Advertisement
ಮಾತುಕತೆ ನಡೆಯುತ್ತಿದ್ದು, ಏತನ್ಮಧ್ಯೆ ಪ್ಯಾಂಗಾಂಗ್ ತ್ಸೋನ ಫಿಂಗರ್ 4 ಪ್ರದೇಶದಿಂದ ಚೀನಾ ಸೇನೆ ಹಿಂಪಡೆಯಲು ನಿರಾಕರಿಸಿದೆ ಎಂದು ವರದಿ ತಿಳಿಸಿದೆ.
Related Articles
Advertisement
ಬುಧವಾರ ಭಾರತ ಮತ್ತು ಚೀನಾ ನಡುವಿನ ಕಮಾಂಡರ್ ಹಂತದ ಮಾತುಕತೆ ಸುದೀರ್ಘ 15ಗಂಟೆಗಳ ಕಾಲ ನಡೆದಿತ್ತು. ಈ ಸಂದರ್ಭದಲ್ಲಿ ಚೀನಾ ಫಿಂಗರ್ 4ರಿಂದ ಸೇನೆಯನ್ನು ವಾಪಸ್ ಕರೆಯಿಸಿಕೊಳ್ಳುವುದಿಲ್ಲ ಎಂಬುದನ್ನು ಸ್ಪಷ್ಟಪಡಿಸಿತ್ತು ಎಂದು ಮೂಲಗಳು ತಿಳಿಸಿವೆ. ಗಲ್ವಾನ್ ಕಣಿವೆ ಪ್ರದೇಶ, ಹಾಟ್ ಸ್ಪ್ರಿಂಗ್ಸ್ ಮತ್ತು ಗೋಗ್ರಾದಲ್ಲಿ ಸೇನೆಯನ್ನು ವಾಪಸ್ ಕರೆಯಿಸಿಕೊಳ್ಳಲು ಭಾರತ ಮತ್ತು ಚೀನಾ ಎರಡೂ ಒಪ್ಪಿಗೆ ಸೂಚಿಸಿದ್ದವು. ಆದರೆ ಎಲ್ಲಾ ಗಡಿ ಪ್ರದೇಶದಿಂದ ಚೀನಾ ಸೇನೆಯನ್ನು ವಾಪಸ್ ಕರೆಯಿಸಿಕೊಳ್ಳಬೇಕು ಎಂದು ಭಾರತ ಬೇಡಿಕೆ ಇಟ್ಟಿರುವುದಾಗಿ ವರದಿ ತಿಳಿಸಿದೆ.
ಗಡಿಯಲ್ಲಿ ಚೀನಾ ಸೇನೆಯ ಚಟುವಟಿಕೆಯನ್ನು ಗಮನದಲ್ಲಿ ಇರಿಸಿಕೊಂಡಿರುವ ಭಾರತೀಯ ಸೇನೆ ಪೂರ್ವ ಲಡಾಖ್ ಪ್ರದೇಶಕ್ಕೆ 60 ಸಾವಿರ ಸೈನಿಕರನ್ನು ನಿಯೋಜಿಸಿದೆ. ಅಷ್ಟೇ ಅಲ್ಲ ಗಡಿ ಪ್ರದೇಶಕ್ಕೆ ಭೀಷ್ಮ್ ಟ್ಯಾಂಕ್ಸ್, ಅಪಾಚೆ ಯುದ್ಧ ಹೆಲಿಕಾಪ್ಟರ್, ಸುಖೋಯಿ ಯುದ್ಧ ಜೆಟ್ ವಿಮಾನ, ಚಿನೂಕ್ ಮತ್ತು ರುದ್ರ ಹೆಲಿಕಾಪ್ಟರ್ ಎಲ್ ಎಸಿ ಬಳಿ ಸರ್ವ ಸನ್ನದ್ಧವಾಗಿರುವುದಾಗಿ ವರದಿ ವಿವರಿಸಿದೆ.