Advertisement

ಲಡ್ಡಾಕ್‌ ನಲ್ಲಿ ಹೆಚ್ಚುತ್ತಿರುವ ಚೀನ ಸೇನೆಯ ಅತಿಕ್ರಮಣ: ITBP ವರದಿ

04:49 PM Apr 09, 2018 | udayavani editorial |

ಹೊಸದಿಲ್ಲಿ : ಚೀನ ಸೇನೆ ಲಡ್ಡಾಕ್‌ ಪ್ರಾಂತ್ಯದಲ್ಲಿನ ಪ್ಯಾಂಗಾಂಗ್‌ ಲೇಕ್‌ ಪ್ರದೇಶವನ್ನು ಕಳೆದ ಎರಡು ತಿಂಗಳಲ್ಲಿ  ಹಲವು ಬಾರಿ ಅತಿಕ್ರಮಿಸಿ ಭಾರತೀಯ ಭೂಪ್ರದೇಶದೊಳಗೆ ಬಂದಿರುವುದಾಗಿ ಇಂಡೋ ಟಿಬೆಟಾನ್‌ ಬಾರ್ಡರ್‌ ಪೊಲೀಸ್‌ (ಐಟಿಬಿಪಿ) ಕೇಂದ್ರ ಗೃಹ ಸಚಿವಾಲಯಕ್ಕೆ ವರದಿ ಮಾಡಿದೆ.

Advertisement

ಚೀನ ಸೈನಿಕರು ಕನಿಷ್ಠ ಆರು ಬಾರಿ ಲಡ್ಡಾಕ್‌ನ ಉತ್ತರ ಭಾಗದಲ್ಲಿರುವ ಪ್ಯಾಂಗಾಂಗ್‌ ಲೇಕ್‌ ದಾಟಿ ಮುಂದೆ ಬಂದಿದ್ದಾರೆಎಂದು ಐಟಿಬಿಪಿ ಹೇಳಿದೆ. 

ಈ ಅತಿಕ್ರಮಣಗಳು ಫೆ.27, ಮಾರ್ಚ್‌ 6 ಮತ್ತು ಮಾರ್ಚ್‌ 9ರಂದು ನಡೆದಿರುವುದನ್ನು ಗೃಹ ಸಚವಾಲಯವು ಪಟ್ಟಿ ಮಾಡಿದೆ. 

ಪ್ಯಾಂಗಾಂಗ್‌ ಲೇಕ್‌ನ ಉದ್ದಕ್ಕೂ ಇರುವ ನೈಜ ನಿಯಂತ್ರಣ ರೇಖೆಯು ವಿವಾದಿತ ಅಕ್ಸಾಯಿ ಚಿನ್‌ ದಕ್ಷಿಣಕ್ಕಿದ್ದು ಇದು ಭಾರತ ಮತ್ತು ಚೀನ ನಡುವಿನ ಕದನ ವಿರಾಮ ರೇಖೆಯಾಗಿದೆ. ಚೀನ ಸೇನೆ ಇಲ್ಲಿ ಅತಿಕ್ರಮಣ ನಡೆಸಿ ಭಾರತದ ಭೂಭಾಗ ಪ್ರವೇಶಿಸುವುದು ಸಾಮಾನ್ಯವಾಗಿದೆ. 

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next