Advertisement

ಚೀನಾದಲ್ಲಿ ಮುಂದುವರೆದ ಕೊರೊನಾ ಮರಣ ಮೃದಂಗ: ಬಲಿಯಾದವರ ಸಂಖ್ಯೆ 492ಕ್ಕೆ ಏರಿಕೆ

07:41 PM Mar 20, 2020 | Mithun PG |

ವುಹಾನ್: ಚೀನಾದಲ್ಲಿ ಕೊರೋನಾ ವೈರಸ್ ಗೆ ಬಲಿಯಾದವರ ಸಂಖ್ಯೆ 490 ಕ್ಕೆ ಏರಿದೆ. 24300ಕ್ಕಿಂತ ಹೆಚ್ಚು ಜನರಿಗೆ ಸೋಂಕು ತಗುಲಿದ್ದು ಪರಿಸ್ಥಿತಿ ಬಿಗಾಡಾಯಿಸಿದೆ. ಫಿಲಿಫೈನ್ಸ್ ಮತ್ತು ಹಾಂಕ್ ಕಾಂಗ್ ನಲ್ಲೂ ತಲಾ ಒಬ್ಬರು ಈ ಮಾರಾಣಾಂತಿಕ ವೈರಸ್ ಗೆ ಮೃತರಾಗಿದ್ದು ಜಾಗತಿಕವಾಗಿ ಬಲಿಯಾದವರ ಸಂಖ್ಯೆ 492ಕ್ಕೆ ಏರಿದೆ.

Advertisement

ಹಲವು ದೇಶಗಳು ಚೀನಾದಿಂದ ಬರುವ ಪ್ರವಾಸಿಗರಿಗೆ ನಿರ್ಬಂಧ ಹೇರಿದ್ದು , ವಿಮಾನಯಾನ ಸಂಸ್ಥೆಗಳು ಕೂಡ ಅತೀ ಹೆಚ್ಚು ಹಾನಿಗೊಳಪಟ್ಟ ಹುಬೈ ಪ್ರಾಂತಕ್ಕೆ  ತೆರಳುವ ವಿಮಾನಗಳ ಸೇವೆಯನ್ನು ರದ್ದುಪಡಿಸಿದೆ.

ಚೀನಾದ ರಾಷ್ಟ್ರೀಯ ಆರೋಗ್ಯ ಆಯೋಗ 24,324 ಜನರಿಗೆ ಸೋಂಕು ತಗುಲಿರುವ ಮಾಹಿತಿಯನ್ನು ಧೃಢಪಡಿಸಿವೆ. ಮಂಗಳವಾರ ಒಂದೇ ದಿನ 65 ಜನರು ಸಾವನ್ನಪ್ಪಿದ್ದಾರೆ. 490 ಜನರು ಮೃತರಲ್ಲಿ 479 ಸಾವುಗಳು ಹುಬೈ ಒಂದೇ ಪ್ರಾಂತ್ಯದಲ್ಲಿ ಘಟಿಸಿವೆ. ಚೀನಾದಲ್ಲಿ 15 ನಗರಗಳು ಸಂಪೂರ್ಣ ಲಾಕ್ ಡೌನ್  ಆಗಿದ್ದು ಇತರರಿಗೆ  ಪ್ರವೇಶವನ್ನು ಸಂಪೂರ್ಣ ನಿರ್ಬಂಧಿಸಲಾಗಿದೆ.

ಪ್ರಮುಖವಾಗಿ ಸೋಂಕು ಪೀಡಿತರಾಗಿ ಆಸ್ಪತ್ರೆಗೆ ದಾಖಲಾಗಿದ್ದ 892 ಜನರು ಗುಣಮುಖರಾಗಿದ್ದು ಅಲ್ಪ ಸಂತಸವನ್ನು ತಂದಿದೆ ಎಂದು ಚೀನಾ ವೈದ್ಯಾಧಿಕಾರಿಗಳು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next