Advertisement

ದ. ಚೀನ ಸಮುದ್ರದಲ್ಲಿ ಚೀನದಿಂದ 20 ತೇಲುವ ಅಣು ವಿದ್ಯುತ್‌ ಸ್ಥಾವರ

04:26 PM Feb 14, 2017 | Team Udayavani |

ಬೀಜಿಂಗ್‌: ದಕ್ಷಿಣ ಚೀನ ಸಮುದ್ರದ ಒಡೆತನ ಕುರಿತಾದ ಜಾಗತಿಕ ವಿವಾದವನ್ನು ಇನ್ನಷ್ಟು ತೀವ್ರಗೊಳಿಸುವ ವಿದ್ಯಮಾನವಾಗಿ ಚೀನ, ತನ್ನ ದಕ್ಷಿಣ ಸಮುದ್ರದಲ್ಲಿ  ಸುಮಾರು 20 ತೇಲುವ ಅಣು ವಿದ್ಯುತ್‌ ಸ್ಥಾವರಗಳನ್ನು ಅಭಿವೃದ್ಧಿಪಡಿಸುವ ಮಹತ್ತರ ಯೋಜನೆಯನ್ನು ಪ್ರಕಟಿಸಿದೆ.

Advertisement

ಸಾಗರೋತ್ತರ ಯೋಜನೆಗಳಿಗೆ ಹಾಗೂ ಸಾಗರದಾಳದಲ್ಲಿನ ಅನಿಲ ನಿಕ್ಷೇಪಗಳನ್ನು ಶೋಧಿಸುವುದಕ್ಕೆ ಸ್ಥಿರವಾದ ವಿದ್ಯುತ್‌ ಪೂರೈಕೆ ಅಗತ್ಯವಿರುವುದರಿಂದ ತಾನು ದಕ್ಷಿಣ ಸಮುದ್ರದಲ್ಲಿ ತೇಲುವ ಅಣು ವಿದ್ಯುತ್‌ ಸ್ಥಾವರಗಳನ್ನು ಅಭಿವೃದ್ಧಿ ಪಡಿಸಲು ಉದ್ದೇಶಿಸಿರುವುದಾಗಿ ಚೀನ ಹೇಳಿದೆ.

ಚೀನ ತನ್ನ ಈ ತೇಲುವ ಅಣು ವಿದ್ಯುತ್‌ ಸ್ಥಾವರ ನಿರ್ಮಾಣವನ್ನು ಪಂಚ ವಾರ್ಷಿಕ ಅಭಿವೃದ್ಧಿ ಯೋಜನೆಯ ಅಂಗವನ್ನಾಗಿ ಮಾಡಿದೆ. ಹಾಗಿದ್ದರೂ ಚೀನೀ ಅಧಿಕಾರಿಗಳು ಈಗಾಗಲೇ ಈ ಪ್ರಸ್ತಾವಿತ ಸಾಗರಿಕ ಅಣುವಿದ್ಯುತ್‌ ಸ್ಥಾವರಗಳ ಏಕರೂಪತೆ ಮತ್ತು ಅವುಗಳಿಗೆ ಸಂಬಂಧಿಸಿದ ಮುಖ್ಯ ತಾಂತ್ರಿಕತೆಯನ್ನು ಅಭಿವೃದ್ಧಿ ಪಡಿಸುವ ಸಂಶೋಧನ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ.

ಚೀನದ ರಾಷ್ಟ್ರೀಯ ಪರಮಾಣು ನಿಗಮವು ದಕ್ಷಿಣ ಚೀನ ಸಮುದ್ರದಲ್ಲಿ ಸುಮಾರು 20 ತೇಲುವ ಅಣು ವಿದ್ಯುತ್‌ ಸ್ಥಾವರಗಳನ್ನು ಅಭಿವೃದ್ಧಿಪಡಿಸಲು ಮತ್ತು ಅವುಗಳನ್ನು 2019ರೊಳಗಾಗಿ ಕಾರ್ಯೋನ್ಮುಖಗೊಳಿಸಲು ಉದ್ದೇಶಿಸಿದೆ ಎಂದು ವರದಿಗಳು ತಿಳಿಸಿವೆ. 

Advertisement

Udayavani is now on Telegram. Click here to join our channel and stay updated with the latest news.

Next