ಬೀಜಿಂಗ್: ಚೀನಕ್ಕೆ ಒಂದು ದಿನದ ಅವಧಿಯಲ್ಲಿ ಮತ್ತೆ 3,400 ಹೊಸ ಪ್ರಕರಣಗಳು ದೃಢಪಟ್ಟಿವೆ. ಈ ಪೈಕಿ ಶಾಂಘೈ ಸೇರಿದಂತೆ 19 ಪ್ರಾಂತ್ಯಗಳಲ್ಲಿ ಸೋಂಕು ಸಂಖ್ಯೆ ಹೆಚ್ಚಾಗಿದೆ. ಹೀಗಾಗಿ, ಹಲವೆಡೆ ಮತ್ತೆ ಲಾಕ್‌ಡೌನ್ ಮಾಡಲು ಹಾಗೂ ಶಾಲೆಗಳನ್ನು ಬಂದ್ ಮಾಡಲು ಸ್ಥಳೀಯ ಅಧಿಕಾರಿಗಳು ಆದೇಶ ನೀಡಿದ್ದಾರೆ.
ಇದನ್ನೂ ಓದಿ:ಬೆಂಗಳೂರು ಟೆಸ್ಟ್: 40 ವರ್ಷಗಳ ಹಿಂದಿನ ಕಪಿಲ್ ದೇವ್ ದಾಖಲೆ ಮುರಿದ ರಿಷಭ್ ಪಂತ್
ಜಿಲಿನ್ ಎಂಬ ನಗರವನ್ನು ಆಂಶಿಕವಾಗಿ ಬಂದ್ ಮಾಡಲಾಗಿದೆ. ಅಲ್ಲಿನ ಆರೋಗ್ಯ ಇಲಾಖೆ ಅಧಿಕಾರಿಗಳು ನೀಡಿದ ಮಾಹಿತಿ ಪ್ರಕಾರ ನಗರದಲ್ಲಿರುವ ಜನರಿಗೆ ಪೂರ್ಣ ಪ್ರಮಾಣದಲ್ಲಿ ಸೋಂಕು ಪತ್ತೆ ಪರೀಕ್ಷೆ ನಡೆಸಲು ಸೂಕ್ತ ವ್ಯವಸ್ಥೆ ಇಲ್ಲ ಎಂದು ಒಪ್ಪಿಕೊಂಡಿದ್ದಾರೆ. ಈಗಾಗಲೇ ಅಲ್ಲಿ ಆರು ಹಂತದ ಪರೀಕ್ಷೆ ಮಾಡಿ ಮುಕ್ತಾಯಗೊಳಿಸಲಾಗಿದೆ.
ಇದರ ಹೊರತಾಗಿಯೂ 500 ಮಂದಿಗೆ ಒಮಿಕ್ರಾನ್ ರೂಪಾಂತರಿ ದೃಢಪಟ್ಟಿದೆ. ಉತ್ತರ ಕೊರಿಯಾಕ್ಕೆ ಹೊಂದಿಕೊಂಡಿರುವ ಗಡಿ ನಗರ ಯಾಂಜಿಯನ್ನು ಸಂಪೂರ್ಣವಾಗಿ ಸೋಂಕಿನ ಹಿನ್ನೆಲೆಯಲ್ಲಿ ಬಂದ್ ಮಾಡಲಾಗಿದೆ.
2019ರಲ್ಲಿ ಜಗತ್ತಿಗೆ ಸೋಂಕು ಹಬ್ಬಲು ಕಾರಣವಾಗಿರುವ ಚೀನದಲ್ಲಿ ಅದರ ನಿಯಂತ್ರಣಕ್ಕೆ ಕಠಿಣಾತಿ ಕಠಿಣ ನಿಯಮಗಳನ್ನು ಜಾರಿ ಮಾಡಿದ್ದರೂ, ನಿರೀಕ್ಷಿತ ಮಟ್ಟದಲ್ಲಿ ಯಶಸ್ವಿಯಾಗಿಲ್ಲ.