Advertisement

ಚೀನಾದ ಬಾಲಕನಲ್ಲಿ ಎಚ್‌3ಎನ್‌8 ಹಕ್ಕಿಜ್ವರ! ಮೊದಲ ಬಾರಿಗೆ ಮನುಷ್ಯನಲ್ಲಿ ಸೋಂಕು ಪತ್ತೆ

09:55 PM Apr 27, 2022 | Team Udayavani |

ಬೀಜಿಂಗ್‌: 2002ರಲ್ಲಿ ಮೊದಲ ಬಾರಿಗೆ ಉತ್ತರ ಅಮೆರಿಕದಲ್ಲಿ ಎಚ್‌3ಎನ್‌8 ತಳಿಯ ಹಕ್ಕಿಜ್ವರ ಕಾಣಿಸಿಕೊಂಡಿತ್ತು. ಇಲ್ಲಿಯವರೆಗೆ ಪಕ್ಷಿಗಳಿಂದ ಕೇವಲ ಕುದುರೆ, ನಾಯಿ, ಸೀಲ್‌ಗ‌ಳಿಗೆ ಹರಡಿದ್ದ ಈ ಜ್ವರ ಇದೇ ಮೊದಲ ಬಾರಿಗೆ ಮನುಷ್ಯನಿಗೂ ದಾಟಿದೆ.

Advertisement

ಚೀನಾದ ಹೆನಾನ್‌ ಪ್ರಾಂತ್ಯದ 4 ವರ್ಷದ ಬಾಲಕನಿಗೆ ಈ ಜ್ವರ ಬಂದಿದೆ! ಆದರೆ ಇದೇನು ಬಹಳ ಅಪಾಯಕಾರಿಯಲ್ಲ, ಮನುಷ್ಯನ ಶರೀರದಲ್ಲಿ ಈ ವೈರಸ್‌ ಪರಿಣಾಮಕಾರಿಯಲ್ಲ ಎಂದು ಚೀನಾದ ನ್ಯಾಷನಲ್‌ ಹೆಲ್ತ್‌ ಕಮಿಷನ್‌ ಹೇಳಿದೆ.

ವಿಶೇಷವೆಂದರೆ ಈ ಜ್ವರ ಬಾಲಕನಿಗೆ ನೇರವಾಗಿ ಬಾತುಕೋಳಿಗಳಿಂದ ದಾಟಿಕೊಂಡಿದೆ. ಅಂದರೆ ಬೇರೆಯ ತೆರನ ಜೀವಸಮುದಾಯದಿಂದ ಮನುಷ್ಯನಿಗೆ ವರ್ಗಾವಣೆಗೊಂಡಿದೆ. ಈ ಬಾಲಕನ ಜೊತೆಯಲ್ಲಿರುವ ಇತರೆ ಯಾರಿಗೂ ಸೋಂಕು ತಗುಲಿಲ್ಲ! ಈತ ವಾಸಿಸುತ್ತಿರುವುದು ಕಾಡು ಬಾತುಕೋಳಿಗಳಿಂದಲೇ ತುಂಬಿಕೊಂಡಿರುವ ಒಂದು ಊರಿನಲ್ಲಿ. ಈತನ ಕುಟುಂಬ ಕೋಳಿಗಳನ್ನೂ ಸಾಕಿದೆ.

ಇದನ್ನೂ ಓದಿ : ಚುನಾವಣಾ ತಂತ್ರಗಾರ ಪ್ರಶಾಂತ್‌ ಕಿಶೋರ್‌ ಕೈ ಕೊಡಲು ರಾಹುಲ್‌ ಪ್ರವಾಸ ಕಾರಣ?

Advertisement

Udayavani is now on Telegram. Click here to join our channel and stay updated with the latest news.

Next