Advertisement

ಚಿಂಗಾರಿ ಹವಾ!:ಚೀನಾ Appsಗೆ ಪರ್ಯಾಯವಾಗಿ ಬಳಸಬಹುದಾದ ಅಪ್ಲಿಕೇಶನ್ ಬಗ್ಗೆ ತಿಳಿದಿರಲಿ

05:02 PM Jun 23, 2020 | Mithun PG |

ಭಾರತದಾದ್ಯಂತ ಇದೀಗ ಬಾಯ್ ಕಾಟ್ ಚೀನಾ ಕೂಗು ಮೇಳೈಸುತ್ತಿದೆ. ಗಾಲ್ವಾನ್ ಕಣಿವೆಯಲ್ಲಿ ನಡೆದ ಸಂಘರ್ಷದಲ್ಲಿ ಭಾರತೀಯ ಯೋಧರು ಹುತಾತ್ಮರಾದ ನಂತರ ದೇಶದಲ್ಲಿ ಚೀನಾ ಉತ್ಪನ್ನಗಳ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ. ಚೀನಿ ಆ್ಯಪ್ ಗಳನ್ನು ಜನರು ನಿರಂತರವಾಗಿ ಆನ್ ಇನ್ ಸ್ಟಾಲ್ ಮಾಡುತ್ತಿದ್ದಾರೆ. ಪರಿಣಾಮವೆಂಬಂತೆ ಹಲವು  ದೇಶಿ ಆ್ಯಪ್ ಗಳು ಇದೀಗ ಮುನ್ನೆಲೆಗೆ ಬರುತ್ತಿದೆ.

Advertisement

ಪ್ರಪಂಚದ ಹಲವೆಡೆ ಟಿಕ್ ಟಾಕ್ ಅತ್ಯಂತ ಜನಪ್ರಿಯ ಆ್ಯಪ್. ಕೋಟ್ಯಾಂತರ ಜನರು ಈ ಆ್ಯಪ್ ಬಳಸುತ್ತಿದ್ದು,  ಆದರೇ ಇದು ಚೀನಾ ಆ್ಯಪ್ ಆದ್ದರಿಂದ ಅನ್ ಇನ್ ಸ್ಟಾಲ್ ಮಾಡುವವರ ಸಂಖ್ಯೆ ಕೂಡ ಹೆಚ್ಚಿದೆ.

ಹೀಗಾಗಿ ಈ ಆ್ಯಪ್ ಗೆ ಪರ್ಯಾಯವಾಗಿ ಬಂದ ಬೆಂಗಳೂರು ಮೂಲದ ಚಿಂಗಾರಿ ಆ್ಯಪ್ ಭಾರೀ ಜನಪ್ರಿಯತೆ ಪಡೆಯುತ್ತಿದೆ. ಮಾತ್ರವಲ್ಲದೆ 72 ಗಂಟೆಗಳಲ್ಲಿ ಐದು ಲಕ್ಷಕ್ಕೂ ಅಧಿಕ ಮಂದಿ ಡೌನ್ ಲೋಡ್ ಮಾಡಿಕೊಂಡಿದ್ದಾರೆ. ಈ ಚಿಂಗಾರಿ ಆಡಿಯೋ ವಿಡಿಯೋ ಅಪ್ಲಿಕೇಷನ್‌ ಅನ್ನು 2019ರಲ್ಲಿ ಅಭಿವೃದ್ಧಿಪಡಿಸಲಾಗಿತ್ತು.

ಚಿಂಗಾರಿ ಎಂಬುದು ವಿಡಿಯೋ ಶೇರಿಂಗ್ ಆ್ಯಪ್ ಆಗಿದ್ದು, ಬಳಕೆದಾರರಿಗೆ ವಿಡಿಯೋಗಳನ್ನು ಅಪ್ಲೋಡ್ ಮತ್ತು ಡೌನ್ ಲೋಡ್ ಮಾಡಲು ಸಹಾಯಕವಾಗುತ್ತದೆ. ಮಾತ್ರವಲ್ಲದೆ ಸ್ನೇಹಿತರೊಂದಿಗೆ ಸಂವಹನ ನಡೆಸಲು, ಮಾಹಿತಿ ಹಂಚಿಕೊಳ್ಳಲು ಕೂಡ ನೆರವಾಗುತ್ತದೆ. ವಾಟ್ಸಾಪ್ ಸ್ಟೇಟಸ್ ಗೆ ಬೇಕಾದ ವಿಡಿಯೋಗಳು, ಅಡಿಯೋ ತುಣುಕುಗಳು, ಜಿಫ್ ಫೈಲ್ ಗಳು, ಪೋಟೋಗಳನ್ನು ಚಿಂಗಾರಿಯ ಮೂಲಕ ಪಡೆಯಲು ಅವಕಾಶಗಳಿವೆ. ವಿಡಿಯೋವೊಂದು ಹೆಚ್ಚು ವೈರಲ್ ಆದಂತೆ ಅದನ್ನು ಪೋಸ್ಟ್ ಮಾಡಿದವರಿಗೆ ಚಿಂಗಾರಿ ಹಣವನ್ನೂ ನೀಡುತ್ತದೆ. ವಿಡಿಯೋದ ವೀಕ್ಷಣೆಗೆ ತಕ್ಕಂತೆ ಅಂಕಗಳನ್ನು ನೀಡಲಾಗುತ್ತದೆ. ಅದನ್ನು ಹಣವಾಗಿಸಿ ಪರಿವರ್ತಿಸಿಕೊಳ್ಳಬಹುದು.

