Advertisement
ದಲಿತ ಮುಖಂಡ ಜಿಲ್ಲಾ ಉಪಾಧ್ಯಕ್ಷ ಜಗದೇವ ಗೌತಮ ಮಾತನಾಡಿ, ಚಿಮ್ಮನಚೋಡ ವಲಯದಲ್ಲಿ ವಿದ್ಯುತ್ ಸಂಪರ್ಕದಲ್ಲಿ ಆಗುತ್ತಿರುವ ತೊಂದರೆಯಿಂದಾಗಿ ಗ್ರಾಮಗಳು ಕತ್ತಲೆಯಲ್ಲಿ ಕಾಲ ಕಲೆಯುವಂತಾಗಿದೆ. ಅಲ್ಲದೇ ಜನರಿಗೆ ಕುಡಿಯಲು ನೀರು ಪೂರೈಕೆ ಆಗುತ್ತಿಲ್ಲ. ಇಲ್ಲಿ 33 ಕೆ.ವಿ ಉಪ ಕೇಂದ್ರ ಇದ್ದರೂ ಇಲ್ಲದಂತಾಗಿದೆ. ಕೆಳದಂಡೆ ಮುಲ್ಲಾಮಾರಿ ನೀರಾವರಿ ಯೋಜನೆ ಅಡಿಯಲ್ಲಿ ಜಮೀನು ಕಳೆದುಕೊಂಡ ನಿರಾಶ್ರಿತರ ಜಮೀನುಗಳಲ್ಲಿ ಎಸ್.ಸಿ.ಪಿ ಮತ್ತು ಟಿಎಸ್‌ಪಿ ಯೋಜನೆ ಅಡಿಯಲ್ಲಿ ಕೊಳವೆ ಬಾವಿ ಕೊರೆಯಲಾಗಿದೆ. ಆದರೆ ಕೊಳವೆ ಬಾವಿಗಳು ವಿಫಲ ಆಗಿರುವುದರಿಂದ ರೈತರಿಗೆ ಯಾವುದೇ ಪ್ರಯೋಜನ ಆಗಿಲ್ಲ ಎಂದರು.
Related Articles
Advertisement
ದಲಿತ ಸೇನೆ 18 ಬೇಡಿಕೆಗಳ ಮನವಿ ಪತ್ರವನ್ನು ತಹಶೀಲ್ದಾರ್ ಪಂಡಿತ ಬಿರಾದಾರಗೆ ಸಲ್ಲಿಸಲಾಯಿತು. ಆರೋಗ್ಯಾಧಿಕಾರಿ ಡಾ| ಮಹಮ್ಮದ ಗಫಾರ, ಸಿಪಿಐ ಎಚ್.ಎಂ. ಇಂಗಳೇಶ್ವರ, ಸಾರಿಗೆ ವ್ಯವಸ್ಥಾಪಕ ವಿಜಯಕುಮಾರ ಹೊಸಮನಿ, ಕೃಷಿ ಅಧಿಕಾರಿ ಶ್ರೀಮಂತ ಮೋತಕಪಳ್ಳಿ ಹಾಜರಿದ್ದರು.
ದಲಿತ ಸೇನೆ ಮುಖಂಡರಾದ ಸಂಜೀವಕುಮಾರ ಕಟ್ಟಿಮನಿ, ಸಾಗರ ಕಟ್ಟಿಮನಿ, ಸತೀಶ ಮೇಲ್ಕರ, ರಾಹುಲ್, ಶ್ರೀಧರ ವಗ್ಗಿ, ರವಿ, ನಿಂಗಪ್ಪ ರಾಜನೋರ, ಪ್ರಕಾಶ ನೂಲಕರ, ಭೀಮಶಾ ಯಂಗನೋರ, ಯಲ್ಲಾಲಿಂಗ ಕೊಡಂಬಲ ಇನ್ನಿತರರಿದ್ದರು. ಚಿಂಚೋಳಿ ಪಿಎಸ್‌ಐ ಸಂತೋಷ ರಾಠೊಡ ಸೂಕ್ತ ಬಂದೊಬಸ್ತ್ ಮಾಡಿದ್ದರು.