Advertisement

ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಆಟೋ; ಮಹಿಳೆ ಮೃತ್ಯು; 6 ಮಂದಿಗೆ ಗಾಯ

11:28 PM Jun 18, 2023 | Team Udayavani |

ಚಿಂಚೋಳಿ: ಆಟೋ ಪಲ್ಟಿಯಾಗಿ ಓರ್ವ ಮಹಿಳೆ ಸ್ಥಳದಲ್ಲಿಯೇ ಮೃತಪಟ್ಟಿದ್ದು,ಚಾಲಕ ಸಹಿತ ಆರು ಮಂದಿ ಗಾಯಗೊಂಡ ಘಟನೆ ತಾಲೂಕಿನ ಚಿಮ್ಮನಚೋಡ ಸಮೀಪ ರವಿವಾರ ನಡೆದಿದೆ.

Advertisement

ಚೇಂಗಟಾ ಅಡಕಿಮೊಕ ತಾಂಡಾದ ಶಾಂತಿಬಾಯಿ ಕಾಶಿರಾಮ(53) ಮೃತಪಟ್ಟ ಮಹಿಳೆ.

ತಾಲೂಕಿನ ‌ಶಾದಿಪುರ ತಾಂಡಾದಲ್ಲಿ ಶವ ಸಂಸ್ಕಾರ ಮುಗಿಸಿಕೊಂಡು ಚೇಂಗಟಾ ತಾಂಡಾದ‌ ಕಡೆಗೆ ಹೊರಟಿದ್ದರು.
ಚಿಮ್ಮನಚೋಡ ಗ್ರಾಮದ ತಿರುವಿನಲ್ಲಿ ಆಟೊಚಾಲಕನ ‌ನಿಯಂತ್ರಣ ತಪ್ಪಿ ರಸ್ತೆ ಪಕ್ಕದಲ್ಲಿ ಉರುಳಿ ಬಿದ್ದಿದೆ.

ಘಟನೆಯಲ್ಲಿ ಘಮಲಾಬಾಯಿ, ಉಮಲಿಬಾಯಿ,ತಾರಿಬಾಯಿ ಗಾಯಗೊಂಡಿರುವ ಅವರನ್ನು ಚಿಂಚೋಳಿ ಸರಕಾರಿ ಸಾರ್ವಜನಿಕ ಆಸ್ಪತ್ರೆಗೆ ಚಿಕಿತ್ಸೆಗಾಗಿ ಸೇರಿಸಲಾಗಿದೆ.

ತೀವ್ರವಾಗಿ ಗಾಯಗೊಂಡ ಚಾಲಕ ಅಂಬರೀಶ್ ಗೋಪು,ಅನುಸೂಯ ಕಿಶನ ಕಲಬುರಗಿ ಜಿಮ್ಸ್ ಆಸ್ಪತ್ರೆಗೆ ಸೇರಿಸಲಾಗಿದೆ.

Advertisement

ಘಟನೆ ಸ್ಥಳಕ್ಕೆ ಪಿಎಸೈ ಮಂಜುನಾಥರೆಡ್ಡಿ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next