Advertisement

China; ಶಕ್ತಿಶಾಲಿ ನೌಕೆ ಕಾರ್ಯಾಚರಣೆ ಆರಂಭ: ವಿಶೇಷತೆಯೇನು?

01:02 AM May 07, 2024 | Team Udayavani |

ಬೀಜಿಂಗ್‌: ಹಿಂದೂ ಮಹಾಸಾಗರದಲ್ಲಿ ತನ್ನ ಬಲ ಹೆಚ್ಚಿಸಿಕೊಳ್ಳಲು ಬಯಸುತ್ತಿರುವ ಚೀನ ಬತ್ತಳಿಕೆಗೆ ಮತ್ತೂಂದು ಶಕ್ತಿ ಸೇರ್ಪಡೆಯಾಗಿದೆ. “ಫುಜಿಯಾನ್‌’ ಹೆಸರಿನ ವಿಮಾನವಾಹಕ ನೌಕೆಯನ್ನು ಚೀನ ಕಡಲಿಗಿಳಿಸಿದ್ದು, ಇದು ಅತ್ಯಂತ ಶಕ್ತಿಶಾಲಿ ನೌಕೆಯಾಗಿದೆ.

Advertisement

ಇದರಲ್ಲಿ ಬೃಹತ್‌ ಯುದ್ಧವಿಮಾನಗಳನ್ನು ಇಳಿಸಲು ಸಾಧ್ಯವಿದೆ. ಅಲ್ಲದೇ ಕಡಿಮೆ ದೂರದಲ್ಲೇ ವಿಮಾನಗಳನ್ನು ಸುರಕ್ಷಿತವಾಗಿ ಟೇಕಾಫ್ ಮಾಡಬಲ್ಲ ವ್ಯವಸ್ಥೆ ಇದರಲ್ಲಿದೆ.

ನೌಕೆಯ ವಿಶೇಷತೆ:
ಫುಜಿಯಾನ್‌ ನೌಕೆ 79,000 ಟನ್‌ ತೂಕವಿದ್ದು, ವಿದ್ಯುತ್‌ಕಾಂತೀಯ ವಿಮಾನ ಉಡಾವಣ ವ್ಯವಸ್ಥೆಯನ್ನು ಹೊಂದಿದೆ. ವಿಶ್ವದ ಅತೀ ದೊಡ್ಡ ನೌಕೆಯಾದ ಗೆರಾಲ್ಡ್‌ ಆರ್‌ ಫೋರ್ಡ್‌ನಲ್ಲೂ ಇದೇ ವ್ಯವಸ್ಥೆ ಅಳವಡಿಸಲಾಗಿದೆ. ಯುದ್ಧವಿಮಾನಗಳು ದೂರದಲ್ಲಿರುವಾಗಲೇ ಅವುಗಳನ್ನು ಗುರುತಿಸಬಲ್ಲ ಶಕ್ತಿಶಾಲಿ ವ್ಯವಸ್ಥೆಯನ್ನು ಇದು ಹೊಂದಿದೆ. ಇದರ ಮೇಲೆ 70 ಯುದ್ಧವಿಮಾನಗಳನ್ನು ನಿಲ್ಲಿಸಬಲ್ಲಷ್ಟು ವಿಶಾಲ ಸ್ಥಳವಿದೆ.
ಚೀನಕ್ಕೆ ಬಲ: ಅಮೆರಿಕಕ್ಕೆ ಸಡ್ಡು ಹೊಡೆವ ಸಲುವಾಗಿ ಹಿಂದೂ ಮಹಾಸಾಗರದ ಮೇಲೆ ಹಕ್ಕು ಸಾಧಿಸಲು ಹೊರಟಿರುವ ಚೀನದ ಮಹತ್ವಾಕಾಂಕ್ಷೆಗೆ ಇದರಿಂದ ಹೆಚ್ಚು ಬಲ ದೊರೆತಿದೆ.

Advertisement

Udayavani is now on Telegram. Click here to join our channel and stay updated with the latest news.

Next