Advertisement

ಪ್ರಮುಖವಾಗಿ ಹಿಂದಿ, ಬಾಂಗ್ಲಾ, ಗುಜರಾತಿ, ಮರಾಠಿ, ಕನ್ನಡ, ಪಂಜಾಬಿ, ಮಲಯಾಳಂ, ತಮಿಳು ಮತ್ತು ತೆಲುಗು ಭಾಷೆಯಲ್ಲಿ ಲಭ್ಯವಿದೆ. ಸದ್ಯ ಈ ಆ್ಯಪ್ ದಿನನಿತ್ಯ ತನ್ನ ಬಳಕೆದಾರರನ್ನು ಹೆಚ್ಚಿಸಿಕೊಳ್ಳುತ್ತಿದೆ.  ಮಾತ್ರವಲ್ಲದೆ ಗೂಗಲ್ ಟ್ರೆಂಡಿಂಗ್ ಚಾರ್ಟ್ ನಲ್ಲೂ ಕಾಣಿಸಿಕೊಂಡಿದೆ. ಈ ಅಪ್ಲಿಕೇಶನ್ ಅನ್ನು ಬಿಸ್ವಾತ್ಮ ನಾಯಕ್ ಮತ್ತು ಸಿದ್ದಾರ್ಥ್ ಗೌತಮ್  ಎಂಬಿಬ್ಬರು ಅಭಿವೃದ್ದಿಪಡಿಸಿದ್ದಾರೆ.

ದೇಶದ ಬಳಕೆದಾರರು ಚೀನಿ ಸೋಷಿಯಲ್ ಮೀಡಿಯಾ ಅಪ್ಲಿಕೇಶನ್ ಗಳನ್ನು ಬಹಿಷ್ಕರಿಸಸಲು ಮುಂದಾಗಿರುವುದರಿಂದ ಮೇಡ್ ಇನ್ ಇಂಡಿಯಾ ಅಪ್ಲಿಕೇಶನ್ ಗಳು ಜನಪ್ರಿಯತೆ ಗಳಿಸುತ್ತಿದೆ. ಚಿಂಗಾರಿಯ ಬೇಡಿಕೆ ಗೂಗಲ್ ಪ್ಲೇ ಸ್ಟೋರ್ ನಲ್ಲಿ ಪ್ರಥಮ ಸ್ಥಾನದಲ್ಲಿದೆ. ಅಲ್ಲದೆ ಟಿಕ್ ಟಾಕ್ ಆ್ಯಪ್ ನ ತದ್ರೂಪವಾಗಿದ್ದ ಮಿತ್ರಾನ್ ಅಪ್ಲಿಕೇಶನ್  ಅನ್ನು  ಮೀರಿಸಿದೆ ಎಂದು ಡೆವಲಪರ್ಸ್ ತಿಳಿಸಿದ್ದಾರೆ.

ಮತ್ತೊಂದೆಡೆ ಜೂಮ್ ಆ್ಯಪ್ ಗೆ ಪರ್ಯಾಯವಾಗಿ ಭಾರತದಲ್ಲಿ ಸೇ ನಮಸ್ತೆ ಆ್ಯಪ್‘ ಬಂದಿದೆ. ಲಾಕ್ ಡೌನ್ ಆದ ನಂತರ ಏಕಾಏಕಿ ಜನಪ್ರಿಯವಾದ ಜೂಮ್ ಆ್ಯಪ್ 200 ಮಿಲಿಯನ್ ಗಿಂತಲೂ ಹೆಚ್ಚು ಡೌನ್ ಲೋಡ್ ಕಂಡಿತ್ತು. ಆದರೆ ಕೇಂದ್ರ ಗೃಹ ಸಚಿವಾಲಯ ಈ ಆ್ಯಪ್ ಭದ್ರತಾ ವೈಪಲ್ಯಗಳಿಂದ ಕೂಡಿದೆ ಎಂದ ಬೆನ್ನಲ್ಲೇ  ‘ಸೇ ನಮಸ್ತೆ ಆ್ಯಪ್’ ಮುನ್ನೆಲೆಗೆ ಬಂದಿದೆ.  ಮುಂಬೈ ಮೂಲದ ಮೂಲದ ಡೆವಲಪರ್ ಗಳು ಈ ಆ್ಯಪ್ ಅಭಿವೃದ್ಧಿಪಡಿಸಿದ್ದಾರೆ. ಇದೊಂದು ಸುರಕ್ಷಿತ ಆಡಿಯೋ ಮತ್ತು ವಿಡಿಯೋ ಕಾನ್ಫರೆನ್ಸಿಂಗ್ ಆ್ಯಪ್ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಚೀನಾ ಆ್ಯಪ್ ಗಳಿಗೆ ಪರ್ಯಾಯ ಅಪ್ಲಿಕೇಶನ್ ಗಳು.

