Advertisement

ಕಳ್ಳ ದಾರಿ ಮೂಲಕ ಚೀನ ಹೂಡಿಕೆ?

11:54 PM Aug 31, 2021 | Team Udayavani |

ಹೊಸದಿಲ್ಲಿ: ಹೈಬ್ರಿಡ್‌ ಮಾದರಿಯ ಮೂಲಕ ನಡೆಯುವ ವಿದೇಶಿ ನೇರ ಬಂಡವಾಳ ಹೂಡಿಕೆ ನಿಯಂತ್ರಣಕ್ಕೆ ಮುಂದಾಗಿದೆ.

Advertisement

ಚೀನದ ಕೆಲವೊಂದು ಕಂಪೆನಿಗಳು ಇಂಥ ವ್ಯವಸ್ಥೆಯ ಮೂಲಕ ದೇಶದಲ್ಲಿ ಹೂಡಿಕೆ ಮಾಡಲು ಯತ್ನಿಸಿದ ಪ್ರಕರಣ ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಸರಕಾರ ಈ ನಿರ್ಧಾರಕ್ಕೆ ಬಂದಿದೆ. ವಿಶೇಷವಾಗಿ ಲಡಾಖ್‌ ಬಿಕ್ಕಟ್ಟಿನ ಬಳಿಕ ಚೀನ ವಿರುದ್ಧ ಕೇಂದ್ರ ಸರಕಾರ ಕಠಿನ ನಿಲುವು ಪ್ರದರ್ಶಿಸಿದೆ.

ಜಗತ್ತಿನಾದ್ಯಂತ ಕೊರೊನಾ ಹಬ್ಬಲು ಚೀನ ಕಾರಣ ಎಂಬ ಕಾರಣಕ್ಕಾಗಿ ಕೆಲವು ದೇಶಗಳಿಗೆ ಸ್ವಯಂಚಾಲಿತವಾಗಿ ಭಾರತದಲ್ಲಿ ಬಂಡವಾಳ ಹೂಡಿಕೆ ಮಾಡುವ ಅವಕಾಶಕ್ಕೆ ತಡೆ ಹಾಕಲಾಯಿತು. ಇದರಿಂದ ಚೀನ ಕಂಪೆನಿಗಳಿಗೆ ಹಿನ್ನಡೆಯಾಗಿತ್ತು. ಇದೀಗ ಚೀನದ ಹೂಡಿಕೆ ದೈತ್ಯ ಟ್ರೆನ್ಸೆಂಟ್‌ (Tenchent) ಐರೋಪ್ಯ ಒಕ್ಕೂಟದ ಮೂಲಕ ದೇಶದಲ್ಲಿ ಬಂಡವಾಳ ಹೂಡಿಕೆ ಮಾಡಲು ಮುಂದಾಗಿತ್ತು. ಚೀನದ ಫೋಸನ್‌ ಕಂಪೆನಿ ಮೂಲಕ ಈ ಹೂಡಿಕೆಗೆ ಯತ್ನಿಸಿತ್ತು.

Advertisement

Udayavani is now on Telegram. Click here to join our channel and stay updated with the latest news.

Next