Advertisement

ನೀರಿಗಾಗಿ ಕೈ ಮುಗಿಯೋ ದುಸ್ಥಿತಿ

12:25 PM Apr 06, 2019 | Naveen |

ಚಿಂಚೋಳಿ: ತಾಲೂಕಿನ ವನ್ಯಜೀವಿಧಾಮ ಅರಣ್ಯಪ್ರದೇಶಕ್ಕೆ ಹೊಂದಿಕೊಂಡಿರುವ ಶಾದೀಪುರ ಗ್ರಾಪಂ ವ್ಯಾಪ್ತಿಯಲ್ಲಿ ಬರುವ ಗ್ರಾಮ ತಾಂಡಾಗಳಲ್ಲಿ ಕಳೆದೆರಡು ದಿನಗಳಿಂದ ಕುಡಿಯುವ ನೀರಿನ ಸಮಸ್ಯೆಯಿಂದಾಗಿ ಹೊಲಗದ್ದೆಗಳಿಗೆ ಸುಡು ಬಿಸಿಲು ಲೆಕ್ಕಿಸದೇ ತಲೆಮೇಲೆ ನೀರು ತುಂಬಿದ ಕೊಡಗಳನ್ನು ಹೊತ್ತುಕೊಂಡು ತರುವ ಪರಿಸ್ಥಿತಿ ಉಂಟಾಗಿದೆ. ಜನರು ನೀರಿಗಾಗಿ
ಪರದಾಟ ನಡೆಸುತ್ತಿದ್ದರೂ ತಾಲೂಕಿನ ಅ ಧಿಕಾರಿಗಳು ಗಮನ ಹರಿಸುತ್ತಿಲ್ಲವೆಂದು ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಕುಂಚಾವರಂ ವನ್ಯಜೀವಿಧಾಮದಲ್ಲಿ ಕಾಡು ಪ್ರಾಣಿಗಳು ಕುಡಿಯುವ ನೀರಿಗಾಗಿ ಪರದಾಡಿದರೆ, ಇತ್ತ ಜನರು ಕುಡಿಯುವ ನೀರಿಗಾಗಿ ಪರದಾಡುವ ಪರಸ್ಥಿತಿ ಉಂಟಾಗಿದೆ.

Advertisement

ಚಾಪಲಾ ನಾಯಕ ತಾಂಡಾ, ಚಂದುನಾಯಕ ತಾಂಡಾ, ಭಿಕ್ಕುನಾಯಕ ತಾಂಡಾ, ಧನಸಿಂಗ ನಾಯಕ ತಾಂಡಾ, ಜವಾಹರ ನಗರ ತಾಂಡಾಗಳಲ್ಲಿ ಕಳೆದ ಒಂದು ವಾರದಿಂದ ಕುಡಿಯುವ ನೀರಿನ ಸಮಸ್ಯೆ ಉಲ್ಬಣವಾಗಿದೆ.

ಹೆಚ್ಚುತ್ತಿರುವ ಬಿಸಿಲಿನ ತಾಪದಿಂದಾಗಿ ತಾಂಡಾಗಳಲ್ಲಿ ಇರುವ ಬೋರವೆಲ್‌ಗ‌ಳಲ್ಲಿ ನೀರಿನ ಅಂರ್ತಜಲಮಟ್ಟ ದಿನೇದಿನೇ ಕುಸಿಯುತ್ತಿದೆ. ಹೀಗಾಗಿ ಜನರು ತಾಸುಗಟ್ಟಲೇ ಬೋರವೆಲ್‌ ಹೊಡೆದರೂ ಒಂದು ಕೊಡ ನೀರು ಬರುತ್ತಿಲ್ಲ. ತಾಂಡಾಗಳ ಸುತ್ತಲು 2 ಕಿ.ಮೀ ಅಂತರದಲ್ಲಿ ಇರುವ ತೋಟಗಳಿಗೆ ಹೋಗಿ ಹೊಲದ ಮಾಲೀಕರಿಗೆ ಕೈಕಾಲು ಹಿಡಿದುಕೊಂಡು ನೀರಿಗಾಗಿ ಕೈಮುಗಿದು ಬೇಡಿಕೊಳ್ಳುವ ಪರಿಸ್ಥಿತಿ ಇಲ್ಲಿನ ಜನರದ್ದಾಗಿದೆ.

