Advertisement
ಈ ವರ್ಷದ ಮೇನಲ್ಲಿ ಕ್ಸಿನ್‌ಜಿಯಾಂಗ್ ಪ್ರಾಂತ್ಯದಲ್ಲಿ ಇದೇ ಮಾದರಿಯ ರಂಧ್ರ ಕೊರೆದಿತ್ತು. ಸದ್ಯ ಕೈಗೆತ್ತಿಕೊಳ್ಳಲಾಗಿರುವ ಕಾಮಗಾರಿ ಹಿಂದಿನದ್ದಕ್ಕಿಂತ ಆಳದ್ದಾಗಿರಲಿದೆ.ಚೀನಾದ ಆಗ್ನೇಯ ಭಾಗದಲ್ಲಿ ಇರುವ ಸಿಚುವಾನ್ ಪ್ರಾಂತ್ಯದಲ್ಲಿ ಹೇರಳವಾಗಿ ನೈಸರ್ಗಿಕ ಅನಿಲದ ನಿಕ್ಷೇಪಗಳಿವೆ. ಚೀನಾ ಸರ್ಕಾರಿ ಸ್ವಾಮ್ಯದ ಕಂಪನಿಗಳು ಇದುವರೆಗೆ ಅದನ್ನು ಬಳಕೆ ಮಾಡಿಲ್ಲ. ಉಕ್ರೇನ್ ಯುದ್ಧ ಸೇರಿದಂತೆ ಹಲವು ಜಗತ್ತಿನ ರಾಜಕೀಯ ತಲ್ಲಣಗಳಿಂದಾಗಿ ದೇಶಿಯವಾಗಿಯೇ ಇಂಧನ ಕ್ಷೇತ್ರವನ್ನು ಬಲಪಡಿಸಿಕೊಂಡು ಇತರ ರಾಷ್ಟ್ರಗಳ ಮೇಲೆ ಅವಲಂಬನೆ ತಗ್ಗಿಸಿಕೊಳ್ಳುವ ನಿಟ್ಟಿನಲ್ಲಿ ಸಿಚುವಾನ್‌ನಲ್ಲಿ ಇಂಥ ಪ್ರಯೋಗಕ್ಕೆ ಮುಂದಾಗಿದೆ.