Advertisement

ಶೂನ್ಯದತ್ತ ಚೀನ ಆತಂಕದತ್ತ ಇಟಲಿ, ಇಂಗ್ಲೆಂಡ್‌

09:58 AM Mar 21, 2020 | Sriram |

ಹೊಸದಿಲ್ಲಿ: ಕೋವಿಡ್‌ 19 ವೈರಸ್‌ ವಿಶ್ವವ್ಯಾಪಿಯಾಗುತ್ತಿದೆ. ದಿನೇ ದಿನೇ ಸೋಂಕಿತರ ಸಂಖ್ಯೆ ಹೆಚ್ಚುತ್ತಿದೆ. ಈ ಹಿಣದೆಯೆಲ್ಲಾ ಚೀನದಲ್ಲಿ ಮಾತ್ರ ಇದರ ಪ್ರಮಾಣ ಹೆಚ್ಚು ಇತ್ತು. ಇದೀಗ ಸುತ್ತಮುತ್ತಲಿನ ದೇಶಗಳಾದ ಇಟಲಿ, ಇರಾನ್‌ನಲ್ಲಿ ಕೋವಿಡ್‌ 19 ಹೆಚ್ಚಾಗಿ ಕಾಡುತ್ತಿದೆ. ಇಟಲಿಯಲ್ಲಂತು ಕೋವಿಡ್‌ 19 ಭಾರೀ ಅಪಾಯಕಾರಿಯಾಗುತ್ತಿದೆ. ಸಾವಿನ ಪ್ರಮಾಣದಲ್ಲೂ ಚೀನವನ್ನು ಮೀರಿಸಿದೆ.

Advertisement

ಕೋವಿಡ್‌ 19 ಈಗಾಗಲೇ ಸುಮಾರು ನೂರಕ್ಕಿಂತಲೂ ಹೆಚ್ಚಿನ ರಾಷ್ಟ್ರಗಳಲ್ಲಿ ತೀವ್ರವಾಗಿ ಕಾಡುತ್ತಿದೆ. 2.20 ಲಕ್ಷ ಕ್ಕೂ ಮಿಕ್ಕಿದ ಪ್ರಕರಣಗಳು ದಾಖಲಾಗಿವೆ. ಜರ್ಮನ್‌ನಲ್ಲಿ ಇತರ ದೇಶಗಳಿಗೆ ಹೋಲಿಸಿದರೆ ಪ್ರಕರಣಗಳ ಸಂಖ್ಯೆ ಕಡಿಮೆಯಾಗಿದೆ.

ಕೋವಿಡ್‌ 19 ವೈರಸ್‌ ಸೋಂಕು ಇಟಲಿಯವನ್ನು ತೀವ್ರವಾಗಿ ಕಾಡಿದೆ. ಯಾವತ್ತೂ ನಿರಂತರವಾಗಿ ಕೆಲಸ ಮಾಡದೇ ಇದ್ದ ಚಿತಾಗಾರಗಳಲ್ಲಿ ದಿನದ 24 ಗಂಟೆ ಕಾಲವೂ ಶವ ಸಂಸ್ಕಾರದ ಕೆಲಸಗಳು ನಡೆಯುತ್ತಿವೆ. ಪ್ರಮುಖ ಆಸ್ಪತ್ರೆಗಳ ಶವಾಗಾರದಲ್ಲೆಲ್ಲಾ ಶವಪೆಟ್ಟಿಗೆಗಳು ತುಂಬಿಕೊಂಡಿವೆ. ಸಿಮೆಟ್ರಿಯಲ್ಲಿ ಅಂತ್ಯ ಸಂಸ್ಕಾರಕ್ಕಾಗಿ ಕ್ಯೂಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಪತ್ರಿಕೆಗಳಲ್ಲಿ ಪ್ರಕಟವಾಗುವ ನಿಧನ ವಾರ್ತೆಗಳ ಪ್ರಮಾಣ 2-3 ಪುಟ ಇದ್ದದ್ದು 10 ಪುಟಗಳಿಗೆ ವಿಸ್ತರಿಸಿಕೊಂಡಿದೆ ಎನ್ನುತ್ತವೆ ಅಂತಾರಾಷ್ಟ್ರೀಯ ಮಾಧ್ಯಮಗಳು.

