ಹೊಸದಿಲ್ಲಿ: ಭಾರತದ ಜತೆಗೆ ಚೀನ ಹೊಸತೊಂದು ಕ್ಯಾತೆ ತೆಗೆದಿದೆ. ಟೆಬೆಟಿಯನ್ ಸಂಸದರು ಆಯೋಜಿಸಿದ್ದ ಔತಣಕೂಟಕ್ಕೆ ದೇಶದ ಸಂಸದರು ತೆರಳಿದ್ದು, ಚೀನ ಸಿಟ್ಟಾಗಿದೆ.
ಹೊಸದಿಲ್ಲಿಯಲ್ಲಿ ಆಯೋಜಿಸಿದ್ದ ಔತಣ ಕೂಟದಲ್ಲಿ ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್, ರಾಜ್ಯಸಭಾ ಸದಸ್ಯ ಕೆ.ಸಿ.ರಾಮಮೂರ್ತಿ, ಬಿಜೆಪಿ ನಾಯಕಿ ಮನೇಕಾ ಗಾಂಧಿ, ಕಾಂಗ್ರೆಸ್ ಸಂಸದರಾದ ಜೈರಾಮ್ ರಮೇಶ್, ಮನೀಷ್ ತಿವಾರಿ, ಬಿಜೆಡಿಯ ಸುಜೀತ್ ಕುಮಾರ್ ಭಾಗವಹಿಸಿದ್ದರು.
ಅದಕ್ಕೆ ಹೊಸದಿಲ್ಲಿಯಲ್ಲಿರುವ ಚೀನ ರಾಯಭಾರ ಕಚೇರಿಯ ಕಿರಿಯ ಅಧಿಕಾರಿ ಆರೂ ಮಂದಿ ಸಂಸದರಿಗೆ ಪತ್ರ ಬರೆದು ಆಕ್ಷೇಪಿಸಿದ್ದಾರೆ.
ಸಂಸದರ ಭೇಟಿಯಿಂದಾಗಿ ಭಾರತ ಮತ್ತು ಚೀನ ನಡುವಿನ ರಾಜತಾಂತ್ರಿಕ ಬಾಂಧವ್ಯಕ್ಕೆ ಧಕ್ಕೆ ಬರಲಿದೆ ಎಂದಿದ್ದಾರೆ. ಇಂಥ ಪತ್ರ ಬರೆ ಯುವ ಮೂಲಕ ಚೀನ ರಾಜತಾಂತ್ರಿಕ ನಡೆಯನ್ನೇ ಉಲ್ಲಂ ಸಿದೆ. ಈ ಬಗ್ಗೆ “ದ ಇಂಡಿಯನ್ ಎಕ್ಸ್‌ಪ್ರೆಸ್’ ಗೆ ಪ್ರತಿಕ್ರಿಯೆ ನೀಡಿದ ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ “ಇಂಡೋ- ಟೆಬೆಟಿ ಯನ್ ಸಂಸದೀಯ ವೇದಿಕೆಯ ಸದಸ್ಯ ನಾ ಗಿದ್ದೇನೆ. ನಾನು ಔತಣ ಕೂಟದಲ್ಲಿ ಭಾಗವಹಿಸಿದ್ದೆ’ ಎಂದರು. ಕಾಂಗ್ರೆಸ್‌ನ ಜೈರಾಮ್ ರಮೇಶ್ ಕೂಡ ಪತ್ರ ಬಂದಿರುವುದನ್ನು ಖಚಿತಪಡಿಸಿದ್ದಾರೆ.
ಇದನ್ನೂ ಓದಿ:ಪ್ರವಾಹ ಪರಿಹಾರ ತಕ್ಷಣ ಬಿಡುಗಡೆ: ಕಾರಜೋಳ
ಕೇಂದ್ರ ಟೀಕೆ: ಅರುಣಾಚಲ ಪ್ರದೇಶದ ಕೆಲವು ಪ್ರದೇಶಗಳ ಹೆಸರು ಬದಲಾಯಿಸಿದ್ದಕ್ಕೆ ವಿದೇಶಾಂಗ ಸಚಿವಾಲಯ ಆಕ್ಷೇಪಿಸಿದೆ. ಅರುಣಾಚಲ ಪ್ರದೇಶ ಯಾವತ್ತೂ ಭಾರತದ್ದೇ. ಹೆಸರು ಬದಲಿಸುವುದರಿಂದ ಯಥಾಸ್ಥಿತಿ ಬದಲಾ ಗುವುದಿಲ್ಲ ಎಂದು ವಕ್ತಾರ ಅರಿಂದಂ ಬಗಚಿ ಟೀಕಿಸಿದ್ದಾರೆ.