  • ಪಬ್ ಜಿ ಗೆ ಪರ್ಯಾಯವಾಗಿ ಕಾಲ್ ಆಫ್ ಡ್ಯೂಟಿ, ಗರೇನಾ ಫ್ರೀ ಪೈರ್, ಫೋರ್ಟ್ ನೈಟ್ ಬಳಸಬಹುದು.
  • ಹಲೋ ಆ್ಯಪ್ ಪರ್ಯಾಯವಾಗಿ ಶೇರ್ ಚಾಟ್
  • ಶೇರ್ ಇಟ್, ಜೆಂಡರ್ ಬದಲಾಗಿ ಗೂಗಲ್ ಫೈಲ್ಸ್
  • ಯುಸಿ ಬ್ರೌಸರ್ ಬದಲಾಗಿ ಗೂಗಲ್ ಕ್ರೋಮ್, ಜಿಯೋ ಬ್ರೌಸರ್
  • ಕ್ಯಾಮ್ ಸ್ಕ್ಯಾನರ್ ಗೆ ಬದಲಾಗಿ ಆಡೋಬ್ ಸ್ಕ್ಯಾನ್, ಮೈಕ್ರೋ ಸಾಫ್ಟ್ ಲೆನ್ಸ್ ಬಳಸಬಹುದು.
  • ಬ್ಯೂಟಿ ಪ್ಲಸ್ ಗೆ ಪರ್ಯಾಯ ಬಿ612 ಬ್ಯೂಟಿ, ಫಿಲ್ಟರ್ ಕ್ಯಾಮರ, ಕ್ಯಾಂಡಿ ಕ್ಯಾಮರ, ಸೆಲ್ಫಿ ಕ್ಯಾಮರ ಉಪಯೋಗಸಬಹುದು.
  • ಕ್ಲಬ್ ಫ್ಯಾಕ್ಟರಿ, ಶೀನ್ ಗೆ ಬದಲಾಗಿ ಫ್ಲಿಫ್ ಕಾರ್ಟ್, ಅಮೇಜಾನ್ ಇಂಡಿಯಾ, ಕೂವ್ಸ್ ಉಪಯೋಗಿಸಬಹುದು.
  • ಆ್ಯಪ್ ಲಾಕ್ ಗೆ ಪರ್ಯಾಯ ನೋರ್ಟನ್ ಆ್ಯಪ್ ಲಾಕ್
  • ವಿವಾ ವಿಡಿಯೋಗೆ ಬದಲಾಗಿ ಕೈನ್ ಮಾಸ್ಟರ್, ಆಡೋಬ್ ಪ್ರೀಮಿಯರ್ ರಷ್ ಬಳಸಬಹುದು.
  • ಯುಸಿ ನ್ಯೂಸ್ ಬದಲು ಗೂಗಲ್ ನ್ಯೂಸ್ ಆ್ಯಪ್ ಬಳಸಬಹುದು.
  • ಡಬ್ಲ್ಯೂಪಿಎಸ್ ಆಫೀಸ್ ಬದಲಾಗಿ ಮೈಕ್ರೋ ಸಾಫ್ಟ್ ಆಫೀಸ್ ಬಳಕೆ ಸ್ನೇಹಿ ಆಗಿದೆ.

 

ಕನ್ಸ್ಯೂಮರ್ ಲೆನ್ಸ್ ಸ್ಟಡಿ ಸಂಸ್ಥೆ ಭಾರತ, ಅಮೇರಿಕ, ಇಂಗ್ಲೆಂಡ್, ಫ್ರಾನ್ಸ್, ಜರ್ಮನಿ, ಸ್ಪೇನ್, ಇಟಲಿ ಹಾಗೂ ಅಮೆರಿಕ ದೇಶಗಳಲ್ಲಿ ನಡೆಸಿದ ಸಮೀಕ್ಷೆ ಪ್ರಕಾರ ಅರ್ಧದಷ್ಟು ಜನ ಚೀನಾ ವಸ್ತುಗಳನ್ನು ಬಹಿಷ್ಕರಿಸುವುದಾಗಿ ಹೇಳಿದ್ದಾರೆ. 10 ರಲ್ಲಿ ನಾಲ್ವರು ಭಾರತೀಯರು ಚೀನಾ ವಸ್ತುಗಳಿಗೆ ಗುಡ್ ಬೈ ಹೇಳಿದ್ದಾರೆ ಎಂದು ಸಮೀಕ್ಷೆ ತಿಳಿಸಿದೆ.

-ಮಿಥುನ್ ಮೊಗೇರ

Advertisement

Udayavani is now on Telegram. Click here to join our channel and stay updated with the latest news.

Next