ನವದೆಹಲಿ: 2020ರ ಜೂನ್‌ನಲ್ಲಿ ಚೀನಾ ಮತ್ತು ಭಾರತದ ಯೋಧರ ನಡುವೆ ಘರ್ಷಣೆ ನಡೆದಿದ್ದ ಗಾಲ್ವಾನ್ ಕಣಿವೆಯಲ್ಲಿ 2022ರ ಜ.1ರಂದು ಚೀನದ ಧ್ವಜ ಪ್ರದರ್ಶಿಸಿದ್ದಾಗಿ ಚೀನ ಹೇಳಿತ್ತು. ವಿಡಿಯೋವೊಂದನ್ನೂ ಬಿಡುಗಡೆ ಮಾಡಿತ್ತು.
ಆದರೆ ಅದು ಸುಳ್ಳು. ಘರ್ಷಣೆಯ ಸ್ಥಳಕ್ಕೂ ಧ್ವಜ ಪ್ರದರ್ಶಿಸಿದ ಸ್ಥಳಕ್ಕೂ 1.2 ಕಿ.ಮೀ ಅಂತರವಿದೆ ಎಂಬುದು ಈಗ ಬಹಿರಂಗವಾಗಿದೆ.
ಈ ಬಗ್ಗೆ ಗುಪ್ತಚರ ಮಾಹಿತಿ ಟ್ರ್ಯಾಕ್ ಮಾಡು ವಂಥ ಡೇಮಿಯನ್ ಡೈಮನ್ ಟ್ವಿಟರ್‌ನಲ್ಲಿ ಫೋಟೊಗಳನ್ನು ಹಂಚಿಕೊಂಡಿದ್ದು “ಧ್ವಜ ಪ್ರದರ್ಶಿಸಿದ ಸ್ಥಳದಲ್ಲಿ ಯಾವ ಸೇನೆಯೂ ನಿಯೋಜನೆಯಾಗಿಲ್ಲ.
ಇದನ್ನೂ ಓದಿ:ಬಿಜೆಪಿಯಿಂದ ಸುವರ್ಣ ಗೋವಾ ನಿರ್ಮಾಣ: ಪ್ರಭು ಚವ್ಹಾಣ್
ಇದು ಉಪಗ್ರಹ ಚಿತ್ರಗಳಿಂದ ಹಾಗೂ ಅವರೇ ಬಿಡುಗಡೆ ಮಾಡಿರುವ ವಿಡಿಯೋದಿಂದ ತಿಳಿದುಬರುತ್ತದೆ’ ಎಂದು ಹೇಳಿದ್ದಾರೆ.
ಚೀನದ ಆ ಹೇಳಿಕೆಯನ್ನು ಭಾರತ ಸೇನೆಯೂ ತಳ್ಳಿಹಾಕಿತ್ತು ಹಾಗೂ ಗಾಲ್ವಾನ್ ಗಣಿಯಲ್ಲಿ ಭಾರತದ ಯೋಧರು ಧ್ವಜ ಪ್ರದರ್ಶಿಸಿದ ಫೋಟೋವನ್ನು ಹಂಚಿಕೊಂಡಿತ್ತು.