ಬ್ರಿಟನ್‌ನ ಬ್ರಿಟಿಷ್ ಆಫ್ ಕಾರ್ನ್ವಾಲ್‌ನಲ್ಲಿ ನಡೆಯುತ್ತಿರುವ ಜಿ-7 ರಾಷ್ಟ್ರಗಳ ಶೃಂಗದಲ್ಲಿ ಕೊರೊನಾ ಸಾಂಕ್ರಾಮಿಕದ ವಿರುದ್ಧದ ಹೋರಾಟ, ಲಸಿಕೆ ಉತ್ಪಾದನೆ, ಲಸಿಕೆಯ ಕಚ್ಚಾ ಪದಾರ್ಥಗಳ ಆಮದು ಮತ್ತು ರಫ್ತು ಮೇಲಣ ನಿರ್ಬಂಧಗಳ ಕುರಿತಂತೆ ವಿಸ್ತೃತವಾಗಿ ಚರ್ಚೆ ನಡೆದಿದೆ. ಕೋವಿಡ್ ವಿರುದ್ಧದ ಸಮರದಲ್ಲಿ ಪರಸ್ಪರ ಕೈಜೋಡಿಸಲು ಜಿ-7 ರಾಷ್ಟ್ರ ಗಳ ನಾಯಕರು ಸಮ್ಮತಿಸಿದ್ದಾರಲ್ಲದೆ ಬಡ ರಾಷ್ಟ್ರಗಳಿಗೆ ಒಂದು ಶತಕೋಟಿ ಡೋಸ್‌ಗಳಷ್ಟು ಲಸಿಕೆಯನ್ನು ನೀಡಲು ತೀರ್ಮಾನಿಸಿದ್ದಾರೆ.
ಇದರ ನಡುವೆ ಈ ಶೃಂಗದಲ್ಲಿ ಕೊರೊನಾ ವೈರಸ್‌ನ ಮೂಲ ಪತ್ತೆಯ ಕುರಿತಂತೆ ವಿಶ್ವದ ಪ್ರಬಲ ರಾಷ್ಟ್ರಗಳ ನಾಯಕರು ಸಮಗ್ರವಾಗಿ ಚರ್ಚೆ ನಡೆಸಿದ್ದು ವಿಶ್ವದ ಭವಿಷ್ಯದ ದೃಷ್ಟಿಯಿಂದ ಈ ಬಗ್ಗೆ ವಿಸ್ತೃತ ತನಿಖೆ ಮತ್ತು ಅಧ್ಯಯನ ನಡೆಸುವ ಅಗತ್ಯವಿದೆ ಎಂದು ಬಲವಾಗಿ ಪ್ರತಿಪಾದಿಸಿದ್ದಾರೆ. 2019ರಲ್ಲಿ ಕೊರೊನಾ ವೈರಸ್ ಚೀನದ ವುಹಾನ್‌ನಲ್ಲಿನ ಮಾಂಸ ಮಾರುಕಟ್ಟೆಯಲ್ಲಿ ಪತ್ತೆಯಾಗಿತ್ತು. ಆ ಬಳಿಕ ವಾರಗಳ ಅಂತರದಲ್ಲಿ ಚೀನ ಮಾತ್ರವಲ್ಲದೆ ವಿಶ್ವದ ವಿವಿಧ ದೇಶಗಳಿಗೆ ಹರಡಲ್ಪಟ್ಟಿತ್ತು. ಸೋಂಕು ಪತ್ತೆ ಯಾಗಿ ಸರಿಸುಮಾರು ಒಂದೂವರೆ ವರ್ಷ ಕಳೆದರೂ ಸೋಂಕಿನ ತೀವ್ರತೆ ಇನ್ನೂ ಕಡಿಮೆಯಾಗಿಲ್ಲ. ವಿಶ್ವದ ಕೆಲವೊಂದು ರಾಷ್ಟ್ರಗಳಲ್ಲಿ ಕೊರೊನಾ ಸೋಂಕು ರೂಪಾಂತರ ಹೊಂದಿ ಆರೇಳು ಅಲೆಗಳನ್ನು ಕಂಡಿದ್ದರೆ ಭಾರತದಲ್ಲಿ ಈಗಷ್ಟೇ ಎರಡನೇ ಅಲೆ ನಿಯಂತ್ರಣಕ್ಕೆ ಬರತೊಡಗಿದೆ.
ಆರಂಭದಲ್ಲಿ ಈ ವೈರಸ್ ಪ್ರಾಣಿಗಳಿಂದ ಮನುಷ್ಯರಿಗೆ ಹರಡಿದೆ ಎಂದು ಹೇಳಲಾಗಿತ್ತು. ಆದರೆ ಸೋಂಕಿನ ತೀವ್ರತೆ ಮತ್ತು ಚೀನದ ವರ್ತ ನೆಗಳು ಈ ವೈರಸ್‌ನ ಮೂಲದ ಬಗೆಗೆ ಅನುಮಾನ ಮೂಡುವಂತೆ ಮಾಡಿ ದ್ದವು. ಮೊದಲನೇ ಅಲೆಯ ವೇಳೆಯೇ ಕೊರೊನಾ ವೈರಸ್ ಚೀನದ ಪ್ರಯೋಗಾಲಯದಲ್ಲಿ ಸೃಷ್ಟಿಯಾದ ಜೈವಿಕ ವೈರಾಣು ಎಂದು ಕೆಲ ವೊಂದು ವಿಜ್ಞಾನಿಗಳು ಸಂಶಯವನ್ನು ವ್ಯಕ್ತಪಡಿಸಿದ್ದರು. ಆದರೆ ಚೀನ ಇದನ್ನು ತಳ್ಳಿಹಾಕಿತ್ತು.
