ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಚೀನದ ರಕ್ಷಣಾ ಮಂತ್ರಿಗಳೊಂದಿಗೆ ಇದೇ ವಿಚಾರವಾಗಿ ಮಾಸ್ಕೋದಲ್ಲಿ ಸುದೀರ್ಘ ಮಾತುಕತೆ ನಡೆಸಿದ್ದರು.