Advertisement
ಒಂದು ಸಲ ಲಿನ್ ಮಗನೊಂದಿಗೆ, “”ಎಷ್ಟು ಸಮಯ ಹೆಣಿಗೆ ಹಾಕಿಕೊಂಡು ಈ ಕಷ್ಟದ ಜೀವನ ನಡೆಸುವುದು? ನನಗೆ ಆಕಾಶದಲ್ಲಿ ಹಾರುವ ಸುಂದರವಾದ ಅರಮನೆಯಲ್ಲಿ ವಾಸವಾಗಬೇಕೆಂಬ ಬಯಕೆಯಾಗಿದೆ. ಅದರ ಸುತ್ತಲೂ ಬಗೆಬಗೆಯ ಸುಂದರವಾದ ಹೂಗಳ ಗಿಡಗಳಿರಬೇಕು. ಎಲ್ಲ ಸೌಕರ್ಯವೂ ಅರಮನೆಯೊಳಗಿದ್ದರೆ ಸುಖವಾಗಿ ಕಾಲ ಕಳೆಯಬಹುದೆಂಬ ಆಶೆ ಯಾವಾಗಲೂ ಕಾಡುತ್ತದೆ” ಎಂದು ಹೇಳಿದಳು. ತಾಯಿಯ ಮಾತಿಗೆ ಚಿನ್ ನಕ್ಕುಬಿಟ್ಟ. “”ಇದೊಳ್ಳೆಯ ಮಾತು! ನೀನು ಕಸೂತಿ ಹಾಕಿ ಬೇರೆಯವರ ಮನೆಗಳಲ್ಲಿ ಗಿಣಿಗಳನ್ನು, ಮೊಲಗಳನ್ನು ಜೀವಂತಗೊಳಿಸುತ್ತಿದ್ದೀ. ಹೂಗಳನ್ನು ಅರಳಿಸುತ್ತಿದ್ದೀ. ಹಾಗೆಯೇ ನಮಗೂ ಒಂದು ಸುಂದರವಾದ ಅರಮನೆಯನ್ನು ಹೆಣೆದುಬಿಡು, ನಮಗೆ ಇಷ್ಟವಾದ ಜಾಗದಲ್ಲಿ ಅದನ್ನು ಜೀವಂತಗೊಳಿಸಿ ಹಾಯಾಗಿರಬಹುದಲ್ಲವೆ?” ಎಂದು ಕೇಳಿದ.
Related Articles
Advertisement
ಚಿನ್ ಸಂತನ ಕಾಲುಗಳನ್ನು ಗಟ್ಟಿಯಾಗಿ ಹಿಡಿದುಕೊಂಡ. “”ನನಗೆ ನನ್ನ ತಾಯಿಯೆಂದರೆ ಪಂಚಪ್ರಾಣ. ಅವಳನ್ನು ಕಳೆದುಕೊಂಡರೆ ನಾನು ಬದುಕುವುದಿಲ್ಲ. ಆದರೆ ಹೆಣಿಗೆ ಮರಳಿ ಸಿಗದಿದ್ದರೆ ತಾಯಿ ಉಳಿಯುವುದಿಲ್ಲ. ಎಲ್ಲ ಕಷ್ಟಗಳನ್ನು ಎದುರಿಸುವ ದಾರಿ ನೀವೇ ತೋರಿಸಬೇಕು” ಎಂದು ಪ್ರಾರ್ಥಿಸಿದ.
