ಚಿಂಚೋಳಿ: ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸಚಿವ ಸಂಪುಟದಲ್ಲಿ ಸಚಿವ ಸ್ಥಾನ ಪಡೆದ ನಂತರ ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ ಪಾಟೀಲ ಅವರು ತಾಲೂಕಿನ ಸುಲೇಪೇಟ ಗ್ರಾಮದಲ್ಲಿ ಮೊದಲ ಸಲ ಸೇಡಮ ಮತಕ್ಷೇತ್ರಕ್ಕೆ ಒಳಪಟ್ಟಿರುವ ಸುಲೇಪೇಟ, ನಿಡಗುಂದಾ ಗ್ರಾಮಕ್ಕೆ ಆ.1ರ ರವಿವಾರ ಭೇಟಿ ನೀಡಿದ ಸಂದರ್ಭ ಅವರನ್ನು ಸೇಬು ಹಣ್ಣಿನ ಹಾರವನ್ನು ಕೊರಳಿಗೆ ಮತ್ತು ಜೆಸಿಬಿ ವಾಹನಗಳ ಮೇಲಿಂದ ಹೂಮಾಲೆ ಹಾಕಿ ಸಕಲ ಸಂಗೀತ ವಾದ್ಯಗಳೊಂದಿಗೆ ಅದ್ದೂರಿಯಾಗಿ ಸ್ವಾಗತಿಸಿದರು.
ಸುಲೇಪೇಟ ಗ್ರಾಮದ ಬಸವೇಶ್ವರ ವೃತ್ತದಲ್ಲಿ ಪಟಾಕಿ ಸಿಡಿಸಿ ಸಂಭ್ರಮಿಸಿದ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಗ್ರಾಮದಲ್ಲಿ ತೆರೆದ ವಾಹನದಲ್ಲಿ ಮೆರವಣಿಗೆ ನಡೆಸಿದರು.
ಗ್ರಾಮದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆ ಮತ್ತು ಬಸವೇಶ್ವರ ಪ್ರತಿಮೆಗೆ ಸಚಿವ ಡಾ.ಶರಣಪ್ರಕಾಶ ಪಾಟೀಲ ಹೂಮಾಲೆ ಹಾಕಿ ನಮಸ್ಕಾರ ಮಾಡಿದರು.
ಗ್ರಾಮದ ಐತಿಹಾಸಿಕ ದೇವಾಲಯ ವೀರಭದ್ರೇಶ್ವರ ದೇವಸ್ಥಾನ, ಹನುಮಾನ್ ದೇವಾಲಯ, ಖಟ್ವಾಂಗೇಶ್ವರ ಮಠ,ಮಹಾಂತೇಶ್ವರ ಮಠಗಳಿಗೆ ಭೇಟಿ ದರ್ಶನ ಪಡೆದುಕೊಂಡರು.
ಕಾಂಗ್ರೆಸ್ ಪಕ್ಷದ ಮುಖಂಡರಾದ ಬಸವರಾಜ ಸಜ್ಜನಶೆಟ್ಡಿ, ಮೇಘರಾಜ ರಾಠೋಡ, ತಾಹೇರ ಪಟೇಲ, ಸುನೀಲ್ ಕುಮಾರ ಕೋರಿ, ಮಹಾರುದ್ರಪ್ಪ ದೇಸಾಯಿ, ರುದ್ರಶೆಟ್ಟಿ ಪಡಶೆಟ್ಟಿ, ಲಿಂಗಶೆಟ್ಟಿ ರುದನೂರ, ರವಿಕುಮಾರ್ ರಾಠೋಡ, ಶಿವಕುಮಾರ ಸಜ್ಜನಶೆಟ್ಟಿ, ನಾಸೀರಮದರಗಿ, ಜಹೀರ್ ಪಟೇಲ್ ಸೇರಿದಂತೆ ಸುಲೇಪೇಟ ಗ್ರಾಮದ ಹೋಬಳಿ ಗ್ರಾಮದ ಅನೇಕ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.