Advertisement
ತಾಲೂಕಿನ ಕುಂಚಾವರಂ, ಚಿಮ್ಮನಚೋಡ, ಸಾಲೇಬೀರನಳ್ಳಿ, ಕೋಡ್ಲಿ ಗ್ರಾಮಗಳಲ್ಲಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ಸಮಾವೇಶ ಮತ್ತು ಚುನಾವಣಾ ಪ್ರಚಾರ ಉದ್ಘಾಟಿಸಿ ಅವರು ಮಾತನಾಡಿದರು. ಸಾವಿರಾರು ಕೋಟಿ ರೂ. ಸಾಲ ಪಡೆದು ವಿಜಯ ಮಲ್ಯಾ, ನೀರವ ಮೋದಿ ದೇಶವನ್ನು ಬಿಟ್ಟು ವಿದೇಶಕ್ಕೆ ಓಡಿ ಹೋದಾಗ ಚೌಕಿದಾರ್ ಎಲ್ಲಿಗೆ ಹೋಗಿದ್ದರು? ಬಿಜೆಪಿ ಜಾತಿ ಮತ್ತು ಧರ್ಮಗಳ ಮಧ್ಯೆ ಕೋಮುವಾದಿ ಹುಟ್ಟಿಸುತ್ತಿದೆ. ಇಂತಹ (ಬಿಜೆಪಿ)ಬೋಗಸ್ ಜನತಾ ಪಕ್ಷವನ್ನು ದೇಶದಲ್ಲಿ ಬುಡ ಸಮೇತ ಕಿತ್ತು ಹಾಕಬೇಕೆಂದು ಕರೆ ನೀಡಿದರು.
ಕಬ್ಬು ಮಾರಾಟ ಮಾಡಿಕೊಳ್ಳುವುದಕ್ಕಾಗಿ ಸಹಕಾರಿ ಸಕ್ಕರೆ ಕಾರ್ಖಾನೆ ಇಲ್ಲವೆ ಖಾಸಗಿ ಸಕ್ಕರೆ ಕಾರ್ಖಾನೆ ಪ್ರಾರಂಭಿಸುವ ಕುರಿತು ಹಲವು ವರ್ಷಗಳ ಬೇಡಿಕೆ ಇದೆ. ಇದರ ಬಗ್ಗೆ ಪ್ರಯತ್ನಿಸುವುದಾಗಿ ಹೇಳಿದರು. ಸಚಿವ ರಾಜಶೇಖರ ಪಾಟೀಲ ಮಾತನಾಡಿ, ಬೀದರ ಲೋಕಸಭಾ ಬಿಜೆಪಿ ಅಭ್ಯರ್ಥಿ ಭಗವಂತ ಖೂಬಾ ಕಳೆದ ಐದು ವರ್ಷಗಳಲ್ಲಿ ಜಿಲ್ಲೆಯಲ್ಲಿ ಯಾವುದೇ ಅಭಿವೃದ್ಧಿ ಮಾಡಿಲ್ಲ. 2014ರಲ್ಲಿ ಕೇವಲ ಮೋದಿ ಅವರ ಗಾಳಿಯಲ್ಲಿ ಇವರು ಗೆಲುವು ಕಂಡಿದ್ದಾರೆ. ಈಗ ಮೋದಿ ಗಾಳಿಯೂ ಇಲ್ಲ, ಅಲೆಯೂ ಇಲ್ಲ ಎಂದರು.
Related Articles
Advertisement
ಮಾಜಿ ಸಚಿವ ರೇವು ನಾಯಕ ಬೆಳಮಗಿ ಮಾತನಾಡಿ, ನನಗೆ ಬಿಜೆಪಿಯಿಂದ ಸ್ಪ ರ್ಧಿಸಲು ಟಿಕೆಟ ವಂಚಿತಗೊಳಿಸುವಲ್ಲಿ ಬೀದರ ಸಂಸದ ಭಗವಂತ ಖೂಬಾ ಪಾತ್ರ ದೊಡ್ಡದಾಗಿದೆ ಎಂದರು.