ಸಂತನಿಗೆ ಚಿನ್ ಮೇಲೆ ಕನಿಕರವುಂಟಾಯಿತು. “”ತಾಯಿಯ ಮೇಲೆ ನೀನಿರಿಸಿದ ಪ್ರೀತಿ ಕಂಡು ಇಷ್ಟವಾಗಿದೆ. ನಾನು ನಿನಗೆ ಒಂದು ಮಹಿಮೆಯ ಕುದುರೆಯನ್ನು ಕೊಡುತ್ತೇನೆ. ಅದು ಗಾಳಿಗಿಂತಲೂ ವೇಗವಾಗಿ ಹಾರುವ ಶಕ್ತಿ ಪಡೆದಿದೆ. ನಿನ್ನನ್ನು ಸುರಕ್ಷಿತವಾಗಿ ಯಕ್ಷಿಣಿಯರ ಬಳಿಗೆ ಕರೆದುಕೊಂಡು ಹೋಗುತ್ತದೆ. ಆದರೆ ಕುದುರೆ ಧಗಧಗ ಉರಿಯುವ ಅಗ್ನಿಪರ್ವತವನ್ನು ದಾಟುತ್ತದೆ, ಮಂಜಿನ ನದಿಯಲ್ಲಿ ಈಜುತ್ತ ಸಾಗುತ್ತದೆ. ಆಗ ನೀನು ಬೆಂಕಿಯ ಕಾವಿನಿಂದ, ಮಂಜುಗಡ್ಡೆಯ ಶೀತದಿಂದ ಕಂಗೆಟ್ಟು ಕೂಗಿಕೊಳ್ಳಬಾರದು. ಧ್ವನಿ ತೆಗೆದರೆ ಕುದುರೆ ನಿನ್ನನ್ನು ಅಲ್ಲಿಯೇ ಕೆಡವಿ ಬಿಡುತ್ತದೆ. ಮುಂದೆ ಯಕ್ಷಿಣಿಯರು ಅರಮನೆಯಲ್ಲಿರುವಾಗ ಅವರು ಎಚ್ಚರವಾಗಿದ್ದರೆ ಹೆಣಿಗೆಯನ್ನು ಮತ್ತೆ ತರಲು ಬಿಡುವುದಿಲ್ಲ. ಅವರಿಗೆ ನಿದ್ರೆ ಬರಬೇಕು, ಅರಮನೆಯ ಮೇಲೆ ನಾನು ಕೊಡುವ ಮಂತ್ರಿಸಿದ ನೀರನ್ನು ಹಾಕಿ ಮೊದಲಿನಂತೆ ಮಾಡಿ ತರಬೇಕು. ಆ ಧೈರ್ಯ ನಿನಗಿದೆಯೆ?” ಎಂದು ಸಂತ ಕೇಳಿದ.
“”ನನ್ನ ತಾಯಿಯ ಜೀವ ಉಳಿಸಿಕೊಳ್ಳಲು ಯಾವ ಕೆಲಸವನ್ನಾದರೂ ಮಾಡುತ್ತೇನೆ” ಎಂದ ಚಿನ್. ಸಂತ ನೀಡಿದ ಕುದುರೆಯೊಂದಿಗೆ ಮನೆಗೆ ಬಂದ. ಲಿನ್ ತಯಾರಿಸಿಟ್ಟಿದ್ದ ಒಂದು ಹೆಣಿಗೆಯ ಮುಸುಕನ್ನು ಕೈಯಲ್ಲಿ ಹಿಡಿದುಕೊಂಡು ಕುದುರೆಯ ಮೇಲೆ ಕುಳಿತ. ಕುದುರೆ ಬಿರುಗಾಳಿಗಿಂತ ವೇಗವಾಗಿ ಹಾರುತ್ತ ಬಹು ದೂರ ಕ್ರಮಿಸಿತು. ಆಗ ಅಗ್ನಿಕುಂಡವಾಗಿದ್ದ ಬೆಟ್ಟ ಎದುರಾಯಿತು. ಅದರ ಬೆಂಕಿಯ ಕಾವಿಗೆ ಬಳಿಗೆ ಸುಳಿಯಲೂ ಸಾಧ್ಯವಿರಲಿಲ್ಲ. ಆದರೆ, ಕುದುರೆ ಭಯಪಡದೆ ಬೆಂಕಿಯ ಕಡೆಗೆ ನುಗ್ಗಿತು. ಚಿನ್ ಪ್ರಾಣಭಯದಿಂದ ಚೀರಿಕೊಳ್ಳಬೇಕೆಂದುಕೊಂಡ. ಸಂತ ಎಚ್ಚರಿಸಿದ ಮಾತುಗಳು ನೆನಪಾದವು. ಕಣ್ಮುಚ್ಚಿ ನಾಲಿಗೆ ಕಚ್ಚಿಕೊಂಡು ಕುಳಿತ. ಕುದುರೆ ಅಪಾಯವಾಗದಂತೆ ಅಗ್ನಿ ಪರ್ವತವನ್ನು ದಾಟಿತು. ಮಂಜಿನ ನದಿಯ ಸನಿಹ ತಲುಪಿತು. ನದಿಯ ಶೈತ್ಯದಿಂದ ದೇಹ ನಡುಗತೊಡಗಿದರೂ ಚಿನ್ ತುಟಿ ತೆರೆಯದೆ ಸಹಿಸಿಕೊಂಡು ಕುದುರೆಯನ್ನು ಗಟ್ಟಿಯಾಗಿ ಅವಚಿಕೊಂಡ. ಮಂಜಿನ ಗಡ್ಡೆಗಳ ನಡುವೆ ದಾರಿ ಮಾಡಿಕೊಂಡು ಓಡುತ್ತ ಯಕ್ಷಿಣಿಯರ ಅರಮನೆಯ ಅಂಗಳಕ್ಕೆ ತಲುಪಿತು.
