Advertisement

ಸಾಗರದಡಿಯಲ್ಲಿ ಚೀನಾ ಗುಪ್ತ ಕಾರ್ಯಚರಣೆ ಪತ್ತೆ: ಜಪಾನ್‌

08:04 PM Sep 12, 2021 | Team Udayavani |

ಜಪಾನ್‌: ಪೂರ್ವ ಚೀನಾ ಸಮುದ್ರದಲ್ಲಿರುವ ಜಪಾನ್‌ಗೆ ಸೇರಿದ ದ್ವೀಪವೊಂದರ ಬಳಿ ಚೀನಾದ ಜಲಾಂತರ್ಗಾಮಿಯೊಂದು ಗುಪ್ತವಾಗಿ ಹರಿದಾಡುತ್ತಿರುವುದನ್ನು ತಾನು ಪತ್ತೆ ಮಾಡಿರುವುದಾಗಿ ಜಪಾನ್‌ ಸರ್ಕಾರ ತಿಳಿಸಿದೆ.

Advertisement

“ಸಮುದ್ರದೊಳಗೆ ಗುಪ್ತವಾಗಿ ಚಲಿಸುತ್ತಾ ಜಪಾನ್‌ನ ದ್ವೀಪದ ಹತ್ತಿರಕ್ಕೆ ಆಗಮಿಸಿದ್ದ ಚೀನಾದ ಜಲಾಂತರ್ಗಾಮಿ ನೌಕೆ, ಆನಂತರ ಪಶ್ಚಿಮದ ಕಡೆಗೆ ಪ್ರಯಾಣ ಬೆಳೆಸಿದೆ. ಇದು ದಕ್ಷಿಣ ಚೀನಾ ಸಮುದ್ರದಲ್ಲಿ ಹಾಗೂ ಪೂರ್ವ ಚೀನಾ ಸಮುದ್ರದಲ್ಲಿ ಚೀನಾ ಗುಪ್ತವಾಗಿ ನಡೆಸುತ್ತಿರುವ ಸೇನಾ ಕಾರ್ಯಾಚರಣೆಗಳಿಗೆ ಪೂರಕವಾಗ ಸಾಕ್ಷ್ಯವನ್ನು ಒದಗಿಸುತ್ತಿದೆ’ ಎಂದು ಜಪಾನ್‌ ತಿಳಿಸಿದೆ.

ದಕ್ಷಿಣ ಚೀನಾ ಸಮುದ್ರದಲ್ಲಿ ಚೀನಾ ತನ್ನ ಪ್ರಾಬಲ್ಯವನ್ನು ಹೆಚ್ಚಿಸಿಕೊಳ್ಳಲು ಮಾಡುತ್ತಿರುವ ಪ್ರಯತ್ನವನ್ನು ಭಾರತ ಸೇರಿದಂತೆ ಹಲವಾರು ದೇಶಗಳು ವಿರೋಧಿಸುತ್ತಿರುವ ಬೆನ್ನಲ್ಲೇ ಜಪಾನ್‌ ನೀಡಿರುವ ಈ ಮಾಹಿತಿ ಮಹತ್ವ ಪಡೆದುಕೊಂಡಿದೆ.

ಇದನ್ನೂ ಓದಿ:ಬಿಜೆಪಿ ಹಣದಿಂದ ಅಧಿಕಾರಕ್ಕೆ ಬಂದಿರುವುದಕ್ಕೆ ಶ್ರೀಮಂತ್‌ ಪಾಟೀಲ್‌ ಹೇಳಿಕೆ ಸಾಕ್ಷಿ: ದಿನೇಶ್‌

ಚೀನಾಕ್ಕೆ ಜಪಾನ್‌-ವಿಯೆಟ್ನಾಂ ಸೆಡ್ಡು
ಈ ನಡುವೆ, ಚೀನಾಕ್ಕೆ ತೀವ್ರ ಆತಂಕ ಸೃಷ್ಟಿಸಿದ್ದ ಜಪಾನ್‌-ವಿಯೆಟ್ನಾಂ ನಡುವಿನ ಸೇನಾ ಸಹಕಾರ ಒಪ್ಪಂದಕ್ಕೆ ಆ ಎರಡೂ ದೇಶಗಳು ಸಹಿ ಹಾಕಿವೆ. ಈ ಒಪ್ಪಂದದ ಅಡಿಯಲ್ಲಿ, ಉಭಯ ದೇಶಗಳ ನಡುವೆ ಯುದ್ಧ ಸಲಕರಣೆಗಳು ಹಾಗೂ ತಂತ್ರಜ್ಞಾನಗಳ ವಿನಿಯಮ, ಜಂಟಿ ಸೇನಾ ಕವಾಯತು, ತುರ್ತು ಸಂದರ್ಭಗಳಲ್ಲಿ ಸೇನಾ ಸಹಕಾರ ಲಭ್ಯವಾಗಲಿದೆ. ಈ ಮೂಲಕ, ಚೀನಾ ಪ್ರಾಬಲ್ಯವನ್ನು ಮೂಲೆಗುಂಪು ಮಾಡುವ ಭಾರತ ಮತ್ತು ಜಗತ್ತಿನ ನಾನಾ ದೇಶಗಳ ಪ್ರಯತ್ನಕ್ಕೆ ಜಪಾನ್‌ ಹಾಗೂ ವಿಯೆಟ್ನಾಂ ಕೂಡ ಕೈ ಜೋಡಿಸಿದಂತಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next