ಸಮಾವೇಶದಲ್ಲಿ ಸಚಿವ ರಹೀಮ ಖಾನ್, ಜೇವರ್ಗಿ ಶಾಸಕ ಡಾ| ಅಜಯಸಿಂಗ್, ಬಸವಕಲ್ಯಾಣ ಶಾಸಕ ಬಿ. ನಾರಾಯಣರಾವ, ಮಾಜಿ ಶಾಸಕ ಕೈಲಾಶನಾಥ ಪಾಟೀಲ ಪ್ರಚಾರ ಭಾಷಣ ಮಾಡಿದರು.
ಮಾಜಿ ಸಚಿವ ಬಾಬುರಾವ್ ಚವ್ಹಾಣ, ಸುಭಾಷ ರಾಠೊಡ, ತಾಪಂ ಅಧ್ಯಕ್ಷೆ ರೇಣುಕಾ ಚವ್ಹಾಣ, ಜಿಪಂ ಸದಸ್ಯ ಗೌತಮ ಪಾಟೀಲ, ಭೀಮರಾವ ಟಿ.ಟಿ, ಬಸಯ್ಯ ಗುತ್ತೇದಾರ, ಮಹೆಮೂದ ಪಟೇಲ್, ಚಿರಂಜೀವಿ, ನರಸಿಂಹಲು ಕುಂಬಾರ, ಗೋಪಾಲರಾವ ಕಟ್ಟಿಮನಿ, ಭೀಮರಾವ ತುಮ್ಮ, ಬೀದರ ಜಿಲ್ಲಾ ಕಾಂಗ್ರೆಸ್ ಮುಖಂಡ ಬಸವರಾಜ ಜಾಬಶೆಟ್ಟಿ, ರಾಮಶೆಟ್ಟಿ ಪವಾರ, ಗೋಪಾಲರೆಡ್ಡಿ ಕಸ್ತೂರಿ, ಕೆ.ಎಂ. ಬಾರಿ, ಬಸವರಾಜ ಮಲಿ, ಸವಿತಾ ಸಜ್ಜನ ಇನ್ನಿತರರಿದ್ದರು. ತಾಲೂಕು ಬ್ಲಾಕ ಕಾಂಗ್ರೆಸ್ ಕಮಟಿ ಅಧ್ಯಕ್ಷ ಅನೀಲಕುಮಾರ ಜಮಾದಾರ ಸ್ವಾಗತಿಸಿದರು, ಆರ್. ಗಣಪತರಾವ ವಂದಿಸಿದರು.
ಗೂಂಡಾಗಿರಿ ಬಿಟ್ಟುಬಿಡಿಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಮುಗ್ಧ ಜನರ ಬೆನ್ನಿಗೆ ಚೂರಿ ಹಾಕಿದ್ದಾರೆ. ಕಲಬುರಗಿ ಲೋಕಸಭೆ ಬಿಜೆಪಿ ಅಭ್ಯರ್ಥಿ ಡಾ| ಉಮೇಶ ಜಾಧವ ಅವರಿಗೆ ಸೋಲಿನ ನಡುಕ ಶುರುವಾಗಿದೆ. ಅದಕ್ಕಾಗಿ ಪ್ರಚಾರಕ್ಕೆ ಹೋದವರ ಮೇಲೆ ಗೂಂಡಾಗಿರಿ ಜನರಿಂದ ಅಡ್ಡಿಪಡಿಸುತ್ತಿದ್ದಾರೆ. ಇದು ರಾಜಕೀಯ ಜೀವನಕ್ಕೆ ಶೋಭೆ ತರುವಂತಹದಲ್ಲ. ನಾನು 2009 ಮತ್ತು 2014ರಲ್ಲಿ ಡಾ| ಮಲ್ಲಿಕಾರ್ಜುನ ಖರ್ಗೆ ಪರಸ್ಪರ ಎದುರಾಳಿ ಆಗಿದ್ದರೂ ಖರ್ಗೆ ಅವರನ್ನು ಮನೆಗೆ ಕರೆದುಕೊಂಡು ಚಹಾ ಉಪಹಾರ ಮಾಡಿಸಿದ್ದೇನೆ. ಆದರೆ ಯಾವುದೇ ಗೂಂಡಾಗಿರಿ ಮಾಡಿಲ್ಲ. ಬಿಜೆಪಿಯವರು ಗೂಂಡಾಗಿರಿ ಬಿಟ್ಟು ಬಿಡಿ.
ರೇವು ನಾಯಕ ಬೆಳಮಗಿ,
ಮಾಜಿ ಸಚಿವ