Advertisement

ಚಿಂಚೋಳಿ ಇತಿಹಾಸದಲ್ಲೇ ದಾಖಲೆ ಮತದಾನ

02:38 PM May 20, 2019 | Team Udayavani |

ಕಲಬುರಗಿ: ಚಿಂಚೋಳಿ ವಿಧಾನಸಭಾ ಮತಕ್ಷೇತ್ರದ ಮತದಾರರು ರವಿವಾರ ನಡೆದ ಉಪ ಚುನಾವಣೆಯಲ್ಲಿ ಹೊಸ ದಾಖಲೆಯೊಂದನ್ನು ಬರೆದಿದ್ದಾರೆ. 44 ಡಿಗ್ರಿ ಸೆಲ್ಸಿಯಸ್‌ ಸುಡು ಬಿಸಿಲಿನ ನಡುವೆಯೂ ಕ್ಷೇತ್ರದ ಇತಿಹಾಸದಲ್ಲೇ ಮೊದಲ ಬಾರಿಗೆ ಶೇ.70ಕ್ಕಿಂತ ಅಧಿಕ ಮತದಾನವಾಗಿದೆ. ಕಳೆದ 2018ರ ಚುನಾವಣೆಯಲ್ಲಿ ಅತ್ಯಧಿಕ ಶೇ.68.47ರಷ್ಟು ಮತದಾನವಾಗಿತ್ತು.

Advertisement

ಕಾಂಗ್ರೆಸ್‌ನಿಂದ ಎರಡು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದ ಡಾ| ಉಮೇಶ ಜಾಧವ್‌ ಅವರ ರಾಜೀನಾಮೆಯಿಂದ ಚಿಂಚೋಳಿ ವಿಧಾನಸಭೆ ಕ್ಷೇತ್ರ ತೆರವಾಗಿತ್ತು. ಇದರಿಂದಾಗಿ ಚಿಂಚೋಳಿ ಕ್ಷೇತ್ರ ಇದೇ ಮೊದಲ ಬಾರಿಗೆ ಉಪಚುನಾವಣೆಗೆ ಸಾಕ್ಷಿಯಾಗಿತ್ತು. 1957ರಿಂದ 2018ರವರೆಗೆ ಒಟ್ಟು 14 ಚುನಾವಣೆಗಳು ನಡೆದರೂ ಎಲ್ಲೂ ಉಪ ಚುನಾವಣೆ ನಡೆದಿರಲಿಲ್ಲ.

ಪ್ರಥಮ ಬಾರಿಗೆ ನಡೆದ ಉಪ ಚುನಾವಣೆಗೆ ಮತದಾನ ಮುಕ್ತಾಯದ ಸಮಯಕ್ಕೆ ಶೇ.70.75ರಷ್ಟು ಮತದಾರರು ತಮ್ಮ ಮತದಾನದ ಹಕ್ಕು ಚಲಾಯಿಸಿದ್ದಾರೆ. ಚಿಂಚೋಳಿಯಲ್ಲಿ 99,047 ಪುರುಷ ಮತ್ತು 94,806 ಹಾಗೂ 16 ಇತರ ಮತದಾರರ ಸೇರಿ ಒಟ್ಟು 1,93,869 ಇದ್ದರು. ಇದರಲ್ಲಿ 70,223 ಪುರುಷ ಹಾಗೂ 66,938 ಮಹಿಳೆಯರು ಸೇರಿದಂತೆ 1,37,161 ಜನರು ಮತದಾನ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next