Advertisement

Arunachal Pradesh; ಸಮುದ್ರ ತಳದಲ್ಲೂ ಹೆಸರು ಬದಲಿಸಿದ ಚೀನ

12:40 AM Apr 18, 2023 | Team Udayavani |

ಬೀಜಿಂಗ್‌:ಇತ್ತೀಚೆಗೆ ಭಾರತದ ಅವಿಭಾಜ್ಯ ಅಂಗ ಅರುಣಾಚಲ ಪ್ರದೇಶದ ಹೆಸರುಗಳನ್ನು ಬದಲಿಸಿ, ಕುತ್ಸಿತ ಬುದ್ಧಿ ಪ್ರದರ್ಶಿಸಿದ್ದ ಚೀನಾ ಮತ್ತೊಂದು ದುಃಸ್ಸಾಹಸ ಪ್ರದರ್ಶಿಸಿದೆ. ಹಿಂದೂ ಮಹಾಸಾಗರದಲ್ಲಿ ಉದ್ಧಟತನ ಮುಂದುವರಿಸಿದೆ.

Advertisement

ಭಾರತದ ಪಯಾರ್ಯ ದ್ವೀಪದಿಂದ 2 ಸಾವಿರ ಕಿಮೀ ಅಂತದಲ್ಲಿರುವ ಸಾಗರದ ತಳ ಪ್ರದೇಶದ ಖನಿಜ ಸಂಪನ್ಮೂಲಗಳ ಭಾಗವನ್ನು ತನ್ನದೆಂದು ಬಿಂಬಿಸುವಂತೆ ಅವುಗಳ ಹೆಸರು ಬದಲಾಯಿಸಿದೆ.

ಖನಿಜ ಸಂಪನ್ಮೂಲಗಳ ಅನ್ವೇಷಣೆಗಾಗಿ 2011ರಲ್ಲಿ ಅಂತಾರಾಷ್ಟ್ರೀಯ ಸೀ ಬೆಡ್‌ ಅಥಾರಿಟಿಯಿಂದ ಸಮುದ್ರ ತಳದ ಕೆಲಭಾಗಗಳನ್ನು ಚೀನ 15 ವರ್ಷಗಳ ಕಾಲ ಗುತ್ತಿಗೆ ಪಡೆದಿತ್ತು. ಇದೀಗ ಗುತ್ತಿಗೆ ಅವಧಿ ಮುಗಿಯುವ ಮುನ್ನವೇ ತನಗೆ ಗುತ್ತಿಗೆ ನೀಡಿರದ ಪ್ರದೇಶಗಳನ್ನೂ ಸೇರಿಸಿ ಒಟ್ಟು 19 ಸಾಗರತಳದ ಪ್ರದೇಶಗಳ ಹೆಸರು ಬದಲಿಸಿದೆ.

ಗಮನಾರ್ಹ ಅಂಶವೆಂದರೆ ಚೀನಾ ಗುತ್ತಿಗೆ ಪಡೆದಿದ್ದ ಸ್ಥಳದಿಂದ ಉತ್ತರ ಭಾಗದಲ್ಲಿ ಭಾರತ ಕೂಡ ಇದೇ ಉದ್ದೇಶಕ್ಕೆ ಗುತ್ತಿಗೆಯನ್ನು ಪಡೆದುಕೊಂಡಿತ್ತು. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಕೇಂದ್ರ ಸರ್ಕಾರದ ಹಿರಿಯ ಅಧಿಕಾರಿ “ಸಮುದ್ರ ತಳದ ಹೆಸರು ಬದಲಿಸುವ ಚೀನಾದ ನಿಲುವು 19ನೇ ಶತಮಾನದ ಬ್ರಿಟಿಷ್‌ ಸಾಮ್ರಾಜ್ಯ ಶಾಹಿಯ ನಿಲುವು ಪ್ರದರ್ಶಿಸಿದಂತೆ ಆಗಿದೆ’ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next