ಐಸೋಲೇಷನ್‌ ವಾರ್ಡ್‌ಗಳ ಬಳಿ ಯಾರನ್ನೂ ಸುಳಿಯಲು ಬಿಡುತ್ತಿಲ್ಲ. ಸಂಬಂಧಿಕರು, ಗೊಂದಲ ಆತಂಕದ ನಡುವೆ ಹೊಯ್ದಾಡುತ್ತಿರುವ ದೃಶ್ಯವೂ ಸಾಮಾನ್ಯವಾಗಿದೆ. ಇನ್ನು ಮೃತಪಟ್ಟವರ ಅಂತ್ಯ ಸಂಸ್ಕಾರ ಸ್ಥಳದಲ್ಲಿ ಸಂಬಂಧ ಪಟ್ಟ ಸಿಮೆಟ್ರಿಯ ಕೆಲಸಗಾರ ಮಾತ್ರವೇ ಇರಬೇಕೆಂಬ ಆದೇಶವೂ ಇದೆ. ಇದು ಯುದ್ಧಕ್ಕಿಂತಲೂ ಭೀಕರವಾದ ಸನ್ನಿವೇಶವಾಗಿದೆ ಎಂದು ಚಿತ್ರಿಸಲಾಗುತ್ತಿದೆ.

ಚೀನದಲ್ಲಿ ಶೂನ್ಯ ಪ್ರಕರಣ
ಕೋವಿಡ್‌ 19 ವೈರಸ್‌ ಜನನಕ್ಕೆ ಕಾರಣವಾದ ಚೀ ಮಾತ್ರ ಈ ವೈರಾಣುವಿನಿಂದ ಮುಕ್ತಿ ಪಡೆಯುವ ಹಂತಕ್ಕೆ ಬಂದು ನಿಂತಿದೆ. ಕೋವಿಡ್‌ 19 ಜನಿಸಿದ ಸ್ಥಳದಿಂದಲೇ ಮಾಯವಾಗಿದ್ದು, ವುಹಾನ್‌ ನಗರದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಇದೇ ಮೊದಲ ಬಾರಿಗೆ ಶೂನ್ಯಕ್ಕೆ ಇಳಿದಿದೆ. ಈ ಹಿನ್ನೆಲೆಯಲ್ಲಿ ವುಹಾನ್‌ ನಗರವನ್ನು ಕೊರೊನಾ ಮುಕ್ತ ಎಂದು ಚೀನ ಘೋಷಿಸಿಯೂ ಆಗಿದೆ. ಈ ಹಿಂದೆ ಚೀನಾದ ವುಹಾನ್‌ ಪ್ರಾಂತ್ಯವನ್ನು ಕೋವಿಡ್‌ 19 ವೈರಸ್‌ ಕೇಂದ್ರ ಬಿಂದು ಘೋಷಣೆ ಮಾಡಲಾಗಿತ್ತು. ತನ್ನ ನೆಲದಲ್ಲಿ 3,000ಕ್ಕೂ ಅಧಿಕ ಜನರನ್ನು ಬಲಿ ಪಡೆದಿದ್ದ ಮಾರಕ ವೈರಾಣುವನ್ನು ಹೋಗಲಾಡಿಸುವಲ್ಲಿ ಇದೀಗ ಚೀನ ಯಶಸ್ವಿಯಾಗಿದೆ.

Advertisement

ಚೀನ ತೆಗೆದುಕೊಂಡ ಕ್ರಮಕ್ಕೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಒಗ್ಗಟ್ಟಿನಿಂದ ಮಾತ್ರ ಇಂತಹ ಬೆಳವಣಿಗೆ ಸಾಧ್ಯ ಎಂದು ಬಣ್ಣಿಸಲಾಗುತ್ತಿದೆ. ಹೋರಾಡಿದ್ದು ಶ್ಲಾಘನೀಯ ಎಂದು ಹಲವರು ಪ್ರಶಂಸೆ ಮಾಡಿ¨ªಾರೆ. ವಿಶ್ವ ಆರೋಗ್ಯ ಸಂಸ್ಥೆ ಕೂಡ ಚೀನದ ಕ್ರಮವನ್ನು ಮೆಚ್ಚಿಕೊಂಡಿದ್ದು, ವುಹಾನ್‌ ಇದೀಗ ವೈರಸ್‌ ಮುಕ್ತ ಎಂಬ ಚೀನ ಘೋಷಣೆಯನ್ನು ಸ್ವಾಗತಿಸಿದೆ. ಅದರೆ ಇನ್ನೂ ತುರ್ತು ಕ್ರಮಗಳನ್ನು ಕೈಗೊಂಡಿದ್ದರೆ ಮತ್ತಷ್ಟು ಸಾವು-ನೋವನ್ನು ತಪ್ಪಿಸಬಹುದಿತ್ತು ಎಂದು ಅಭಿಪ್ರಾಯಗಳೂ ಕೇಳಿಬರುತ್ತಿದೆ.

