Advertisement

ಚೀನಾ 1967ರ ಘಟನೆ ಯಾಕೆ ಪ್ರಸ್ತಾಪಿಸುತ್ತಿಲ್ಲ?ಅಂದು ಭಾರತ ಬಲವಾದ ಹೊಡೆತ ಕೊಟ್ಟಿತ್ತು…

03:12 PM Jun 18, 2020 | Nagendra Trasi |

ಮಣಿಪಾಲ:ಭಾರತ, ಚೀನಾ ನಡುವಿನ ಗಡಿ ತಕರಾರು ಹೊಸದೇನಲ್ಲ. ಸುಮಾರು 45 ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ಉಭಯ ದೇಶಗಳ ನಡುವಿನ ಸಂಘರ್ಷದಲ್ಲಿ ಯುದ್ಧೇತರ ಹಲ್ಲೆಯಲ್ಲಿ ಹೆಚ್ಚಿನ ಭಾರತೀಯ ಯೋಧರು ಹುತಾತ್ಮರಾಗಿದ್ದಾರೆ. ಆದರೆ ಪದೇ, ಪದೇ 1962ರ ಯುದ್ಧದ ಘಟನೆ ನೆನಪಿಸಿ ಬೀಗುತ್ತಿರುವ ಚೀನಾಕ್ಕೆ ಭಾರತೀಯ ಸೈನಿಕರ ತಾಕತ್ತು, ಶೌರ್ಯದ ಬಗ್ಗೆ ಜಾಣ ಕುರುಡು ಪ್ರದರ್ಶಿಸುತ್ತಿರುವುದೇಕೆ? ಗಡಿ ತಕರಾರು ವಿಚಾರ ಬಂದಾಗಲೆಲ್ಲಾ ಭಾರತ ಕೂಡಾ ಡ್ರ್ಯಾಗನ್ ಸೇನೆಯನ್ನು ಹಲವು ಬಾರಿ ಎದುರಿಸಿ ಹಿಂದಕ್ಕೆ ಕಳುಹಿಸಿದ್ದನ್ನು ನೆನಪಿಸಿಕೊಳ್ಳಬೇಕು.

Advertisement

ಇದನ್ನೂ ಓದಿ:ಚೀನ ಉದ್ಧಟತನಕ್ಕೆ ಏನು ಕಾರಣ?

ಚೀನಾ 1967ರ ಘಟನೆ ಯಾಕೆ ಪ್ರಸ್ತಾಪಿಸುತ್ತಿಲ್ಲ?
1967ರ ಆಗಸ್ಟ್ 13ರಂದು ಭಾರತದ ಗಡಿ ಪ್ರದೇಶವಾದ ನಾಥು ಲಾ ಪ್ರದೇಶದಲ್ಲಿ ಚೀನಾ ಸೇನೆ ಕಂದಕ ಮಾಡಲು ಆರಂಭಿಸಿತ್ತು. ಇದನ್ನು ಭಾರತೀಯ ಸೇನೆ ಸೂಕ್ಷ್ಮವಾಗಿ ಗಮನಿಸುತ್ತಲೇ ಇತ್ತು, ಅದರಲ್ಲಿ ಸಿಕ್ಕಿಂ ಒಳಭಾಗದಲ್ಲಿಯೂ ಚೀನಾ ಕೆಲವು ಕಂದಕ ಮಾಡಿದ್ದರು. ಈ ವೇಳೆಯೂ ಸ್ಥಳೀಯ ಚೀನಾ ಕಮಾಂಡರ್ ಗಳ ಹಂತದಲ್ಲಿ ಮಾತುಕತೆ ನಡೆಸಿದ ಪರಿಣಾಮ ಕಂದಕ ಮುಚ್ಚಿ ಸೇನೆಯನ್ನು ವಾಪಸ್ ತೆಗೆದುಕೊಳ್ಳುವಂತೆ ಭಾರತ ಮಾಡಿತ್ತು. ನಂತರ ಆಗಸ್ಟ್ 23ರಂದು ಶಸ್ತ್ರಸಜ್ಜಿತ ಹಲವು ಚೀನಿ ಸೈನಿಕರು ನಾಥುಲಾ ಪ್ರದೇಶಕ್ಕೆ ಆಗಮಿಸಿ ಭಾರತೀಯ ಯೋಧರನ್ನು ಬೆದರಿಸುವ ತಂತ್ರ ನಡೆಸಿತ್ತು. ಆದರೆ ಭಾರತದ ಸೈನಿಕರು ಬಗ್ಗದ ಪರಿಣಾಮ ಚೀನಿ ಪಡೆ ಬಂದ ದಾರಿಗೆ ಸುಂಕ ಇಲ್ಲ ಎಂಬಂತೆ ವಾಪಸ್ ಆಗಿತ್ತು ಎಂದು ವರದಿ ವಿವರಿಸಿದೆ.

