Advertisement

ಗ್ರಾಹಕರ ಮಾಹಿತಿ ದೋಚುತ್ತಿರುವ ಚೀನಾ ಟಿವಿಗಳು?

08:30 PM May 05, 2021 | Team Udayavani |

ಬೀಜಿಂಗ್‌: ಭಾರತ ಸೇರಿದಂತೆ ಉತ್ತರ ಅಮೆರಿಕದಲ್ಲಿ ಲಕ್ಷಾಂತರ ಗ್ರಾಹಕರ ಮನೆಗಳಲ್ಲಿರುವ ಚೀನಾ ಮೂಲದ ಟಿವಿಗಳು ತಮ್ಮ ಗ್ರಾಹಕರ ಮಾಹಿತಿಯನ್ನು ಕದಿಯುತ್ತಿವೆ ಎಂಬ ಆತಂಕಕಾರಿ ಹಾಗೂ ಕುತೂಹಲಕಾರಿ ವಿಚಾರ ಬಯಲಾಗಿದೆ.

Advertisement

ಸಾಮಾನ್ಯವಾಗಿ, ಮನೆಯಲ್ಲಿ ಒಂದು ವೈಫೈ ನೆಟ್‌ವರ್ಕ್‌ಗೆ ಟಿವಿ ಮಾತ್ರವಲ್ಲದೆ, ಆ ಮನೆಯ ಸದಸ್ಯರ ಸ್ಮಾರ್ಟ್‌ ಫೋನ್‌ಗಳು, ಲ್ಯಾಪ್‌ಟಾಪ್‌ಗ್ಳೂ ಕನೆಕ್ಟ್ ಆಗಿರುತ್ತವೆ. ಆದರೆ, ಅದೇ ನೆಟ್‌ವರ್ಕ್‌ನಲ್ಲಿರುವ ಚೀನಾ ಮೂಲದ ಟಿವಿಗಳು ತಾವು ಕನೆಕ್ಟ್ ಆಗಿರುವ ವೈಫೈ ನೆಟ್‌ವರ್ಕ್‌ನ ಸಂಪರ್ಕದಲ್ಲಿರುವ ಉಳಿದೆಲ್ಲಾ ಇಲೆಕ್ಟ್ರಾನಿಕ್‌ ಸಾಮಗ್ರಿಗಳ ಮಾಹಿತಿಗಳನ್ನು ಕದಿಯುತ್ತವೆ ಎನ್ನಲಾಗಿದೆ.  ನೆಟ್‌ವರ್ಕ್‌ನಲ್ಲಿರುವ ಎಲ್ಲಾ ಮೊಬೈಲ್‌, ಲ್ಯಾಪ್‌ಟಾಪ್‌ನಲ್ಲಿರುವ ಮಾಹಿತಿಗಳನ್ನು, ಅವುಗಳ ಐಪಿ ವಿಳಾಸಗಳನ್ನು  ಪ್ರತಿ 2 ನಿಮಿಷಗಳಿಗೊಮ್ಮೆ ಸ್ಕ್ಯಾನ್‌ ಮಾಡಿ, ತನ್ನ ಮೂಲ ಕಂಪನಿಗೆ ರವಾನಿಸುತ್ತವೆ ಎಂದು ಆರೋಪಿಸಲಾಗಿದೆ.

ಬಯಲಾಗಿದ್ದು ಹೇಗೆ? :

ಚೀನಾದ ಸ್ಕೈ ವರ್ತ್‌ ಎಂಬ ಕಂಪನಿಯಲ್ಲಿರುವ ಆ್ಯಪ್‌, ಗ್ರಾಹಕರ ಮಾಹಿತಿಯನ್ನು ದೋಚುತ್ತಿದೆ ಎಂದು ಆ್ಯಪ್‌  ವಿಶ್ಲೇಷಕ ಸಂಸ್ಥೆ “ವಿ2ಇಎಕ್ಸ್‌’ನ ಬಳಕೆದಾರರು  ಜಾಲತಾಣಗಳ ಗ್ರೂಪ್‌ನಲ್ಲಿ ಆರೋಪಿಸಿದ್ದರು. ಇದು ವೈರಲ್‌ ಆಗುತ್ತಿದ್ದಂತೆ, ಸ್ಕೈ ವರ್ತ್‌ ಸಂಸ್ಥೆ ನಾಗರಿಕರ ಕ್ಷಮೆ ಕೇಳಿದೆ. ಟಿವಿಗಳಲ್ಲಿ ಪ್ರೀ ಲೋಡೆಡ್‌ ಆಗಿ ಅಳವಡಿಸಲಾಗಿರುವ “ಗೋಜೆನ್‌ ಸರ್ವೀಸ್‌ ಆ್ಯಪ್‌’ ಎಂಬ ಅಪ್ಲಿಕೇಷನ್‌ನಿಂದ ಆಗುತ್ತಿದೆ. ಅದರಿಂದ

ಮಾಹಿತಿಯನ್ನು ಆ್ಯಪ್‌ ತಯಾರಿಸಿರುವ ಗೋಜೆನ್‌ ಡೇಟಾ ಎಂಬ ಕಂಪನಿ ಪಡೆಯುತ್ತಿದೆ ಎಂದು ದೂರಿದೆ. ಅಲ್ಲದೆ, ಈ ಅಪ್ಲಿಕೇಷನ್‌ ಅನ್ನು ಈ ಕೂಡಲೇ ನಿಷ್ಕ್ರಿಯಗೊಳಿಸಿರುವುದಾಗಿಯೂ ಸ್ಪಷ್ಟಪಡಿಸಿದೆ.

Advertisement

ಭಾರತದಲ್ಲಿಯೂ ಸಮಸ್ಯೆ ? :

ಭಾರತದಲ್ಲಿಯೂ ಸ್ಕೈ ವರ್ತ್‌ ಸಂಸ್ಥೆ, ಮೆಟ್ಜ್ ಎಂಬ ಬ್ರಾಂಡ್‌ ಹೆಸರಿನಡಿ ಟಿವಿಗಳನ್ನು ಮಾರಾಟ ಮಾಡುತ್ತಿದೆ. ಆದರೆ, ಭಾರತದಲ್ಲಿ ಅದೇ ರೀತಿಯ ಗೂಢಚರ್ಯೆ ನಡೆಯುತ್ತಿದೆಯೇ ಎಂಬ ಬಗ್ಗೆ ಸ್ಪಷ್ಟತೆ ಸಿಕ್ಕಿಲ್ಲ. ಕಳೆದ ವರ್ಷ, ಭಾರತದಲ್ಲಿರುವ ಟಿಸಿಎಲ್‌ ಬ್ರಾಂಡ್‌ನ‌ ಟಿವಿಗಳಲ್ಲಿ ಮಾಹಿತಿ ಸೋರಿಕೆಗೆ ಸುಲಭವಾಗಿಸುವ ಸಾಧ್ಯತೆಗಳಿವೆ ಎಂದು ಹೇಳಿದ್ದರು

Advertisement

Udayavani is now on Telegram. Click here to join our channel and stay updated with the latest news.

Next