Advertisement

ಮನೆಗಳಿಗೆ ಹಾನಿ: ಕಂದಾಯ ನಿರೀಕ್ಷಕರಿಂದ ಸಮೀಕ್ಷೆ

03:43 PM Apr 20, 2020 | Naveen |

ಚಿಂಚೋಳಿ: ಪಟ್ಟಣದ ಹೊಸ ಭವಾನಿ ನಗರದಲ್ಲಿ ಗುಡುಗು ಮಿಂಚು ಮತ್ತು ಸಿಡಿಲಿನ ಆರ್ಭಟ ಹಾಗೂ ಬಿರುಗಾಳಿ ಸಮೇತ ಮಳೆ ಸುರಿದ ಪರಿಣಾಮ ಬಡವರ ಉಪಜೀವನಕ್ಕೆ ತೀವ್ರ ತೊಂದರೆ ಉಂಟಾಗಿದೆ.

Advertisement

ಅಕಾಲಿಕ ಮಳೆ ಹಾಗೂ ಬಿರುಗಾಳಿ ಬೀಸಿದ ಪರಿಣಾಮ ಏಳು ಮನೆಗಳ ಮೇಲ್ಛಾವಣೆ ಸಂಪೂರ್ಣ ಗಾಳಿಗೆ ಹಾರಿ ಹೋಗಿವೆ. ಇದರಿಂದಾಗಿ ಮನೆಯಲ್ಲಿ ಸಂಗ್ರಹಿಸಿದ್ದ ಆಹಾರ ಧಾನ್ಯ, ದಿನ ನಿತ್ಯದ ಬದುಕಿಗೆ ಬೇಕಾಗುವ ಸಾಮಗ್ರಿಗಳು ಮಳೆ ನೀರಿನಿಂದ ಹಾನಿಯಾಗಿವೆ. ಜೋಳ,ಬ್ಯಾಳಿ, ಅಕ್ಕಿ, ಹಿಟ್ಟು ಇನ್ನಿತರ ಆಹಾರ ಸಾಮಗ್ರಿ ಮಳೆಯಲ್ಲಿ ನೆನೆದಿವೆ. ಅಡುಗೆ ಸಾಮಗ್ರಿಗಳ ಮೇಲೆ ಕಲ್ಲುಗಳು ಬಿದ್ದು ಒಡೆದಿವೆ. ಬಟ್ಟೆಗಳು ಹಾಳಾಗಿವೆ.

ಇನ್ನು ಕೆಲವರ ಬೆನ್ನು, ಕೈ-ಕಾಲುಗಳ ಮೇಲೆ ಕಲ್ಲುಗಳು ಬಿದ್ದಿದ್ದು ತೀವ್ರ ಗಾಯಗಳಾಗಿದ್ದು, ನಮಗೆ ಮತ್ತೆ ಮನೆ ಕಟ್ಟಿಕೊಳ್ಳಲು ಸರ್ಕಾರ ಸಹಾಯ ಒದಗಿಸಬೇಕು ಎಂದು ಇಸ್ಮಾಯಿಲ್‌ಶಾ, ಸಂತೋಷ ಮನವಿ ಮಾಡಿದ್ದಾರೆ. ಕಂದಾಯ ನಿರೀಕ್ಷಕ ಕೇಶವ ಕುಲಕರ್ಣಿ, ಪುರಸಭೆ ಸಿಬ್ಬಂದಿ ಶರಣಪ್ಪ ಮಾಳಾಪುರ, ಮಶಾಖ ಮಳೆಯಿಂದಾದ ಹಾನಿ ಸಮೀಕ್ಷೆ ನಡೆಸಿದರು.

ಹೊಸ ಭವಾನಿ ನಗರದಲ್ಲಿ ಅನೇಕ ಜನರ ಮನೆಗಳಿಗೆ ಮಳೆ-ಗಾಳಿಯಿಂದ ಹಾನಿಯುಂಟಾಗಿದೆ. ಸರ್ಕಾರ ಇವರಿಗೆ ಪರಿಹಾರ ಒದಗಿಸಬೇಕು ಎಂದು ಕಾಂಗ್ರೆಸ್‌ ಮುಖಂಡರಾದ ಕೆ.ಎಂ. ಬಾರಿ, ಮಂಜಲೆ ಸಾಬ್‌ ತಹಶೀಲ್ದಾರ್‌ಗೆ ಮನವಿ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next