ಇದನ್ನೂ ಓದಿ:ಗಡಿ ಘರ್ಷಣೆ: ಚೀನದ 43 ಸೈನಿಕರ ಹತ್ಯೆ?

1967ರ ಅಕ್ಟೋಬರ್ 1ರಂದು ಉತ್ತರ ನಾಥುಲಾ ಪ್ರದೇಶದಿಂದ ಕೆಲವು ಕಿಲೋ ಮೀಟರ್ ದೂರದಲ್ಲಿರುವ ಚೋ ಲಾ ಪ್ರದೇಶದಲ್ಲಿ ಮತ್ತೆ ಭಾರತ ಮತ್ತು ಚೀನಾ ಸೈನಿಕರ ನಡುವೆ ಘರ್ಷಣೆ ಆರಂಭವಾಗಿತ್ತು. ಭಾರತ ಸರ್ಕಾರ ನೀಡಿರುವ ಹೇಳಿಕೆ ಪ್ರಕಾರ ಸಿಕ್ಕಿಂ ಪ್ರದೇಶದೊಳಕ್ಕೆ ಚೀನಾ ಸೈನಿಕರು ಒಳನುಸುಳಿ ಬಂದಾಗ ಭಾರತೀಯ ಸೇನೆ ಪ್ರತಿರೋಧ ವ್ಯಕ್ತಪಡಿಸಿ ಕೈ, ಕೈ ಮಿಲಾಯಿಸಿಕೊಂಡಿದ್ದರು. ಈ ಸಂದರ್ಭದಲ್ಲಿ ನಡೆದ ದಾಳಿಯಲ್ಲಿ 88 ಭಾರತೀಯ ಸೈನಿಕರು ಹುತಾತ್ಮರಾಗಿದ್ದು, ಭಾರತೀಯ ಪಡೆಯ ತಿರುಗೇಟಿಗೆ ಬರೋಬ್ಬರಿ 340 ಸೈನಿಕರು ಸಾವನ್ನಪ್ಪಿದ್ದರು ಎಂದು ವರದಿ ತಿಳಿಸಿದೆ.

Advertisement

ಇದನ್ನೂ ಓದಿ:ಮಾತುಕತೆಗೆಂದು ತೆರಳಿದ್ದ ಭಾರತೀಯ ಯೋಧರ ಮೇಲೆ ಚೀನಿ ಸೈನಿಕರ ಅಟ್ಟಹಾಸ

ಈಗಾಗಲೇ ಡೋಕ್ಲಾಂ ಪ್ರದೇಶದಲ್ಲಿ ಚೀನಾ ರಸ್ತೆ ನಿರ್ಮಿಸುವ ಕೆಲಸಕ್ಕೆ ಮುಂದಾದ ವೇಳೆ ಭಾರತದ ಸೇನೆ ಅದನ್ನು ತಡೆದಿದೆ. ಈ ಸಂಘರ್ಷ ತಿಂಗಳು ಕಾಲ ನಡೆದಿತ್ತು. ಇದೀಗ ಭಾರತ ಸರ್ಕಾರ ಲಡಾಖ್ ಹಾಗೂ ಸಮೀಪದ ಪ್ರದೇಶದಲ್ಲಿ ರಸ್ತೆ ನಿರ್ಮಿಸುತ್ತಿರುವುದು ಚೀನಾಕ್ಕೆ ನುಂಗಲಾರದ ಬಿಸಿ ತುಪ್ಪವಾಗಿದ್ದು, ಇದರ ಪರಿಣಾಮ ಸಂಘರ್ಷದ ಹಾದಿ ಹಿಡಿದಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಆದರೆ 1962ರ ಸ್ಥಿತಿ ಈಗಿಲ್ಲ, ಪ್ರಸ್ತುತ ಭಾರತ ಸದೃಢವಾಗಿದ್ದು, ಎಲ್ಲಾ ಪರಿಸ್ಥಿತಿಯನ್ನು ಎದುರಿಸಲು ಸಿದ್ಧವಾಗಿದೆ ಎಂದು ಕೇಂದ್ರ ರಕ್ಷಣಾ ಇಲಾಖೆ ಎಚ್ಚರಿಕೆ ಸಂದೇಶ ರವಾನಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next