Advertisement

Chincholi ; ಮೂರು ದಿನಗಳಿಂದ ಸುರಿಯುತ್ತಿರುವ ಮಳೆ: ರಸ್ತೆಗಳು ಜಲಾವೃತ

06:27 PM Sep 04, 2023 | Team Udayavani |

ಚಿಂಚೋಳಿ:  ತಾಲೂಕಿನಲ್ಲಿ ಕಳೆದ ಮೂರು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ದೋಟಿಕೊಳ ಮತ್ತು ಹೂಡದಳ್ಳಿ ಹಾಗೂ ಧರ್ಮಾಸಾಗರ, ಅಂತಾವರಂ,ಲಿಂಗಾನಗರ,ಹಸರಗುಂಡಗಿ,ಐನಾಪೂರ, ತುಮಕುಂಟಾ, ಕೊಳ್ಳುರ‌ ಸಣ್ಣ ನೀರಾವರಿ ಕೆರೆಗಳು ಭರ್ತಿಯಾಗಿ ತುಂಬಿ ರಸ್ತೆಗಳ ಮೇಲೆ ನೀರು ಹರಿಯುತ್ತಿದೆ.

Advertisement

ತಾಲೂಕಿನಲ್ಲಿ ನಿರಂತರವಾಗಿ ಎಡಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಕನಕಪುರ,ತಾಜಲಾಪುರ ರಸ್ತೆ ಮಾರ್ಗದಲ್ಲಿ ಇರುವ ಸೇತುವೆ ಮೇಲಿಂದ ಭಾರಿ ಪ್ರಮಾಣದಲ್ಲಿ ನೀರು ರಭಸದಿಂದ ಹರಿಯುತ್ತಿರುವುದರಿಂದ‌ ವಾಹನಗಳ ಸಂಚಾರಕ್ಕೆ ಅಡ್ಡಿಯಾಯಿತು.

ತಾಲೂಕಿನ ಚಿಂತಪಳ್ಳಿ.ಭೂತಪುರ ರಸ್ತೆ, ಮರಪಳ್ಳಿ,ಶಿವರೆಡ್ದಿ,ಪೋಚಾವರಂ,ಸಂಗಾಪೂರ, ಪರದಾರ ಮೋತಕಪಳ್ಳಿ,,ಮಿರಿಯಾಣ, ಶಾದಿಪುರ,ಲಚಮಾಸಾಗರ, ಬೊನಸಪುರ,ಕಲ್ಲೂರ,ಸಾಲೇಬೀರನಳ್ಳಿ, ಸಲಗರ ಕಾಲೋನಿ,ಗಡಿಕೇಶ್ವರ, ಬಂಟನಳ್ಳಿ,ಕೊರಡಂಪಳ್ಳಿ, ಗಣಾಪುರ,ಬುರಗಪಳ್ಳಿ ಗ್ರಾಮಗಳ ಹತ್ತಿರದ ನಾಲಾ ತುಂಬಿ ಹರಿಯುತ್ತಿವೆ .ಇದರಿಂದಾಗಿ ಜನರು ಹೊರಗಡೆ ಹೋಗಲು ‌ಮತ್ತು ಊರೊಳಗೆ ಬರುವುದಕ್ಕೆ ತೊಂದರೆ ಪಡಬೇಕಾಗಿದೆ.

ಚಿಂಚೋಳಿ ತಾಲೂಕಿನಲ್ಲಿ ಸೋಮವಾರ ಬೆಳಗಿನ ಜಾವದಲ್ಲಿ ಪ್ರಾರಂಭವಾದ ಮಳೆ ನಿರಂತರವಾಗಿ ಸುರಿಯುತ್ತಿದೆ.ದನಕರುಗಳು ಮನೆಯಲ್ಲಿಯೇ ಕಟ್ಟಿ ಹಾಕಿರುವುದರಿಂದ ಮೇವಿನ ಸಮಸ್ಯೆ ಉಂಟಾಗಿದೆ. ತಾಲೂಕಿನಲ್ಲಿ ಹಳ್ಳಕೊಳ್ಳಗಳು ಭರ್ತಿಯಾಗಿ ತುಂಬಿ ತುಳುಕುತ್ತಿವೆ. ಜನರ ಸಂಚಾರ ವಾಹನಗಳ ಓಡಾಟ ಇಲ್ಲದೆ ರಸ್ತೆಗಳು ಬಿಕೋ ಎನ್ನುತ್ತಿವೆ. ಶ್ರಾವಣ ಮಾಸ ನಡುವಿನ ಸೋಮವಾರ ಆಗಿರುವುದರಿಂದ ವಿವಿಧ ದೇವಾಲಯಗಳಿಗೆ ಹೋಗುವ ಭಕ್ತರಿಗೆ ಮಳೆ ಅಡ್ಡಿಯಾಯಿತು.

Advertisement

Udayavani is now on Telegram. Click here to join our channel and stay updated with the latest news.

Next