Advertisement

ಡಿ.1ರಿಂದ ಭಾರತದ ಜೆನೆರಿಕ್‌ ಔಷಧಗಳು ಚೀನಾದಲ್ಲಿ ಲಭ್ಯ

11:30 AM Aug 29, 2019 | Team Udayavani |

ಬೀಜಿಂಗ್‌: ಈ ವರ್ಷದ ಡಿ.1ರಿಂದ ಭಾರತದಲ್ಲಿ ಸಿಗುವ ಅಗ್ಗದ ಸಾಮಾನ್ಯ ಔಷಧ (ಜೆನೆರಿಕ್‌ ಮೆಡಿಸಿನ್‌)ಗಳು ಚೀನಾದಲ್ಲಿಯೂ ಲಭ್ಯವಾಗಲಿವೆ. ಈ ನಿಟ್ಟಿನಲ್ಲಿ ಅಲ್ಲಿನ ಸರ್ಕಾರ ಕಾನೂನಿನಲ್ಲಿ ಬದಲಾವಣೆ ಮಾಡಿದೆ. ಹಾಲಿ ನಿಯಮಗಳ ಪ್ರಕಾರ ‘ವಿದೇಶಿ ಸಾಮಾನ್ಯ ಔಷಧ’ಗಳಿಗೆ ಅಲ್ಲಿ ಅವಕಾಶ ಇರಲಿಲ್ಲ. ಸೋಮವಾರ ಬೀಜಿಂಗ್‌ನಲ್ಲಿ ನಡೆದ ನ್ಯಾಷನಲ್ ಪೀಪಲ್ಸ್ ಕಾಂಗ್ರೆಸ್‌ (ಎನ್‌ಪಿಸಿ)ನ ಸಭೆಯಲ್ಲಿ ಭಾರತದಲ್ಲಿ ಅನುಮೋದನೆ ಪಡೆದ ಜೆನೆರಿಕ್‌ ಔಷಧಗಳನ್ನು ಅಲ್ಪ ಪ್ರಮಾಣದಲ್ಲಿ ಬಳಕೆ ಮಾಡಬಹುದು ಮತ್ತು ಅದು ಶಿಕ್ಷಾರ್ಹವಲ್ಲ ಎಂಬ ನಿರ್ಧಾರ ಕೈಗೊಳ್ಳಲಾಗಿದೆ.

Advertisement

ಈ ನಿರ್ಧಾರವು ಚೀನಾದಲ್ಲಿ ಕ್ಯಾನ್ಸರ್‌ ಸೇರಿದಂತೆ ಹಲವು ಪ್ರಮುಖ ರೋಗಗಳಿಂದ ಬಳಲುತ್ತಿರುವರಿಗೆ ಕಡಿಮೆ ವೆಚ್ಚದ ಔಷಧ ಸಿಗುವ ಮೂಲಕ ಸಹಾಯಕವಾಗಲಿದೆ. ಈ ಬಗ್ಗೆ ಸರ್ಕಾರಿ ಪತ್ರಿಕೆ ‘ಗ್ಲೋಬಲ್ ಟೈಮ್ಸ್‌’ ವರದಿ ಮಾಡಿದೆ. ಕಳೆದ ವರ್ಷ ತೆರೆ ಕಂಡ ‘ಡೈಯಿಂಗ್‌ ಟು ಸರ್ವೈವ್‌’ ಎಂಬ ಸಿನಿಮಾದಿಂದ ಪ್ರೇರಣೆಗೊಂಡು ಈ ನಿರ್ಧಾರ ಕೈಗೊಳ್ಳಲಾಗಿದೆ. ಸಿನಿಮಾದ ಕೆಲ ಭಾಗಗಳನ್ನು ಭಾರತದಲ್ಲಿ ಚಿತ್ರೀಕರಿಸಲಾಗಿತ್ತು. ಅದರಲ್ಲಿ ಕ್ಯಾನ್ಸರ್‌ ನಿರೋಧಕ ಔಷಧವನ್ನು ಭಾರತದಿಂದ ತೆಗೆದುಕೊಂಡು ಹೋಗಿ ಚೀನಾದಲ್ಲಿ ಮಾರುವ ಅಂಶವಿದೆ.

Advertisement

Udayavani is now on Telegram. Click here to join our channel and stay updated with the latest news.

Next