Advertisement

ಅಭ್ಯಾಸಕ್ಕೆ ಮಹತ್ವ ನೀಡಿ: ಹಾಕೆ

09:58 AM Jul 22, 2019 | Naveen |

ಚಿಂಚೋಳಿ: ಓದಿನ ಕಡೆಗೆ ಹೆಚ್ಚಿನ ಸಮಯ ನೀಡಿದರೆ ಉತ್ತಮ ಭವಿಷ್ಯ ರೂಪಿಸಿಕೊಳ್ಳಬಹುದು ಎಂದು ಡಿವೈಎಸ್‌ಪಿ, ಐಪಿಎಸ್‌ ಅಧಿಕಾರಿ ಅಕ್ಷಯ ಹಾಕೆ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

Advertisement

ಹಲಚೇರಾ ಗ್ರಾಮದಲ್ಲಿ ಕರ್ನಾಟಕ ಪ್ರಾಂತ ರೈತ ಸಂಘ, ಗ್ರಾಮ ಪಂಚಾಯತಿ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಪ್ರಗತಿಪರ ರೈತರಿಗೆ ಸನ್ಮಾನ ಮತ್ತು ರೈತರ ಮಕ್ಕಳ ಪ್ರತಿಭಾ ಪುರಸ್ಕಾರ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ವಾಟ್ಸ್‌ ಆ್ಯಪ್‌, ಫೇಸ್‌ಬುಕ್‌ಗಳನ್ನು ಅವಶ್ಯಕ್ಕಿಂತ ಹೆಚ್ಚಿಗೆ ಬಳಸಬೇಡಿ. ಜೀವನದಲ್ಲಿ ಗುರಿ ಸಾಧಿಸಬೇಕಾದರೆ ಕಲಿಕೆಯಲ್ಲಿ ಆಸಕ್ತಿ ಮುಖ್ಯ. ರೈತರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಬೇಕು ಎಂದು ಹೇಳಿದರು.

ನಂತರ ಅಕ್ರಮ ಮದ್ಯ ಮಾರಾಟ ಕುರಿತು ಎಚ್ಚರಿಕೆ ನೀಡಿದ ಅವರು, ಕಿರಾಣಿ ಮತ್ತು ಚಹಾ ಅಂಗಡಿ, ಮನೆಗಳಲ್ಲಿ ಅಕ್ರಮ ಮದ್ಯ ಮಾರಾಟ ಮಾಡಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದರು.

ಪ್ರಗತಿ ಕೃಷ್ಣಾ ಗ್ರಾಮೀಣ ಬ್ಯಾಂಕ್‌ ಪ್ರಧಾನ ವ್ಯವಸ್ಥಾಪಕ ಗಿರೀಶ ಹೆಬ್ಟಾರ ಮಾತನಾಡಿ, ರೈತರು ಬ್ಯಾಂಕಿನಿಂದ ಪಡೆದ ಸಾಲವನ್ನು ಸಕಾಲಕ್ಕೆ ಮರು ಪಾವತಿ ಮಾಡಿದರೆ ಸರಕಾರದಿಂದ ಸಿಗುವ ಸಾಲ ಮನ್ನಾ ಅನ್ವಯ ಆಗಲಿದೆ. ಸಾಲ ಮನ್ನಾ ಎನ್ನುವ ಭಾವನೆ ಇದ್ದರೆ ಅದನ್ನು ಬಿಟ್ಟು ಬಿಡಬೇಕು ಎಂದರು.

Advertisement

ಜಿಲ್ಲಾ ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾಧ್ಯಕ್ಷ ಶರಣಬಸಪ್ಪ ಮಮಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಗ್ರಾಪಂ ಅಧ್ಯಕ್ಷ ಶರಣಪ್ಪ ಬೆಳಗುಂಪಿ ಅಧ್ಯಕ್ಷತೆ ವಹಿಸಿದ್ದರು.

ಭೀಮಶೆಟ್ಟಿ ಎಂಪಳ್ಳಿ, ಗೌರಿಶಂಕರ ಕಿಣ್ಣಿ, ಪ್ರದೀಪ ತಿರಲಾಪುರ, ನರಸಯ್ಯ ಗುತ್ತೇದಾರ, ಮಹೇಂದ್ರ, ಗುರುನಾಥ, ಸಂತೋಷ ಮಾಳಗಿ, ಭರತ ಬುಳ್ಳ ಇನ್ನಿತರರಿದ್ದರು. ಸಂತೋಷಕುಮಾರ ಹೊಸಳ್ಳಿ ಸ್ವಾಗತಿಸಿದರು, ಗೌರಿಶಂಕರ ರಟಕಲ್ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next