Advertisement
ಶುಕ್ರವಾರದ ಸೆಮಿಫೈನಲ್ ಪಂದ್ಯದಲ್ಲಿ ಜೊಕೋವಿಕ್ 6-0, 6-2, 6-2 ಅಂತರದಿಂದ ಲುಕಾಸ್ ಪೌಲಿ ಆಟವನ್ನು ಮುಗಿಸಿದರು. ಒಂದು ಗಂಟೆ, 23 ನಿಮಿಷಗಳಲ್ಲಿ ಈ ಸ್ಪರ್ಧೆ ಮುಗಿದು ಹೋಯಿತು. ಪೌಲಿ ಯಾವ ಹಂತದಲ್ಲೂ ಜೊಕೋಗೆ ಅಪಾಯಕಾರಿಯಾಗಿ ಗೋಚರಿಸಲಿಲ್ಲ. ಹಾಗೆಯೇ 2010ರ ಆಸ್ಟ್ರೇಲಿಯನ್ ಓಪನ್ ಕ್ವಾರ್ಟರ್ ಫೈನಲ್ ಬಳಿಕ ಜೊಕೋವಿಕ್ ಯಾವುದೇ ಗ್ರ್ಯಾನ್‌ಸ್ಲಾಮ್‌ನಲ್ಲಿ ಫ್ರಾನ್ಸ್ ಆಟಗಾರನೆದುರು ಸೋಲದ ಅಜೇಯ ದಾಖಲೆಯನ್ನೂ ಕಾಯ್ದುಕೊಂಡರು. ಅಂದು ಸೋಂಗ ವಿರುದ್ಧ ಸೋಲನುಭವಿಸಿದ್ದರು.
ನೊವಾಕ್ ಜೊಕೋವಿಕ್-ರಫೆಲ್ ನಡಾಲ್ ಈವರೆಗೆ ಒಮ್ಮೆ ಮಾತ್ರ ಆಸ್ಟ್ರೇಲಿಯನ್ ಓಪನ್ ಫೈನಲ್‌ನಲ್ಲಿ ಪರಸ್ಪರ ಎದುರಾಗಿದ್ದಾರೆ. ಅದು 2012ರ ಮ್ಯಾರಥಾನ್ ಸ್ಪರ್ಧೆ. 5 ಗಂಟೆ, 53 ನಿಮಿಷಗಳ ಕಾಲ ಸಾಗಿದ ಇವರಿಬ್ಬರ ನಡುವಿನ ಪಂದ್ಯ ಗ್ರ್ಯಾನ್‌ಸ್ಲಾಮ್ ಇತಿಹಾಸದ ಸುದೀರ್ಘ ಫೈನಲ್ ಆಗಿ ದಾಖಲಾದುದ್ದನ್ನು ಮರೆಯುವಂತಿಲ್ಲ. ರವಿವಾರದ ಮುಖಾಮುಖೀಯೂ ಇಷ್ಟೇ ಜೋಶ್‌ನಿಂದ ಕೂಡಿರಬಹುದಾದ ಎಲ್ಲ ಸಾಧ್ಯತೆ ಇದೆ.
Related Articles
ಶ್ರೇಯಾಂಕ ರಹಿತ ಜೋಡಿ ಆಸ್ಟ್ರೇಲಿಯದ ಸಮಂತಾ ಸ್ಟೋಸರ್- ಚೀನದ ಝಾಂಗ್ ಶುಯಿ “ಆಸ್ಟ್ರೇಲಿಯನ್ ಓಪನ್’ ಕೂಟದ ವನಿತಾ ಡಬಲ್ಸ್ ಪ್ರಶಸ್ತಿ ಜಯಿಸಿದೆ. ಶುಕ್ರವಾರ ನಡೆದ ಫೈನಲ್‌ನಲ್ಲಿ ಸಮಂತಾ-ಝಾಂಗ್ ಜೋಡಿ ಹಾಲಿ ಚಾಂಪಿಯನ್ ಖ್ಯಾತಿಯ ಟೈಮಿಯಾ ಬಬೋಸ್ (ಹಂಗೇರಿ)-ಕ್ರಿಸ್ಟಿನಾ ಲಡೆನೊವಿಕ್ (ಫ್ರಾನ್ಸ್) ವಿರುದ್ಧ 6-3, 6-4 ಅಂತರದ ಜಯ ದಾಖಲಿಸಿತು.
Advertisement