Advertisement

ಅರುಣಾಚಲದ ಆರು ಸ್ಥಳ ಹೆಸರು ಬದಲಿಸಿದ ಚೀನ

03:45 AM Apr 20, 2017 | |

ಬೀಜಿಂಗ್‌:  ತನ್ನ ವಿರೋಧದ ನಡುವೆಯೂ ಟಿಬೆಟ್‌ ಧರ್ಮಗುರು ದಲೈ ಲಾಮಾರನ್ನು ಅರುಣಾಚಲ ಪ್ರದೇಧಿಶಕ್ಕೆ ಸ್ವಾಗತಿಸಿದ ಭಾರತದ ಕ್ರಮದಿಂದ ಕ್ರುದ್ಧಗೊಂಡಿದ್ದ ಚೀನ, ಇದೀಗ ಮತ್ತೆ ಗಡಿ ತಗಾದೆ ತೆಗೆದಿದೆ.

Advertisement

ಭಾರತದ ಗಡಿ ರಾಜ್ಯವಾಗಿರುವ ಅರುಣಾಚಲ ಪ್ರದೇಶ ತನ್ನದು ಎಂದು ಹಿಂದಿನಿಂದಲೂ ವಿವಾದ ಸೃಷ್ಟಿಸುತ್ತಲೇ ಬಂದಿರುವ ಚೀನ, ಇದೀಗ ಅರುಣಾಚಲದ ಆರು ಸ್ಥಳಗಳಿಗೆ ತನ್ನದೇ ಹೆಸರುಗಳನ್ನು ಬುಧವಾರ ಅಂತಿಮಗೊಳಿಸಿದೆ. ಈ ಮೂಲಕ ಅರುಣಾಚಲ ವಿವಾದದ ಸಂಬಂಧ “ಕಾನೂನುಬದ್ಧ ಕ್ರಮ’ ಕೈಗೊಂಡಿರುವುದಾಗಿ ಚೀನ ಹೇಳಿಕೊಂಡಿದೆ.

“ದಕ್ಷಿಣ ಟಿಬೆಟ್‌(ಅರುಣಾಚಲ ಪ್ರದೇಶ) ನಲ್ಲಿರುವ ಆರು ಸ್ಥಳಗಳಿಗೆ, ಚೀನೀ ಅಕ್ಷರಗಳು, ಟಿಬೆಟಿಯನ್‌ ಮತ್ತು ರೋಮನ್‌ ವರ್ಣಮಾಲೆಧಿಯನ್ನು ಬಳಸಿ ನೀಡಿದ ಹೆಸರುಗಳನ್ನು ಚೀನದ ನಾಗರಿಕ ವ್ಯವಹಾರಗಳ ಸಚಿವಾಲಯ ಎ.14ರಂದು ಅಂತಿಮಗೊಳಿಸಿದೆ,’ ಎಂದು “ಗ್ಲೋಬಲ್‌ ಟೈಮ್ಸ್‌’ ಪತ್ರಿಕೆ ವರದಿ ಮಾಡಿದೆ.

“ಆರೂ ಸ್ಥಳಗಳಿಗೆ ವೋಗ್ಯಾನ್‌ಲಿಂಗ್‌, ಮಿಲಾ ರಿ, ಕೊÌàಯೆxಂಗಾಬೊì, ಮನಿಕುÌಕಾ, ಬುಮೊ ಲಾ ಮತ್ತು ನಮ್ಕಾಪಬ್‌ ರಿ ಎಂಬ ಹೆಸರುಗಳನ್ನು ಅಂತಿಮಗೊಳಿಧಿಸಲಾಗಿದೆ. ಅರುಣಾಚಲದ ಮೇಲೆ ಚೀನ ಪ್ರಾದೇಶಿಕ ಹಕ್ಕು ಹೊಂದಿರುವುದಕ್ಕೆ ಇತಿಹಾಸ, ಸಂಸ್ಕೃತಿ ಮತ್ತು ಆಡಳಿತಾತ್ಮಕ ಸ್ಪಷ್ಟ ಸಾಕ್ಷ್ಯಗಳಿವೆ ಎಂಬುದನ್ನು ಈ ಹೆಸರುಧಿಗಳು ಪ್ರತಿಬಿಂಬಿಸುತ್ತವೆ,’ ಎಂದು ಚೀನದ ವಿದೇಶಾಂಗ ಸಚಿವಾಲಯದ ವಕ್ತಾರ ಲು ಕಾಂಗ್‌ ಹೇಳಿದ್ದಾರೆ.
“ಸ್ಥಳೀಯರ ಹೆಸರುಗಳಿಗೆ  ಸಂಬಂಧಿಸಿದ ನಿಯಮಗಳಿಗೆ ಅನುಗುಣವಾಗಿ ಈ ಹೆಸರುಗಳನ್ನು ಅಂತಿಮಗೊಳಿಸಿದ್ದು, ಇದು ಚೀನ ಸರಕಾರ ಕೈಗೊಂಧಿಡ ಕಾನೂನುಬದ್ಧ ಕ್ರಮವಾಗಿದೆ ಎಂದಿರುವ ಲು ಕಾಂಗ್‌, “ಭಾರತ-ಚೀನ ನಡುವಿನ ವಿವಾದಿತ ಪ್ರದೇಶಧಿದಲ್ಲಿ ದಲೈ ಲಾಮಾ ಅವರ ಚಟುವಟಿಕೆಗಳಿಗೆ ಮತ್ತು ಅವರ ಚೀನ ವಿರುದ್ಧದ ಪಿತೂರಿಗಳಿಗೆ ಅವಧಿಕಾಶ ನೀಡುವ ಮೂಲಕ ಭಾರತ ತಪ್ಪೆಸಗಿದೆ. ಇದನ್ನು ಚೀನ ಬಲವಾಗಿ ಖಂಡಿಸುತ್ತದೆ’ ಎಂದಿದ್ದಾರೆ.

