Advertisement

Ramzan Fasting ಚೀನಾದಲ್ಲಿ ರಂಜಾನ್‌ ಉಪವಾಸಕ್ಕೆ ನಿರ್ಬಂಧ

11:42 PM Apr 13, 2023 | Team Udayavani |

ಬೀಜಿಂಗ್‌: ಉಯಿಘರ್‌ ಮುಸ್ಲಿಂ ಸಮುದಾಯದ ವಿರುದ್ಧ ಈ ಹಿಂದಿನಿಂದಲೂ ದೌರ್ಜನ್ಯ ಎಸಗುತ್ತಲೇ ಇರುವ ಚೀನಾ, ಈ ಬಾರಿ ಅವರು ರಂಜಾನ್‌ ಉಪವಾಸ ಮಾಡದಂತೆ ನಿರ್ಬಂಧಿಸಿದೆ.

Advertisement

ಅಲ್ಲದೇ ಈ ನಿಯಮಗಳನ್ನು ಮೀರುವವರ ಬಗ್ಗೆ ಮಾಹಿತಿ ನೀಡಲು ಗೂಢಚಾರರನ್ನು ನೇಮಿಸಿದೆ. ರೇಡಿಯೋ ಫ್ರೀ ಏಷ್ಯಾ ಸುದ್ದಿ ಸಂಸ್ಥೆ ಈ ಕುರಿತಂತೆ ವರದಿ ಮಾಡಿದೆ. ಆ ಪ್ರಕಾರ, ಉಯಿಘರ್‌ ಮುಸಲ್ಮಾನರ ಸಾಂಸ್ಕೃತಿಕ-­ಧಾರ್ಮಿಕ ಅಸ್ತಿಣ್ತೀಗಳನ್ನೇ ನಾಶಗೊಳಿಸಲು ಚೀನಾ ಆಡಳಿತ 2017ರಿಂದಲೇ ರಂಜಾನ್‌ ಉಪವಾಸಕ್ಕೆ ನಿರ್ಬಂಧ ಹೇರಿತ್ತು. ನಂತರ 2020-21ರ ಅವಧಿಯಲ್ಲಿ 60 ವರ್ಷ ಮೇಲ್ಪಟ್ಟ ಮುಸಲ್ಮಾನರಿಗೆ ಮಾತ್ರ ಆಚರಣೆಗೆ ಅವಕಾಶ ನೀಡಿತ್ತು. ಆದರೆ, ಈ ಬಾರಿ ಎಲ್ಲರಿಗೂ ನಿರ್ಬಂಧ ವಿಧಿಸಿದೆ. ಜತೆಗೆ ನಿಯಮ ಉಲ್ಲಂ ಸಿದರೆ ಅಂಥವರ ಬಗ್ಗೆ ಮಾಹಿತಿ ನೀಡಲು ಸ್ಥಳೀಯರು, ಪೊಲೀಸರು ಹಾಗೂ ಉಯಿಘರ್‌ ಸಮುದಾಯದ ಕೆಲ ಮಂದಿಯನ್ನೇ ಬೇಹುಗಾರಿಕೆಗೆ ನೇಮಿಸಿದೆ ಎಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next