ತಿಂಗಳ ಹಿಂದೆ ರಕ್ಷಣ ತಜ್ಞರ ತಂಡ ಕೊರೊನಾ ವೈರಸ್ ಚೀನದ ವುಹಾ ನ್‌ನಲ್ಲಿರುವ ಇನ್‌ಸ್ಟಿಟ್ಯೂಟ್ ಆಫ್ ವೈರಾಲಜಿಯಿಂದ ಸೋರಿಕೆಯಾಗಿತ್ತು ಎಂಬ ಬಗ್ಗೆ ಕೆಲವೊಂದು ಸಾಕ್ಷ್ಯಾಧಾರಗಳನ್ನು ಬಹಿರಂಗಗೊಳಿಸಿತ್ತು. ಚೀನದ ವಿಜ್ಞಾನಿಗಳು ವಿಶ್ವದ ಇತರ ರಾಷ್ಟ್ರಗಳ ವಿರುದ್ಧ ಜೈವಿಕ ಸಮರಕ್ಕೆ ಸಜ್ಜಾ ಗುತ್ತಿದ್ದು ಇದರ ಭಾಗವಾಗಿ ಪ್ರಯೋಗಾಲಯದಲ್ಲಿ ಈ ವೈರಾಣು ವನ್ನು ಅಭಿವೃದ್ಧಿಪಡಿಸಲಾಗುತ್ತಿತ್ತು. ಈ ವೇಳೆ ವೈರಾಣು ಸೋರಿಕೆಯಾಗಿದೆ ಎಂದು ಆರೋಪಿಸಿತ್ತಲ್ಲದೆ ಕೆಲವೊಂದು ದಾಖಲೆಗಳನ್ನು ಮಾಧ್ಯಮಗಳಿಗೆ ಬಿಡುಗಡೆ ಮಾಡಿತ್ತು. ಇದಾದ ಬಳಿಕ ಕೊರೊನಾ ವೈರಾಣುವಿನ ಮೂಲ ಪತ್ತೆಗಾಗಿ ಚೀನದ ಮೇಲೆ ಜಾಗತಿಕವಾಗಿ ಒತ್ತಡ ಹೆಚ್ಚುತ್ತಲೇ ಸಾಗಿದ್ದು ಈ ನಿಟ್ಟಿನಲ್ಲಿ ಅಮೆರಿಕ, ಬ್ರಿಟನ್ ಸಹಿತ ವಿಶ್ವದ ಪ್ರಬಲ ರಾಷ್ಟ್ರಗಳು ನಿರಂತರ ಅಧ್ಯಯನ ಮತ್ತು ಸಂಶೋಧನೆಯಲ್ಲಿ ತೊಡಗಿವೆ. ಈಗ ಜಿ-7ರಾಷ್ಟ್ರಗಳ ಶೃಂಗದಲ್ಲೂ ನಾಯಕರು ಈ ವಿಚಾರವಾಗಿ ಸ್ಪಷ್ಟ ಅಧ್ಯ ಯನ ನಡೆಸುವ ಅಗತ್ಯವಿದೆ ಎಂದು ಹೇಳಿದ್ದಾರೆ. ಇದಕ್ಕೆ ವಿಶ್ವ ಆರೋಗ್ಯ ಸಂಸ್ಥೆ ಯೂ ದನಿಗೂಡಿಸಿದೆ. ಇವೆಲ್ಲದರ ಹೊರತಾಗಿಯೂ ಚೀನ ಇವೆಲ್ಲ ಅಸಂ ಬದ್ಧ ಎನ್ನುವ ಮೂಲಕ ತನ್ನ ಮೊಂಡುವಾದವನ್ನು ಮುಂದುವರಿಸಿದೆ. ಈ ಬಾರಿ ಚೀನ ಸೋಂಕಿನ ಮೂಲ ಪತ್ತೆಗೆ ಜಾಗತಿಕ ಸಮುದಾಯ ದೊಂದಿಗೆ ಕೈಜೋಡಿಸದೇ ಹೋದಲ್ಲಿ ಮುಂದಿನ ದಿನಗಳಲ್ಲಿ ಏಕಾಂಗಿ ಯಾಗಲಿದೆ ಮಾತ್ರವಲ್ಲದೆ ಗಂಭೀರವಾದ ಪರಿಣಾಮಗಳನ್ನು ಎದುರಿಸ ಬೇಕಾದ ಪರಿಸ್ಥಿತಿಯನ್ನು ಮೈಮೇಲೆ ಎಳೆದುಕೊಳ್ಳಲಿದೆ.