ಶಾಂಘೈ: ದೇಶದ ಸೈನಿಕರನ್ನು ಅಪಹಾಸ್ಯ ಮಾಡುವುದರಿಂದ ಅದು ಸಮಾಜಕ್ಕೆ ಹಾನಿಯನ್ನು ಉಂಟು ಮಾಡುತ್ತದೆ ಎಂದು ಆರೋಪಿಸಿ ಚೀನಾ ಇತ್ತೀಚೆಗೆ ಪ್ರಸಿದ್ಧ ಹಾಸ್ಯ ಸಂಸ್ಥೆಗೆ 2.13 (21.3 ಲಕ್ಷ ರೂಪಾಯಿ) ಮಿಲಿಯನ್ ಡಾಲರ್ ದಂಡ ವಿಧಿಸುವ ಮೂಲಕ ಕಪಾಳಮೋಕ್ಷ ಮಾಡಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ:ಧೋನಿ ಪಡೆಗೆ ಡೆಲ್ಲಿ ಸವಾಲು: ಗೆಲ್ಲಲೇಬೇಕಾದ ಪಂದ್ಯದಲ್ಲಿ ಟಾಸ್ ಗೆದ್ದ ಚೆನ್ನೈ
ಚೀನಾದ ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಬ್ಯುರೋ ಸಚಿವಾಲಯದ ಬೀಜಿಂಗ್ ನ ಶಸ್ತ್ರಾಸ್ತ್ರ ವಿಭಾಗ ಶಾಂಘೈ ಕ್ಸಿಯಾಗುವೋ ಕಲ್ಚರ್ ಮೀಡಿಯಾ ಕಂಪನಿಗೆ 13.35 ಮಿಲಿಯನ್ ಯುವಾನ್ ದಂಡ ವಿಧಿಸಿದ್ದು, ನಿಯಮವನ್ನು ಉಲ್ಲಂಘಿಸಿರುವ ಸಂಸ್ಥೆಯ ಅಕ್ರಮ ಲಾಭದ ಮೂಲಕ 1.35 ಮಿಲಿಯನ್ ಯುವಾನ್ ಹಣವನ್ನು ಜಪ್ತಿ ಮಾಡಿಕೊಳ್ಳಲಾಗಿದೆ ಎಂದು ವರದಿ ವಿವರಿಸಿದೆ.
ಸ್ಟ್ಯಾಂಡ್ ಅಪ್ ಕಾಮಿಡಿಯಂತಹ ಪ್ರದರ್ಶನಗಳು ಹೆಚ್ಚು ಜನಪ್ರಿಯವಾಗಿರುವುದರಿಂದ ಹಾಸ್ಯ ಚಟಾಕಿ ಸಮಾಜದ ಮೇಲೆ ಯಾವ ರೀತಿ ಪರಿಣಾಮ ಬೀರಲಿದೆ ಎಂಬ ಬಗ್ಗೆ ಚೀನಾದಲ್ಲಿ ಸಾರ್ವಜನಿಕ ಚರ್ಚೆಯನ್ನು ಹುಟ್ಟು ಹಾಕಲು ಕಾರಣವಾಗಿದೆ.
ಜೋಕ್ ಗಳು ಸಮಾಜವಾದಿ ಮೌಲ್ಯಗಳನ್ನು ಉತ್ತೇಜಿಸಬೇಕು ಎಂದು ಚೀನಾದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇತ್ತೀಚೆಗೆ ಚೀನಾದ ಬೀಜಿಂಗ್ ನಲ್ಲಿ ನಡೆದ ಲೈವ್ ಸ್ಟ್ಯಾಂಡ್ ಅಪ್ ಪ್ರದರ್ಶನದಲ್ಲಿ ಪ್ರದರ್ಶನಗೊಂಡಿದ್ದ ಹಾಸ್ಯದ ತುಣಕನ್ನು ಆನ್ ಲೈನ್ ನಲ್ಲಿ ಪೋಸ್ಟ್ ಮಾಡಿದ್ದ ನಂತರ ಚೀನಾದ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು, ಇದು ಚೀನಾದ ಪೀಪಲ್ಸ್ ಲಿಬರೇಶನ್ ಆರ್ಮಿಗೆ ಮುಖಭಂಗವನ್ನುಂಟು ಮಾಡಿತ್ತು ಎಂದು ವರದಿ ವಿವರಿಸಿದೆ.
ಪಿಎಲ್ ಎ ಕಾರ್ಯವೈಖರಿಯನ್ನು ಅಪಪ್ರಚಾರ ಮಾಡಲು ಯಾವುದೇ ಕಂಪನಿ ಅಥವಾ ವ್ಯಕ್ತಿಗೆ ಚೀನಾ ವೇದಿಕೆಯನ್ನಾಗಿ ಮಾಡಿಕೊಳ್ಳಲು ಅನುಮತಿ ನೀಡುವುದಿಲ್ಲ ಎಂದು ಚೀನಾದ ಸಾಂಸ್ಕೃತಿಕ ಬ್ಯುರೋ ತಿಳಿಸಿದೆ.