Advertisement

ಬ್ಯಾಡ್ಮಿಂಟನ್‌ಗೆ “ಸೂಪರ್‌ ಡಾನ್‌’ಗುಡ್‌ಬೈ

01:15 AM Jul 05, 2020 | Sriram |

ಬೀಜಿಂಗ್‌: ಚೀನದ ಬ್ಯಾಡ್ಮಿಂಟನ್‌ ಲೆಜೆಂಡ್‌, ಎರಡು ಬಾರಿಯ ಒಲಿಂಪಿಕ್‌ ಚಾಂಪಿಯನ್‌, “ಸೂಪರ್‌ ಡಾನ್‌’ ಖ್ಯಾತಿಯ ಲಿನ್‌ ಡಾನ್‌ ಶನಿವಾರ ನಿವೃತ್ತಿ ಘೋಷಿಸಿದರು.

Advertisement

ಇದರೊಂದಿಗೆ ಮುಂದಿನ ವರ್ಷದ ಒಲಿಂಪಿಕ್‌ ಕ್ರೀಡಾಕೂಟದಲ್ಲಿ ಭಾಗವಹಿಸಲು ತನಗೆ ಆಸಕ್ತಿ ಇಲ್ಲ ಎಂಬುದನ್ನು ಅವರು ಸಾರಿದಂತಾಯಿತು.

37 ವರ್ಷದ ಲಿನ್‌ ಡಾನ್‌ 2008ರ ತವರಿನ ಬೀಜಿಂಗ್‌ ಹಾಗೂ 2012ರ ಲಂಡನ್‌ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಜಯಿಸಿದ್ದರು.

ಧಾರಾಳ ತೃಪ್ತಿ ಸಿಕ್ಕಿದೆ
“ಇಂದು ನಾನು ಸ್ಪರ್ಧಾತ್ಮಕ ಕ್ರೀಡಾ ಬದುಕಿನಿಂದ ದೂರ ಸರಿಯಲು ನಿರ್ಧರಿಸಿದ್ದೇನೆ. ಇಷ್ಟು ವರ್ಷಗಳ ಕಾಲ ನನ್ನ ಸಾಧನೆ ಹಾಗೂ ವೈಫಲ್ಯದ ಸಂದರ್ಭಗಳೆರಡರಲ್ಲೂ ಬೆಂಬಲ ನೀಡಿದ ನನ್ನ ಕುಟುಂಬಕ್ಕೆ, ತರಬೇತುದಾರರಿಗೆ, ತಂಡದ ಆಟಗಾರಿಗೆ ಮತ್ತು ಅಭಿಮಾನಿಗಳಿಗೆ ಧನ್ಯವಾದಗಳು’ ಎಂಬುದಾಗಿ ಚೀನದ ಟ್ವಿಟರ್‌ “ವೀಬೋ’ದಲ್ಲಿ ಪೋಸ್ಟ್‌ ಮಾಡಿದ್ದಾರೆ.

“ನಾನು ಅತಿಯಾಗಿ ಪ್ರೀತಿಸಿದ ಕ್ರೀಡೆಗೆ ನಿಷ್ಠಾವಂತನಾಗಿ ದುಡಿದೆ, ಎಲ್ಲವನ್ನೂ ಸಮರ್ಪಿಸಿದೆ. ಧಾರಾಳ ತೃಪ್ತಿಯೂ ಸಿಕ್ಕಿದೆ…’ ಎಂದು ಲಿನ್‌ ಡಾನ್‌ ಹೇಳಿದರು.

Advertisement

“ನನಗೀಗ 37 ವರ್ಷ ವಯಸ್ಸು. ದೈಹಿಕ ಕ್ಷಮತೆ ಜತೆ ಹೋರಾಡಲು ಇನ್ನು ಸಾಧ್ಯವಿಲ್ಲ. ಹೀಗಾಗಿ ಟೋಕಿಯೊದಲ್ಲಿ ಮೂರನೇ ಚಿನ್ನಕ್ಕೆ ಗುರಿ ಇಡುವ ಯಾವುದೇ ಯೋಜನೆ ನನ್ನಲಿಲ್ಲ…’ ಎಂದು ಸ್ಪಷ್ಟಪಡಿಸಿದರು.

ಲಿನ್‌ ಡಾನ್‌ ಸಾಧನೆ
-ಒಲಿಂಪಿಕ್ಸ್‌: 2 ಚಿನ್ನ
– ವಿಶ್ವ ಚಾಂಪಿಯನ್‌ಶಿಪ್‌: 5 ಚಿನ್ನ, 2 ಬೆಳ್ಳಿ
– ವಿಶ್ವಕಪ್‌: 2 ಚಿನ್ನ
– ಸುದಿರ್ಮನ್‌ ಕಪ್‌: 5 ಚಿನ್ನ, 1 ಬೆಳ್ಳಿ
– ಥಾಮಸ್‌ ಕಪ್‌: 6 ಚಿನ್ನ, 2 ಕಂಚು
– ಏಶ್ಯನ್‌ ಗೇಮ್ಸ್‌: 5 ಚಿನ್ನ, 2 ಬೆಳ್ಳಿ, 3 ಕಂಚು
-ವಿಶ್ವ ಜೂನಿಯರ್‌ ಚಾಂಪಿಯನ್‌ಶಿಪ್‌: 1 ಚಿನ್ನ, 1 ಕಂಚು
-ಏಶ್ಯನ್‌ ಜೂ.ಚಾಂಪಿಯನ್‌ಶಿಪ್‌:2 ಚಿನ್ನ, 1 ಕಂಚು

Advertisement

Udayavani is now on Telegram. Click here to join our channel and stay updated with the latest news.

Next