Advertisement

ಬೀಜಿಂಗ್‌ ಒಲಿಂಪಿಕ್ಸ್‌ ಮೇಲೆ ಕೊರೊನಾ ಛಾಯೆ

08:44 PM Dec 26, 2021 | Team Udayavani |

ಬೀಜಿಂಗ್‌: ಮುಂದಿನ ಫೆಬ್ರವರಿಯಲ್ಲಿ ಚೀನದ ಬೀಜಿಂಗ್‌ನಲ್ಲಿ ನಡೆಯಲಿರುವ ಚಳಿಗಾಲದ ಒಲಿಂಪಿಕ್ಸ್‌ ಮೇಲೆ ಕೊರೊನಾ ಕರಿನೆರಳು ಮೂಡಿದೆ. ಚೀನದಲ್ಲಿ ದಿಢೀರನೆ 206 ಹೊಸ ಕೊರೊನಾ ಪ್ರಕರಣಗಳು ಪತ್ತೆಯಾಗಿವೆ.

Advertisement

ಕೊರೊನಾ ಏರಿಕೆಯನ್ನು ತಡೆಯಲು ಚೀನ ಸರಕಾರ ಅವಿರತವಾಗಿ ಶ್ರಮಿಸುತ್ತಿರುವ ನಡುವೆಯೇ, ಅಲ್ಲಿ ಹೊಸತಾಗಿ ಪ್ರಕರಣಗಳು ಪತ್ತೆಯಾಗುತ್ತಿವೆ. ಈಗಾಗಲೇ ಚೀನ ಸರಕಾರ ವಿವಿಧ ದೇಶಗಳ ರಾಜತಾಂತ್ರಿಕ ಬಹಿಷ್ಕಾರದಿಂದ ಬೇಸತ್ತಿದೆ. ಅದರ ಮಧ್ಯೆ ಈ ಬೆಳವಣಿಗೆ ಸವಾಲೊಡ್ಡಿದೆ.

ಸದ್ಯದ ಪರಿಸ್ಥಿತಿಯನ್ನು ನೋಡಿದರೆ ಈಗಿನ ಕೊರೊನಾ ಪ್ರಕರಣಗಳ ಸಂಖ್ಯೆ ತೀರಾ ಹೆದರಿಕೆ ಹುಟ್ಟಿಸುವಂತಹ ಮಟ್ಟದಲ್ಲೇನೂ ಇಲ್ಲ. ಆದರೂ ಕೊರೊನಾ ಪ್ರಕರಣಗಳ ಸಂಖ್ಯೆಯನ್ನು ಶೂನ್ಯಕ್ಕಿಳಿಸುವ ಚೀನ ಯತ್ನಕ್ಕಿದು ಹಿನ್ನಡೆಯಾಗಿ ಪರಿಣಮಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next