ಬೀಜಿಂಗ್: ಹಳದಿ ಸಮುದ್ರದಲ್ಲಿ ಸಂಭವಿಸಿದ ಚೀನಾದ ಪರಮಾಣು ಸಬ್ ಮರೈನ್ ದುರಂತದಲ್ಲಿ 55 ಮಂದಿ ಚೀನಾ ನಾವಿಕರು ಸಾವನ್ನಪ್ಪಿರುವುದಾಗಿ ಬ್ರಿಟನ್ ಮೂಲದ ದಿ ಟೈಮ್ಸ್ ವರದಿ ಮಾಡಿದೆ.
ಇದನ್ನೂ ಓದಿ:
ಬ್ರಿಟಿಷ್ ಗುಪ್ತಚರ ಇಲಾಖೆಯ ವರದಿಯನ್ನಾಧರಿಸಿದ ಸುದ್ದಿಯ ಪ್ರಕಾರ, ಈ ಘಟನೆ ಹಳದಿ ಸಮುದ್ರದಲ್ಲಿ ನಡೆದಿದೆ. ಆದರೆ ಚೀನಾ ಪರಮಾಣು ಸಬ್ ಮರೈನ್ ದುರಂತದ ಘಟನೆಯನ್ನು ತಳ್ಳಿಹಾಕಿದೆ.
ಗುಪ್ತಚರ ಇಲಾಖೆಯ ವರದಿಯಲ್ಲಿ, ಚೀನಾದ ಪರಮಾಣು ಜಲಾಂತರ್ಗಾಮಿ ದುರಂತಕ್ಕೀಡಾಗಿ, ಆಮ್ಲಜನಕದ ಕೊರತೆಯಿಂದ ಪಿಎಲ್ ಎ ನೇವಿ ಸಬ್ ಮರೈನ್ 093-417ನಲ್ಲಿದ್ದ ಕ್ಯಾಪ್ಟನ್ ಸೇರಿದಂತೆ 55 ಜನರು ಸಾವನ್ನಪ್ಪಿದ್ದಾರೆ. ಇದರಲ್ಲಿ 21 ಅಧಿಕಾರಿಗಳು ಸೇರಿರುವುದಾಗಿ ವರದಿ ವಿವರಿಸಿದೆ.
ಉತ್ತರ ಶಾಂಘೈನ ಶಾನ್ ಡಾಂಗ್ ಪ್ರಾಂತ್ಯದ ಸಮೀಪ ಪರಮಾಣು ಜಲಾಂತರ್ಗಾಮಿಯೊಳಗೆ ಆಮ್ಲಜನಕ ಕೊರತೆ ಉಂಟಾಗಿತ್ತು. ಅಲ್ಲದೇ ಸಮುದ್ರದ ಆಳದಲ್ಲಿ ಚೀನಾ ಅಳವಡಿಸಿದ್ದ ರಕ್ಷಣಾ ಬಲೆಯೊಳಗೆ ಸಿಲುಕಿದ್ದ ಪರಿಣಾಮ ದುರಂತ ಸಂಭವಿಸಿರುವುದಾಗಿ ದಿ ಟೈಮ್ಸ್ ವರದಿ ಮಾಡಿದೆ.
ಸಬ್ ಮರೈನ್ ಆಕಸ್ಮಿಕ ವೈಫಲ್ಯದಿಂದ ಜಲಾಂತರ್ಗಾಮಿಯೊಳಗಿನ ಆಮ್ಲಜನಕ ವ್ಯವಸ್ಥೆಯು ವಿಷಾನಿಲವಾಗಿ ಪರಿವರ್ತನೆಗೊಂಡು ಚೀನಾ ನಾವಿಕರು, ಅಧಿಕಾರಿಗಳು ದಾರುಣವಾಗಿ ಸಾವನ್ನಪ್ಪಿರುವುದಾಗಿ ವರದಿ ತಿಳಿಸಿದೆ.