ಚಿಂಚೋಳಿ: ಇಡೀ ಜಗತ್ತಿಗೆ ಸತ್ಯ ಮತ್ತು ಶಾಂತಿ ಹಾಗೂ ಅಹಿಂಸಾ ಮಾರ್ಗಗಳನ್ನು ತೋರಿಸಿದ ರಾಷ್ಟ್ರಪಿತ ಮಹಾತ್ಮ ಗಾಂ ಧೀಜಿಯವರ ತತ್ವ ವಿಚಾರಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಇಂದಿನ ಯುವಕರಿಗೆ ಗಾಂಧೀಜಿಯವರ ವಿಚಾರಗಳು ತುಂಬಾ ಅವಶ್ಯಕವಾಗಿವೆ.
ಅವರು ಕಂಡಿದ್ದ ಕನಸು ನನಸಾಗಬೇಕಾಗಿದೆ ಎಂದು ಸಂಸದ ಡಾ| ಉಮೇಶ ಜಾಧವ್ ಹೇಳಿದರು. ತಾಲೂಕಿನ ಸುಲೇಪೇಟ ಗ್ರಾಮದ ವೀರಭದ್ರೇಶ್ವರ ದೇವಾಲಯ ಆವರಣದಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ 150ನೇ ಜನ್ಮದಿನದ ನಿಮಿತ್ತ ಗಾಂಧಿ ಸಂಕಲ್ಪ ಯಾತ್ರೆಗೆ ಚಾಲನೆ ನೀಡಿ ಅವರು ಮಾತನಾಡಿದರು. ಪ್ರಧಾನಿ ನರೇಂದ್ರ ಮೋದಿ ಅವರು ರಾಮ ರಾಜ್ಯದ ಬಗ್ಗೆ ಕಂಡಿದ್ದ ಕನಸು ನನಸಾಗಿಸುವ ನಿಟ್ಟಿನಲ್ಲಿ ಅವರು ಹಗಲಿರುಳು ಶ್ರಮಿಸಿ ದೇಶದ ಅಭಿವೃದ್ಧಿಗೆ ಪ್ರಯತ್ನಿಸುತ್ತಿದ್ದಾರೆ. ನಮ್ಮೆಲ್ಲರ ಸಹಕಾರ ಅಗತ್ಯವಾಗಿದೆ ಎಂದರು.
ದೇಶದಲ್ಲಿ ಪ್ರತಿಯೊಬ್ಬರು ಮದ್ಯವ್ಯಸನ ಮುಕ್ತರಾಗಬೇಕು ಮತ್ತು ಗ್ರಾಮೀಣ ಪ್ರದೇಶದಲ್ಲಿ ಆದರ್ಶ ಜೀವನ ಸಾಗಿಸಬೇಕು. ಅಹಿಂಸಾ ಮತ್ತು ಶಾಂತಿ, ಸತ್ಯ ವಿಚಾರಗಳನ್ನು ಮೈಗೂಡಿಸಿಕೊಳ್ಳಬೇಕು. ಗ್ರಾಮಿಣ ಪ್ರದೇಶಗಳಲ್ಲಿ ಸ್ವಚ್ಛತೆ ಬರಬೇಕು.
ನಮ್ಮ ಅರಣ್ಯ ಸಂರಕ್ಷಣೆ ಮತ್ತು ಉತ್ತಮ ಪರಿಸರ ನಿರ್ಮಾಣಕ್ಕೆ ನಾವೆಲ್ಲರೂ ಮುಂದಾಗಬೇಕಾಗಿದೆ ಎಂದು ಹೇಳಿದರು. ಶಾಸಕ ರಾಜಕುಮಾರ ಪಾಟೀಲ ತೇಲ್ಕೂರ ಮಾತನಾಡಿ, ಬಿಜೆಪಿ ಕಾರ್ಯಕರ್ತರು ಪ್ರತಿ ಮನೆ-ಮನೆಗೆ ಹೋಗಿ ಗಾಂಧೀಜಿಯವರ ವಿಚಾರಗಳನ್ನು ಜನರಿಗೆ ಮುಟ್ಟಿಸಬೇಕು. ಮಹಾತ್ಮ ಗಾಂಧೀಜಿಯವರ ಹೆಸರಿನಲ್ಲಿ ಕಾಂಗ್ರೆಸ್ ಪಕ್ಷ ಮಾಡಿದ ಡೊಂಗಿ ಗಾಂಧಿ ಭಕ್ತಿಯನ್ನು ಜನರಿಗೆ ತಿಳಿಸಬೇಕೆಂದು ಹೇಳಿದರು.
ಸುಲೇಪೇಟ, ಪೆಂಚನಪಳ್ಳಿ, ಕೊರಡಂಪಳ್ಳಿ ನಿಡಗುಂದಾ ಗ್ರಾಮಗಳಲ್ಲಿ ನಡೆದ ಗಾಂಧಿ ಸಂಕಲ್ಪ ಯಾತ್ರೆಯಲ್ಲಿ ಬಿಜೆಪಿ ಕಾರ್ಯಕರ್ತರಾದ ಮುಕುಂದ ದೇಶಪಾಂಡೆ, ಶರಣು ಮೆಡಿಕಲ ತಳವಾರ, ಅಜೀತ ಪಾಟೀಲ, ಜಗದೀಶಸಿಂಗ ಠಾಕೂರ, ಶಿವಶರಣಪ್ಪ ಕುಂಬಾರ, ಅತೀಶ ಪವಾರ, ಡಾ| ವಿಶ್ವನಾಥ ಪವಾರ, ವಿಷ್ಣುರಾವ ಬಸೂದೆ, ಮಹೇಶ ಬೆಮಳಗಿ, ಸುಭಾಸ ಕಾಳಗಿ, ನಾಮದೇವ ಪೊಲೀಸ್ ಪಾಟೀಲ, ಬಂಡೆಪ್ಪ ಅಣಕಲ್, ಅಶೋಕ ಚವ್ಹಾಣ, ಲಕ್ಷ್ಮಣ ಆವಂಟಿ, ವೀರೇಶ ಕುಂಬಾರ, ವಿನೋದ ಓಂಕಾರ, ಅಮೃತರಾವ ಕೋಡ್ಲಿ, ಭೀಮಶಟ್ಟಿ ಮುರುಡಾ, ಚಂದ್ರಶೇಖರ ಗುತ್ತೆದಾರ, ಜಗಜೀವನರೆಡ್ಡಿ ಮಿರಿಯಾಣ ಇದ್ದರು.