Advertisement

ವೀರಭದ್ರೇಶ್ವರ ದೇವಸ್ಥಾನಕ್ಕೆ ಬೀಗ

05:38 PM Apr 22, 2020 | Naveen |

ಚಿಂಚೋಳಿ: ತಾಲೂಕಿನ ಸುಲೇಪೇಟ ಗ್ರಾಮದ ಐತಿಹಾಸಿಕ ದೇವಸ್ಥಾನ ವೀರಭದ್ರೇಶ್ವರ ಜಾತ್ರೆಯನ್ನು ಕೋವಿಡ್‌-19 ಮತ್ತು ಕರ್ಫ್ಯೂ ಜಾರಿ ಇರುವುದರಿಂದ ಮಂಗಳವಾರ ಸಂಜೆ ನಡೆಯಬೇಕಾಗಿದ್ದ ರಥೋತ್ಸವವನ್ನು ರದ್ದುಪಡಿಸಲಾಯಿತು.

Advertisement

ದೇವಾಲಯ ಸಮಿತಿಯ ಮುಖಂಡರೊಂದಿಗೆ ಸೇಡಂ ಸಹಾಯಕ ಆಯುಕ್ತ ರಮೇಶ ಕೋಲಾರ, ತಹಶೀಲ್ದಾರ್‌ ಅರುಣಕುಮಾರ ಕುಲಕರ್ಣಿ, ಸಿಪಿಐ ವಿಜಯ ಮಹಾಂತೇಶ ಮಠಪತಿ, ಪಿಎಸ್‌ಐ ತಮ್ಮಯ್ಯ ಸುದೀರ್ಘ‌ವಾಗಿ ಚರ್ಚಿಸಿ ಎಲ್ಲರ ಒಮ್ಮತ ಅಭಿಪ್ರಾಯದ ಮೇರೆಗೆ ಜಾತ್ರೆ ರಥೋತ್ಸವವನ್ನು ರದ್ದುಪಡಿಸಲಾಯಿತು.

ತೇರ ಮೈದಾನದಲ್ಲಿ ನಿಲ್ಲಿಸಲಾಗಿದ್ದ ರಥದ ಗಾಲಿಗೆ ಹಗ್ಗ ಕಟ್ಟಲಾಯಿತು. ವೀರಭದ್ರೇಶ್ವರ ದೇವಾಲಯ ಮುಖ್ಯ ದ್ವಾರಕ್ಕೆ ಕೀಲಿ ಹಾಕಿ ವ್ಯಾಪಕ ಪೊಲೀಸ್‌ ಬಂದೋಬಸ್ತ್ ವ್ಯವಸ್ಥೆ ಮಾಡಲಾಯಿತು. ಕೆರೊಳ್ಳಿ, ಚಿಮ್ಮಾಇದಲಾಯಿ, ಕಲ್ಲೂರ, ಗಾರಂಪಳ್ಳಿ, ನಿಡಗುಂದಾ ಗ್ರಾಮಗಳ ಜಾತ್ರೆಗಳನ್ನು ರದ್ದಪಡಿಸಲಾಗಿದೆ. ಗ್ರಾಮಸ್ಥರಿಗೆ ಸಾಮಾಜಿಕ ಅಂತರ ಮತ್ತು ಕೋವಿಡ್ ಬಗ್ಗೆ ಸಾಕಷ್ಟು ಜಾಗೃತಿ ಮೂಡಿಸಿದ್ದರಿಂದ ಸ್ವಯಂ ಪ್ರೇರಿತವಾಗಿ ಗ್ರಾಮಸ್ಥರೇ ರದ್ದುಪಡಿಸಲು ನಿರ್ಧರಿಸಿದ್ದಾರೆ ಎಂದು ತಹಶೀಲ್ದಾರ್‌ ಅರುಣಕುಮಾರ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next