Advertisement
ಚೀನದ ಕೇಂದ್ರ ಬ್ಯಾಂಕ್ – ಪೀಪಲ್ಸ್ ಬ್ಯಾಂಕ್ ಆಫ್ ಚೀನ (ಪಿಬಿಸಿ) ತನ್ನ ಡಿಜಿಟಲ್ ಕರೆನ್ಸಿ ಎಲೆಕ್ಟ್ರಾನಿಕ್ ಪಾವತಿ (ಡಿಸಿಇಪಿ) ಯನ್ನು ಪರಿಚಯಿಸುವ ಕಾರ್ಯಕ್ಕೆ ವೇಗ ನೀಡಲು ಆರಂಭಿಸಿದೆ. ಏಕೆಂದರೆ ಇದು ವಿಶ್ವದಾದ್ಯಂತದ ಕೇಂದ್ರ ಬ್ಯಾಂಕುಗಳ ನಡುವಿನ ಸ್ಪರ್ಧೆಯಿಂದ ಮುಂದೆ ಆರ್ಥಿಕವಾಗಿ ಸದೃಢವಾಗಿ ಉಳಿಯಬೇಕಾದರೆ ಮತ್ತು ಆರ್ಥಿಕ ಸಾರ್ವಭೌಮತ್ವವನ್ನು ಕಾಪಾಡಲು ಇದು ಸಹಾಯ ಮಾಡುತ್ತದೆ ಎಂದು ಗ್ಲೋಬಲ್ ಟೈಮ್ಸ್ ವರದಿ ಮಾಡಿದೆ.
Related Articles
Advertisement
ಅಮೆರಿಕ 5ಜಿ ತಂತ್ರಜ್ಞಾನ ಪರಿಚಯಿಸಿದ ಬಳಿಕ ಚೀನ ತನ್ನ ಹೆಚ್ಚಿನ ನಗರಗಳಲ್ಲಿ 5ಜಿಯನ್ನು ಪರಿಚಯಿಸಿದೆ. ಈ ಮೂಲಕ ಇಂದು ಜಗತ್ತಿನ ಅತೀದೊಡ್ಡ 5ಜಿ ರಾಷ್ಟ್ರಗಳ ಸಾಲಿನಲ್ಲಿ ಚೀನ ಅಗ್ರಸ್ಥಾನದಲ್ಲಿ ಗುರಿತಿಸಿಕೊಳ್ಳುತ್ತಿದೆ. ಇನ್ನು ವ್ಯಪಾರದಲ್ಲಿಯೂ ಚೀನದ ಬಹುತೇಕ ಉತ್ಪನ್ನಗಳನ್ನು ಅಮೆರಿಕ ಕಪ್ಪು ಪಟ್ಟಿಗೆ ಸೇರಿಸಿದೆ. ಇದರಲ್ಲಿ ತಾಂತ್ರಿಕ ಕ್ಷೇತ್ರಕ್ಕೆ ಸಂಬಂಧಪಟ್ಟ ಉತ್ಪನ್ನಗಳು ಹೆಚ್ಚು ಎಂಬುದು ಗಮನಾರ್ಹ. ಇದೀಗ ಡಿಜಿಟಲ್ ಕರೆನ್ಸಿಯನ್ನು ಪರಿಚಯಿಸಲಿರುವ ಚೀನ ಸಹಜವಾಗಿ ಅಮೆರಿಕದೊಂದಿಗೆ ಸ್ಪರ್ಧೆ ನಡೆಸುತ್ತಿದೆ ಎಂದರ್ಥ.
ಏನಿದು ಕರೆನ್ಸಿ?ಇದು ಒಂದು ಡಿಜಿಟಲ್ ಕರೆನ್ಸಿ. ಜಗತ್ತಿನ ಯಾವುದೇ ಭಾಗದಿಂದ ಕೆಲವೇ ನಿಮಿಷಗಳಲ್ಲಿ ಹಣ ಕಳಿಸಲು ಅಥವಾ ಪಡೆಯಲು ಬಳಸಬಹುದು. ಕೆಲವು ಕಡೆಗಳಲ್ಲಿ ಉತ್ಪನ್ನ ಮತ್ತು ಸೇವೆಗಳನ್ನು ಪಡೆಯಲೂ ಇದನ್ನು ಉಪಯೋಗಿಸಬಹುದು. ಷೇರು ಮತ್ತು ಚಿನ್ನದಲ್ಲಿಯೂ ಹೂಡಿಕೆ ಮಾಡಬಹುದಾಗಿದೆ. ಆದರೆ ಇಲ್ಲಿ ವರ್ಗಾವಣೆಗಳೆಲ್ಲವೂ ಇಂಟರ್ನೆಟ್ ಮೂಲಕ ನಡೆಯುತ್ತದೆ. ಪ್ರಮುಖ ಉಪಯೋಗಗಳೇನು?
ಹಣದ ತ್ವರಿತ ವರ್ಗಾವಣೆಗೆ ಇಲ್ಲಿ ಸಂಸ್ಕರಣೆ ಶುಲ್ಕ ಇರುವುದಿಲ್ಲ. ಇದ್ದರೂ ಅತ್ಯಲ್ಪ. ವಿಶ್ವಾದ್ಯಂತ ಚಲಾವಣೆ ಮಾಡಬಹುದು. ಉತ್ಪನ್ನ, ಸೇವೆಗಳ ಖರೀದಿಗೆ ಬಳಸಬಹುದು. ಇತ್ತೀಚೆಗೆ ಬಿಟ್‌ಕಾಯಿನ್‌ಗಳು ಭಾರೀ ಸುದ್ದಿಯಾಗಿತ್ತು.