Advertisement

ಕೋವಿಡ್ : ಚಿತ್ರ ಕಲಾವಿದರಿಂದ ಜಾಗೃತಿ ಜಾಥಾ

05:58 PM Apr 23, 2020 | Naveen |

ಚಿಂಚೋಳಿ: ತಾಲೂಕಿನ ಸುಲೇಪೇಟ ಗ್ರಾಮದ ಬಸವೇಶ್ವರ ವೃತ್ತದಲ್ಲಿ ಚಿತ್ರ ಕಲಾವಿದರು ಕೋವಿಡ್ ವೈರಸ್‌ ಕುರಿತು ಚಿತ್ರ ಬಿಡಿಸಿ ಜನರಿಗೆ ಜಾಗೃತಿ ಮೂಡಿಸಿದರು.

Advertisement

“ನೀವು ಬಂದರೆ ಹೊರಗಿ ನಾನು ಬರುವ ನಿಮ್ಮ ಮನೆಗೆ’ಎಂಬ ಸಂದೇಶವನ್ನು ಚಿತ್ರದಲ್ಲಿ ಬಿಡಿಸಿದ್ದರಿಂದ ಎಲ್ಲರ ಮೆಚ್ಚುಗೆ ಪಡೆದುಕೊಂಡಿತು. ಚಿತ್ರ ಕಲಾವಿದ ಶಿಕ್ಷಕರಾದ ಪ್ರಭುಜಾಣ, ನಾಗೇಶ ಶೀಲವಂತ, ಪ್ರಭುಲಿಂಗಯ್ಯ ಇವರು ಬಸವೇಶ್ವರ ವೃತ್ತದಲ್ಲಿ ಕೋವಿಡ್ ವೈರಸ್‌ ಚಿತ್ರ ಬಿಡಿಸಿದರು. ಸಾರ್ವಜನಿಕರು ಮತ್ತು ಅಧಿಕಾರಿಗಳು ಚಿತ್ರವನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು. ತಹಶೀಲ್ದಾರ್‌ ಅರುಣಕುಮಾರ ಕುಲಕರ್ಣಿ, ಡಿವೈಎಸ್‌ಪಿ ಇ.ಎಸ್‌.ವೀರಭದ್ರಯ್ಯ,ಕೋವಿಡ್ ನೋಡಲ್‌ ಅಧಿಕಾರಿ ಮಲ್ಲಿಕಾರ್ಜುನ ಪಾಲಾಮೂರ, ದೇವೇಂದ್ರಪ್ಪ ಹೋಳ್ಕರ, ಶಾಂತಕುಮಾರ ಯಾಲಕ್ಕಿ, ಚೆನ್ನಬಸಪ್ಪ ಹೋಳ್ಕರ ಇನ್ನಿತರಿದ್ದರು. ಇದೇ ಸಂದರ್ಭದಲ್ಲಿ ತಹಶೀಲ್ದಾರ್‌ ಅವರು ಕೊರೊನಾ ವೈರಸ್‌ ಕುರಿತು ಸಾಮಾಜಿಕ ಅಂತರ ಮತ್ತು ತಡೆಗಟ್ಟುವಿಕೆ ಕುರಿತು ಪ್ರತಿಜ್ಞಾ ಬೋಧಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next