ಚೀನದ ನೈರುತ್ಯ ಹಾಗೂ ಭಾರತದ ಈಶಾನ್ಯ ಗಡಿಗೆ ಹೊಂದಿಕೊಂಡಂತೆ ಇರುವ ಅರುಣಾಚಲ ಪ್ರದೇಶ, ಈ ದೇಶಗಳ ನಡುವಿನ ಗಡಿ ವಿವಾದದ ಮೂಲವಾಗಿದೆ. ಈ ಸಂಬಂಧ ಭಾರತ ಹಾಗೂ ಚೀನದ ವಿಶೇಷ ಪ್ರತಿನಿಧಿಗಳು 19 ಬಾರಿ ಸಭೆ ನಡೆಸಿ, ಚರ್ಚಿಸಿದ್ದರೂ ವಿವಾದಕ್ಕೆ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗಿಲ್ಲ. ಇತ್ತೀಚೆಗೆ ಟಿಬೆಟ್‌ ಧರ್ಮಗುರು ದಲೈಲಾಮಾ ಅವರು ಅರುಣಾಚಲ ಪ್ರದೇಶಕ್ಕೆ ಭೇಟಿ ನೀಡುವುದನ್ನು ತಡೆಯುವಂತೆ ಚೀನ ಭಾರತವನ್ನು ಕೋರಿತ್ತು. ಆದರೆ ಭಾರತ ಲಾಮಾ ಅವರನ್ನು ಸ್ವಾಗತಿಸಿತ್ತು. ಇದಕ್ಕೆ ಪ್ರತೀಕಾರವೆಂಬಂತೆ ಚೀನ ಈಗ ಗಡಿ ವಿವಾದವನ್ನು ಕೆದಕುತ್ತಿದೆ.

Advertisement

ಯುದ್ಧಕ್ಕೆ ಚೀನ ಸಿದ್ಧತೆ?
ಅರುಣಾಚಲಕ್ಕೆ ಆರು ಹೆಸರುಗಳನ್ನು ನಿಗದಿ ಮಾಡಿರುವಂತೆಯೇ ಚೀನ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ ಹೊಸ ಸವಾಲುಗಳನ್ನು ಎದುರಿಸುವಂತೆ ಸಿದ್ಧರಾಗಿ ಎಂದು ಸೇನೆಗೆ ಕರೆ ನೀಡಿದ್ದಾರೆ. ಬಾಹ್ಯಾಕಾಶ ಯುದ್ಧ, ಇಲೆಕ್ಟ್ರಾನಿಕ್‌ ಸೇರಿದಂತೆ ಎಲ್ಲ ಮಾದರಿಯ ಯುದ್ಧಗಳಲ್ಲೂ ನಿಪುಣತೆ ಸಾಧಿಸಬೇಕೆಂದು ಸಲಹೆ ಮಾಡಿದ್ದಾರೆ. ಭಾರತ ಮತ್ತು ಚೀನ ನಡುವಿನ ಸಂಬಂಧ ಬಿಗಡಾಯಿಸಿರು ಹಿನ್ನೆಲೆಯಲ್ಲಿ ಕ್ಸಿ ಜಿನ್‌ಪಿಂಗ್‌ರ ಈ ಮಾತು ಮಹತ್ವಪೂರ್ಣದ್ದಾಗಿದೆ ಎಂದು ಹೇಳಲಾಗುತ್ತಿದೆ. ಹೊಸತಾಗಿ ಆರಂಭವಾಗಿರುವ ಸೇನೆಯ ಘಟಕ ಉದ್ಘಾಟಿಸಿ ಅವರು ಮಾತನಾಡಿದರು.

ಸ್ಥಳೀಯರ ಹೆಸರುಗಳಿಗೆ  ಸಂಬಂಧಿಸಿದ ನಿಯಮಗಳಿಗೆ ಅನುಗುಣವಾಗಿ ಈ ಹೆಸರುಗಳನ್ನು ಅಂತಿಮಗೊಳಿಸಿದ್ದು, ಇದು ಚೀನ ಸರಕಾರ ಕೈಗೊಂಡ ಕಾನೂನುಬದ್ಧ ಕ್ರಮವಾಗಿದೆ.
– ಲು ಕಾಂಗ್‌, ಚೀನ 
ವಿದೇಶಾಂಗ ಇಲಾಖೆ ವಕ್ತಾರ

Advertisement

Udayavani is now on Telegram. Click here to join our channel and stay updated with the latest news.

Next