Advertisement

ಪ್ರವಾಹದಿಂದ ತತ್ತರಿಸಿದ ಚೀನ

11:53 PM Aug 03, 2023 | Team Udayavani |

ಬೀಜಿಂಗ್‌: ಚೀನ ರಾಜಧಾನಿಯಲ್ಲಿ ಕಳೆದ ಕೆಲವು ದಿನಗಳಿಂದ ಭಾರೀ ಮಳೆಯಾಗುತ್ತಿದ್ದು, ಟೈಫ‌ೂನ್‌ ಡೆಕ್ಸುರಿಯಾ ಚಂಡಮಾರುತ ಬೀಜಿಂಗ್‌ ಅನ್ನು ಅಕ್ಷರಶಃ ಮುಳುಗಿಸಿ ಹಾಕಿದೆ. ಕಳೆದ 140 ವರ್ಷಗಳಲ್ಲೇ ಅತೀ ಹೆಚ್ಚು ಮಳೆಯನ್ನು ಈ ಬಾರಿ ಬೀಜಿಂಗ್‌ ಸ್ವೀಕರಿಸಿದ್ದು, ಪ್ರವಾಹದಿಂದ ಉಂಟಾ ಗಿರುವ ಅವಘಡಗಳಲ್ಲಿ ಈಗಾಗಲೇ 21 ಮಂದಿ ಮೃತಪಟ್ಟಿದ್ದಾರೆ 26 ಮಂದಿ ನಾಪತ್ತೆಯಾಗಿದ್ದಾರೆ.

Advertisement

ಕಳೆದ ಶನಿವಾರದಿಂದ ಬುಧವಾರದ ವೇಳೆಗೆ ನಗರದಲ್ಲಿ 744.8 ಮಿಲಿ ಮೀಟರ್‌ನಷ್ಟು ಮಳೆ ಯಾಗಿದ್ದು, ರಾಜಧಾನಿಯ ಹೆಬೈ ಪ್ರಾಂತವೂ ಸಂಪೂರ್ಣ ಪ್ರವಾಹದಿಂದ ಹಾನಿಗೊಳಗಾಗಿದೆ. ರಸ್ತೆಗಳು ನೀರಿನಿಂದ ಜಲಾವೃತಗೊಂಡಿದ್ದು, ವಿದ್ಯುತ್‌ ಕಡಿತವೂ ವರದಿಯಾಗಿದೆ. ಜನರನ್ನು ಪಾರು ಮಾಡಲು ರಕ್ಷಣ ಪಡೆಗಳು ಕಾರ್ಯಪ್ರವೃತ್ತವಾಗಿವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next