ಲಿನ್ ನೆಯಿದ ಹೆಣಿಗೆಯನ್ನು ಆಕಾಶದಲ್ಲಿ ಅರಮನೆಯಾಗಿ ಮಾಡಿಕೊಂಡು ಯಕ್ಷಿಣಿಯರು ಸುಖ ಸಂತೋಷದಲ್ಲಿದ್ದರು. ಚಿನ್ ತನ್ನ ತಾಯಿ ಹೆಣೆದ ಮುಸುಕನ್ನು ಅವರ ಮೈಮೇಲೆ ಎಸೆದ. ಅದರಿಂದಾಗಿ ಅವರೆಲ್ಲರೂ ನಿದ್ರಾವಶರಾಗಿ ಬಿದ್ದುಕೊಂಡರು. ಬಳಿಕ ಅವನು ಸಂತ ನೀಡಿದ ಮಂತ್ರಿಸಿದ ಜಲವನ್ನು ಮನೆಯ ಮೇಲೆ ಹಾರಿಸಿದ. ಮನೆ ಮತ್ತೆ ಹೆಣಿಗೆಯಾಗಿ ಸೂಜಿಯೊಂದಿಗೆ ಕಾಣಿಸಿಕೊಂಡಿತು.ಚಿನ್ ಹೆಣಿಗೆಯೊಡನೆ ಮತ್ತೆ ಕುದುರೆಯ ಮೇಲೆ ಕುಳಿತುಕೊಂಡು ಸುಲಭವಾಗಿ ಮನೆಗೆ ಬಂದು ತಲುಪಿದ. ಆದರೆ ನಿದ್ರಾಹಾರಗಳಿಲ್ಲದ ಕಾರಣ ಅವನ ತಾಯಿ ಸ್ಮತಿ ಕಳೆದುಕೊಂಡು ಸಾಯುವ ಸ್ಥಿತಿಯಲ್ಲಿದ್ದಳು. ಅವನು ಸಂತನ ಬಳಿಗೆ ಹೋಗಿ ಈ ವಿಷಯವನ್ನು ತಿಳಿಸಿದ. “”ತಾಯಿಗಾಗಿ ನಾನು ಇಷ್ಟೊಂದು ಶ್ರಮ ಅನುಭವಿಸಿದೆ. ಆದರೆ ಅವಳು ಬದುಕುವ ಸ್ಥಿತಿಯಲ್ಲಿ ಇಲ್ಲ. ನನ್ನ ತಾಯಿಯನ್ನು ಬದುಕುವಂತೆ ಮಾಡಿ” ಎಂದು ಬೇಡಿಕೊಂಡ. “”ನಿನ್ನ ತಾಯಿ ಎಷ್ಟು ಕಿತ್ತರೂ ಮರಳಿ ಬದುಕುವ ಗುಣವಿರುವ ಗರಿಕೆಯ ಹೆಣಿಗೆ ಹಾಕಿಟ್ಟಿರುವಳಲ್ಲವೆ? ಆ ಹೆಣಿಗೆಯನ್ನು ಅವಳ ಮೈಯ ಮೇಲೆ ಹೊದಿಸು. ಹೊದಿಕೆ ಜೀವಂತವಾಗಿ ಗರಿಕೆಯ ಹಾಗೆ ಮರುಜೀವ ಪಡೆದು ಏಳುತ್ತಾಳೆ” ಎಂದು ಸಂತನು ಹೇಳಿದ. ಚಿನ್ ಕೂಡಲೇ ಬದುಕಿಸಿಕೊಂಡ. ಲಿನ್ ತನ್ನ ಹೆಣಿಗೆಯನ್ನು ಹಾರುವ ಅರಮನೆಯಾಗಿ ಮಾಡಿಕೊಂಡು ಮಗನ ಜೊತೆಗೆ ಸುಖವಾಗಿದ್ದಳು. ಪ. ರಾಮಕೃಷ್ಣ ಶಾಸ್ತ್ರಿ