ಚೀನ ಕೈಗೊಂಡ ಕ್ರಮಗಳೇನು?
ಸೋಂಕು ತಗುಲಿದ ರೋಗಿಗಳಿಗೆ ವ್ಯವಸ್ಥಿತ ರೀತಿಯಲ್ಲಿ ಚಿಕಿತ್ಸೆ ನೀಡುವ ಜತೆಗೆ ಸೋಂಕು ಹರಡಿದ ಪ್ರದೇಶದಿಂದ ಮತ್ತೂಂದು ಭಾಗಕ್ಕೆ ಸೋಂಕು ಹರಡದಂತೆ ಚೀನ ಎಚ್ಚರಿಕೆ ವಹಿಸಿತ್ತು. ವುಹಾನ್‌ ಪ್ರಾಂತ್ಯದಲಿ ಸೋಂಕಿತರನ್ನು ಒಂದೆಡೆ ಚಿಕಿತ್ಸೆಗೆ ರವಾನಿಸಲಾಗಿತ್ತು. ಸೋಂಕು ತಗುಲುವ ಭೀತಿ ಉಳ್ಳ ಜನರಿಗೆ ಕಡ್ಡಾಯ ಗೃಹ ಬಂಧನ, ಪ್ರತ್ಯೇಕ ಸ್ಥಳಗಳಲ್ಲಿ ದಿಗ್ಬಂಧನ ವಿಧಿಸಲಾಗಿತ್ತು. ತಪ್ಪಿಸಿಕೊಳ್ಳಲು ಯತ್ನಿಸುವವರನ್ನು ತಡೆಯಲು ಅಪಾರ ಪ್ರಮಾಣದಲ್ಲಿ ಭದ್ರತಾ ಪಡೆ ನಿಯೋಜಿಸಲಾಗಿತ್ತು. ಸೋಂಕಿತರನ್ನು ಪತ್ತೆ ಹಚ್ಚಲು ದೊಡ್ಡ ದೊಡ್ಡ ತಂಡಗಳನ್ನು ರಚನೆ ಮಾಡಿ ದೇಶಾದ್ಯಂತ ಕಾರ್ಯಾಚರಿಸಲಾಗಿತ್ತು.

ವಿಜ್ಞಾನಿಗಳ ತಂಡ ಚೀನಾದ್ಯಂತ ಸಮೀಕ್ಷೆ ನಡೆಸಿತು. ಈ ವೇಳೆ. ಹೊಸ ಕೋವಿಡ್‌ 19 ವೈರಸ್‌ ಪತ್ತೆ ಪ್ರಕರಣಗಳು ಕ್ಷೀಣಿಸಿದ್ದವು. ಲಕ್ಷಾಂತರ ಮಂದಿಯಿರುವ ಸ್ಥಳವನ್ನೇ ದಿಗ್ಬಂಧನಕ್ಕೆ ತಲ್ಲಿತ್ತು. ಹುಬೈ ಪ್ರಾಂತ್ಯವೊಂದರÇÉೇ ಅಂದಾಜು 5 ಕೋಟಿ ಜನರನ್ನು ದಿಗ್ಬಂಧನದಲ್ಲಿ ವಿಧಿಸಲಾಗಿದ್ದು, ಯಾರಾದ್ರೂ ತಪ್ಪಿಸಿಕೊಳ್ಳಲು ಯತ್ನಿಸಿದರೆ, ಅವರ ಬಗ್ಗೆ ಮಾಹಿತಿ ನೀಡಿದವರಿಗೆ ನಗದು ಬಹುಮಾನ ನೀಡುವ ವ್ಯವಸ್ಥೆಯನ್ನೂ ಪರಿಚಯಿಸಲಾಗಿದೆ. ಪ್ರವಾಸಿಗರಿಗೆ, ಸ್ವದೇಶದ ಪ್ರಜೆಗಳಿಗೆ ಭಾರೀ ಪ್ರಮಾಣದ ತಪಾಸಣೆಗಳನ್ನು ಕೈಗೊಳ್ಳಲಾಗಿದೆ.

ಗುಟ್ಟಾಗಿಟ್ಟ ಚೀನ
ಕೆಲವೊಂದು ಸೂಕ್ಷ್ಮ ವಿಚಾರಗಳನ್ನು ಚೀನ ಯಾರಿಗೂ ಬಿಟ್ಟುಕೊಟ್ಟಿಲ್ಲ. ಚೀನದೊಳಗೆ ಘಟನಾವಳಿಗಳ ಮಾಹಿತಿ ಬಾಹ್ಯ ಪ್ರಪಂಚಕ್ಕೆ ಸಿಗೋದೇ ಕಷ್ಟ. ಹೀಗಾಗಿ, ಇಂಚಿಂಚೂ ಮಾಹಿತಿ ಸಂಗ್ರಹಿಸೋದು ಕಷ್ಟವೇ ಸರಿ. ಆದ್ರೂ ಚೀನ ಕೈಗೊಂಡ ಸಮರೋಪಾದಿ ತುರ್ತು ಕ್ರಮಗಳು, ಆ ದೇಶವನ್ನು ಇದೀಗ ವೈರಸ್‌ ಮುಕ್ತ ಮಾಡುವತ್ತ ಸಾಗುವಂತೆ ಮಾಡಿದೆ.

Advertisement

Udayavani is now on Telegram. Click here to join our channel and stay updated with the latest news.

Next