Advertisement

ಪಾಕ್‌ನಲ್ಲಿ ಚೀನ ಸೇನಾ ನೆಲೆ?

07:03 AM May 05, 2019 | mahesh |

ಹೊಸದಿಲ್ಲಿ: ತನ್ನ ಸೇನಾ ಸಾಮರ್ಥ್ಯವನ್ನು ಹೆಚ್ಚಿಸಿ ಕೊಳ್ಳುತ್ತಿರುವ ಚೀನ ಈಗ ಪಾಕಿಸ್ಥಾನದಲ್ಲೂ ಸೇನಾ ನೆಲೆಯನ್ನು ಸ್ಥಾಪಿಸಲು ಯೋಜಿಸುತ್ತಿದೆ ಎಂದು ಅಮೆರಿಕದ ರಕ್ಷಣಾ ಇಲಾಖೆ ಎಚ್ಚರಿಕೆ ನೀಡಿದೆ.

Advertisement

ಇದು ಭಾರತಕ್ಕೆ ಭಾರಿ ಆತಂಕ ಮೂಡಿಸಿದ್ದು, ಚೀನ ಈ ನಿಟ್ಟಿನಲ್ಲಿ ಹೆಜ್ಜೆ ಮುಂದಿಟ್ಟರೆ ಭಾರತದ ಬಳಿ ಯಾವುದೇ ಪರ್ಯಾಯ ಕಾರ್ಯತಂತ್ರವೂ ಇಲ್ಲ ಎಂದು ಅಮೆರಿಕದ ರಕ್ಷಣಾ ಇಲಾಖೆಯು ಸಂಸತ್ತಿಗೆ ನೀಡಿದ ವರದಿಯಲ್ಲಿ ವಿವರಿಸಿದೆ. 2017ರಲ್ಲಿ ಜಿಬೌತಿಯಲ್ಲಿ ಚೀನ ತನ್ನ ಸೇನಾ ನೆಲೆ ಸ್ಥಾಪಿಸಿದೆ. ಮುಂದಿನ ಹಂತದಲ್ಲಿ ಪಾಕಿಸ್ಥಾನದಲ್ಲೂ ನೆಲೆ ಸ್ಥಾಪಿಸುವ ಸಾಧ್ಯತೆಯಿದೆ.

ದಕ್ಷಿಣ ಏಷ್ಯಾದಲ್ಲಿ ಭಾರತದ ಪ್ರಭಾವವನ್ನು ಹತ್ತಿಕ್ಕಲು ಚೀನ ಹಿಂದಿನಿಂದಲೂ ಪಾಕಿಸ್ಥಾನವನ್ನು ಬಳಸುತ್ತಿದೆ ಎಂದು ವರದಿಯಲ್ಲಿ ಹೇಳಲಾಗಿದೆ. 35 ಸಾವಿರ ಕೋಟಿ ರೂ. ಮೌಲ್ಯದ ಶಸ್ತ್ರಾಸ್ತ್ರಗಳನ್ನು ಚೀನ ಈಗಾಗಲೇ ಪಾಕ್‌ಗೆ ಮಾರಾಟ ಮಾಡಿದೆ.

Advertisement

Udayavani is now on Telegram. Click here to join our channel and stay updated with the latest news.

Next