ಬೀಜಿಂಗ್: ಪೂರ್ವ ಲಡಾಖ್‌ನಲ್ಲಿ ಭಾರತೀಯ ಸೇನೆಯೊಂದಿಗೆ ಸಂಘರ್ಷ ನಡೆದ ವರ್ಷದ ಬಳಿಕ ಚೀನಾ ಸೇನೆಯು ತನ್ನ ಅಣ್ವಸ್ತ್ರ ಬಲ ವೃದ್ಧಿಸುವತ್ತ ಕಾರ್ಯತತ್ಪರವಾಗಿರುವ ಸುದ್ದಿಯೊಂದು ಹೊರಬಿದ್ದಿದೆ. ವಾಯವ್ಯ ಭಾಗದ ಯುಮೆನ್ ನಗರದ ಸಮೀಪವಿರುವ ಮರುಭೂಮಿಯೊಂದರಲ್ಲಿ ಖಂಡಾಂತರ ಕ್ಷಿಪಣಿಗಳನ್ನು ಸಂಗ್ರಹಿಸಿಡಲು ಸುಮಾರು 100ರಷ್ಟು ಭೂಗತ ಸಂಗ್ರಹಾಗಾರಗಳನ್ನು ಚೀನಾ ಸೇನೆ ನಿರ್ಮಿಸಿದೆ.
ಈಗಾಗಲೇ250ರಿಂದ 350ರಷ್ಟುಅಣ್ವಸ್ತ್ರಗಳನ್ನುಹೊಂದಿರುವ ಬೀಜಿಂಗ್, ತನ್ನ ಅಣ್ವಸ್ತ್ರ ಸಾಮರ್ಥ್ಯವನ್ನು ಇನ್ನಷ್ಟುಹೆಚ್ಚಿಸಿಕೊಳ್ಳುವ ನಿಟ್ಟಿನಲ್ಲಿ ಹೆಜ್ಜೆಯಿಟ್ಟಿರುವುದಕ್ಕೆ ಈ ಸಂಗ್ರಹಾಗಾರಗಳೇಸಾಕ್ಷಿ. ಗೋಬಿ ಮರುಭೂಮಿಯ ಒಂದು ತುದಿಯಲ್ಲಿನ ಉಪಗ್ರಹ ಚಿತ್ರಗಳು ಇದನ್ನು ಸಾಬೀತುಪಡಿಸಿರುವುದಾಗಿ ದಿ ವಾಷಿಂಗ್ಟನ್ ಪೋಸ್ಟ್ ವರದಿ ಮಾಡಿದೆ.
ಮರುಭೂಮಿಯಲ್ಲಿ ನಡೆಸಲಾದ ಉತ್ಖನನ, ಉದ್ದಕ್ಕೂ ತೋಡಲಾದ ಕಂದಕಗಳು, ಮೇಲ್ಭಾಗದಲ್ಲಿರುವ ರಚನೆಗಳು ಸೇರಿದಂತೆ ಹಲವು ಅಂಶಗಳು ಈ ಉಪಗ್ರಹ ಚಿತ್ರಗಳಲ್ಲಿ ಸೆರೆಯಾಗಿವೆ. ಕಳೆದ 4 ತಿಂಗಳ ಹಿಂದಿನ ಚಿತ್ರಗಳು ಹಾಗೂ ಕಳೆದ ಕೆಲ ವಾರಗಳ ಹೊಸ ಚಿತ್ರಗಳನ್ನು ಹೋಲಿಕೆ ಮಾಡಿ ನೋಡಿದಾಗ,ಈ ದಿಢೀರ್‌ಬೆಳವಣಿಗೆಗಳು ಬೆಳಕಿಗೆ ಬಂದಿವೆ.
ಡಿಎಫ್-14 ಹುದುಗಿಸಿಡುವ ಉದ್ದೇಶ: ಚೀನಾದ ಖಂಡಾಂತರ ಕ್ಷಿಪಣಿ ಡಿಎಫ್-41 ಅನ್ನು ಹುದುಗಿಸಿಡಲು ಈ ಭೂಗತ ಸಂಗ್ರಹಾಗಾರವನ್ನು ನಿರ್ಮಿಸಲಾಗುತ್ತದೆ. ಪ್ರತಿ ಕ್ಷಿಪಣಿಯೂ ಭಾರೀ ಪ್ರಮಾಣದ ಸಿಡಿತಲೆಗಳನ್ನು ಸುಮಾರು 15 ಸಾವಿರ ಕಿ.ಮೀ.ನಷ್ಟು ದೂರದವರೆಗೆ
ಹೊತ್ತೂಯ್ಯ ಬಲ್ಲ ಸಾಮರ್ಥ್ಯ ಹೊಂದಿವೆ ಎನ್ನುತ್ತಾರೆ ಚೀನಾದ ಅಣ್ವಸ್ತ್ರ ಯೋಜನೆಗಳ ತಜ್ಞ ಜೆಫ್ರಿ ಲೆವಿಸ್.