Advertisement

ಆರ್‌ಸಿಇಪಿ: ಭಾರತದ ನಿರ್ಧಾರ ಗೌರವಿಸುತ್ತೇವೆ ಎಂದ ಚೀನ

09:49 AM Dec 17, 2019 | Hari Prasad |

ಹೊಸದಿಲ್ಲಿ: ಪ್ರಾದೇಶಿಕ ಸಮಗ್ರ ಆರ್ಥಿಕ ಸಹಭಾಗಿತ್ವ (ಆರ್‌ಸಿಇಪಿ) ಒಪ್ಪಂದಕ್ಕೆ ಸಹಿ ಹಾಕದೇ ಇರುವ ಭಾರತದ ನಿರ್ಧಾರವನ್ನು ನಾವು ಗೌರವಿಸುತ್ತೇವೆ ಎಂದು ಭಾರತದಲ್ಲಿ ಚೀನದ ರಾಯಭಾರಿಯಾಗಿರುವ ಸನ್‌ ವಿಡಾಂಗ್‌ ಹೇಳಿದ್ದಾರೆ.

Advertisement

ಆರ್‌ಸಿಇಪಿ ಬಗ್ಗೆ ಭಾರತ ಮಂಡಿಸಿರುವ ಕಳವಳವನ್ನು ಗೌರವಿಸುತ್ತೇವೆ. ಇತರೆ ಸದಸ್ಯ ರಾಷ್ಟ್ರಗಳ ಜತೆ ಸಮಾಲೋಚಿಸಿ, ಭಾರತದ ಕಳವಳವನ್ನು ಪರಿಹರಿಸುವ ನಿಟ್ಟಿನಲ್ಲಿ ಹೆಜ್ಜೆ ಇಡುತ್ತೇವೆ ಎಂದೂ ಅವರು ಹೇಳಿದ್ದಾರೆ. ಇದರ ಜತೆಗೆ ಮಹಾಬಲಿಪುರಂನಲ್ಲಿ ನಡೆದಿದ್ದ ಪ್ರಧಾನಿ ನರೇಂದ್ರ ಮೋದಿ ಮತ್ತು ಚೀನ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ ನಡುವಿನ ಎರಡನೇ ಆವೃತ್ತಿಯ ಅನೌಪಚಾರಿಕ ಮಾತುಕತೆ ನಿಧಾನವಾಗಿ ಪ್ರಭಾವ ಬೀರಲಾರಂಭಿಸಿದೆ ಎಂದು ಹೇಳಿದ್ದಾರೆ.

ಕಾಶ್ಮೀರ ವಿಚಾರದ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಚೀನ ರಾಯಭಾರಿ, ‘ಸುಸ್ಥಿರ ಮತ್ತು ಸದೃಢ ಸರಕಾರ ಇಲ್ಲದೆ ಅಭಿವೃದ್ಧಿ ಸಾಧ್ಯವೇ ಇಲ್ಲ. ಈ ನಿಟ್ಟಿನಲ್ಲಿ ನಮ್ಮ ನಿಲುವು ಸ್ಪಷ್ಟವಾಗಿದೆ’ ಎಂದು ಹೇಳಿದ್ದಾರೆ.

ವಿವಾದವನ್ನು ಶಾಂತಿಯುತವಾಗಿ ಬಗೆಹರಿಸಲು ಎಲ್ಲರೂ ಆದ್ಯತೆ ನೀಡಬೇಕು ಎಂದಿದ್ದಾರೆ. ಭಾರತ ಮತ್ತು ಚೀನಕ್ಕೆ ವಿಶ್ವದಲ್ಲಿಯೇ ಅತ್ಯಂತ ಬೃಹತ್‌ ರಾಷ್ಟ್ರವಾಗಬೇಕು ಎಂಬ ಕನಸುಗಳಿವೆ. ಈ ನಿಟ್ಟಿನಲ್ಲಿ ಚೀನ ಕೆಲವೊಂದು ಅಂಶಗಳಲ್ಲಿ ಸಾಧನೆ ಮಾಡಿದೆ. ಆದರೆ ಭಾರತ ಈ ನಿಟ್ಟಿನಲ್ಲಿ ಸಾಧನೆಯತ್ತ ಹೆಜ್ಜೆ ಹಾಕತೊಡಗಿದೆ ಎಂದು ಅವರು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next