ಗ್ರಾಪಂ ಪಿಡಿಒ ಮತ್ತು ಸದಸ್ಯರಿಗೆ ತಾಂಡಾದಲ್ಲಿ ಕುಡಿಯುವ ನೀರಿನ ಸಮಸ್ಯೆ ದಿನೇ ದಿನೇ ಹೆಚ್ಚುತ್ತಿದೆ. ಹೊಸ ಬೋರವೆಲ್‌ ಕೊರೆಯುವಂತೆ ಇಲ್ಲವೇ ಟ್ಯಾಂಕರ್‌ ಮೂಲಕ ನೀರು ಸರಬರಾಜು ಮಾಡುವಂತೆ ಶಾದೀಪುರ ಗ್ರಾಪಂ ಪಿಡಿಒ ಹಾಗೂ ಸದಸ್ಯರಿಗೆ ಮನವಿ ಮಾಡಿಕೊಂಡಿದ್ದರೂ ನಮಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡಿಲ್ಲ ಎಂದು ಇಲ್ಲಿನ ಜನರು ದೂರುತ್ತಾರೆ.

ಬಿಸಿಲಿನ ತಾಪದಿಂದ ಮಕ್ಕಳು ಬಾಯಾರಿ ಅಳುತ್ತಿವೆ. ಮನೆಯಲ್ಲಿ ನೀರಿಲ್ಲದ ಕಾರಣ ಮಕ್ಕಳಿಗಾಗಿ ಎರಡು ಕಿ.ಮೀ ದೂರದಲ್ಲಿ ಇರುವ ತೋಟ, ಹೊಲಗದ್ದೆಗಳಿಗೆ ತೆರಳಿ ಬಿಸಿಲು ಲೆಕ್ಕಸದೇ ದೂರದಿಂದ ನೀರು ಹೊತ್ತುಕೊಂಡು ಮನೆಗೆ ಬರುವಂತಾಗಿದೆ ಎಂದು ಮಹಿಳೆಯರು ಅಳಲು ತೋಡಿಕೊಳ್ಳುತ್ತಾರೆ.

Advertisement

ಜಾನುವಾರುಗಳ ಗತಿ ಆ ದೇವರೆ ಬಲ್ಲ. ಮೂಕ ಪ್ರಾಣಿಗಳ ವೇದನೆ ಹೇಳ ತೀರದಂತಾಗಿದೆ. ಬಾವಿಗಳಲ್ಲಿ, ಬೋರವೆಲ್‌ಗ‌ಳಲ್ಲಿ ನೀರಿಲ್ಲ ಏನು ಮಾಡಬೇಕು ಎಂದು ತಾಂಡಾದ ಚಾವಳಿಬಾಯಿ ಪ್ರಶ್ನಿಸುತ್ತಾರೆ.

ತಾಪಂ ಅಧ್ಯಕ್ಷೆ ರೇಣುಕಾ ಶಾದೀಪುರ ತಾಪಂ ಮತಕ್ಷೇತ್ರದಿಂದ ಗೆಲುವು ಸಾಧಿ ಸಿ ಅಧ್ಯಕ್ಷೆ ಆಗಿದ್ದಾರೆ. ಆದರೆ ಒಮ್ಮೆಯೂ ತಾಂಡಾಗಳಿಗೆ ಭೇಟಿ ನೀಡಿ ಕುಡಿಯುವ ನೀರಿನ ಸಮಸ್ಯೆ ಪರಿಶೀಲನೆ ನಡೆಸಿಲ್ಲ. ಕಳೆದ ನಾಲ್ಕು ವರ್ಷಗಳಿಂದ ತಾಪಂ ಅಧ್ಯಕ್ಷೆಯಾಗಿ ಅ ಧಿಕಾರ ನಡೆಸುತ್ತಿದ್ದಾರೆ. ತಾಂಡಾದಲ್ಲಿ ಮಹಿಳೆಯರು ಅನುಭವಿಸುತ್ತಿರುವ ಕಷ್ಟಗಳನ್ನು ನೋಡಿಲ್ಲ.
.ವಿಜಯಕುಮಾರ ರಾಠೊಡ,
ಚಾಪಲಾ ನಾಯಕ ತಾಂಡಾ

ಚಿಕ್ಕನಿಂಗದಳ್ಳಿ ತಾಂಡಾ ಮತ್ತು ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗಿದೆ. ಸಣ್ಣ ನೀರಾವರಿ ಕೆರೆ ಬತ್ತಿ ಹೋಗಿದೆ. ಗ್ರಾಮದ ಜನರು ಕೆಲವು ತೋಟಗಳಿಗೆ ಹೋಗಿ ತಲೆ ಮೇಲೆ ಹೊತ್ತು ನೀರು ತರುವ ಪರಿಸ್ಥಿತಿ ಇದೆ. ತಾಪಂ ಅಧ್ಯಕ್ಷೆಗೆ ತಿಳಿಸಿದರೆ ಅವರು ಗಮನ ಹರಿಸಿಲ್ಲ.
.ಅಶೋಕ, ಶಾದೀಪುರ ಗ್ರಾಪಂ ಸದಸ್ಯ

ಶಾಮರಾವ ಚಿಂಚೋಳಿ

Advertisement

Udayavani is now on Telegram. Click here to join our channel and stay updated with the latest news.

Next