Advertisement

ಭಾರತ ಕೋವಿಡ್ ಸಂಕಷ್ಟದಲ್ಲಿದ್ದರೆ, ಲಡಾಖ್ ನಲ್ಲಿ ಕುತಂತ್ರವಾಡುತ್ತಿದೆ ಕಪಟಿ ಚೀನಾ!

08:36 AM May 01, 2021 | Team Udayavani |

ಶ್ರೀನಗರ: ಭಾರತದಲ್ಲಿ ಕೋವಿಡ್ 19 ಸೋಂಕಿನ ಎರಡನೇ ಅಲೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಮೊದಲ ಅಲೆಗಿಂತಲೂ ಎರಡನೇ ಅಲೆಯಲ್ಲಿ ಹೆಚ್ಚಿನ ಹಾನಿಯಾಗುತ್ತಿದೆ. ಇತ್ತ ಭಾರತ ಈ ರೀತಿಯ ಸಂಕಷ್ಟ ಅನುಭವಿಸುತ್ತಿದ್ದರೆ, ಅತ್ತ ನೆರೆ ರಾಷ್ಟ್ರ ಚೀನಾ ಲಡಾಖ್ ನಲ್ಲಿ ತನ್ನ ಸೇನೆಯನ್ನು ಮತ್ತಷ್ಟು ಬಲಗೊಳಿಸುತ್ತಿದೆ.

Advertisement

ಇಂಡಿಯಾ ಟುಡೇ ಈ ಬಗ್ಗೆ ವರದಿ ಮಾಡಿದ್ದು, ಪೂರ್ವ ಲಡಾಖ್ ನಲ್ಲಿ ಚೀನಾ ತನ್ನ ಸೇನೆಯನ್ನು ಮತ್ತಷ್ಟು ಬಲಗೊಳಿಸುತ್ತಿದೆ. ಚಳಿಗಾಲದ ನಿಯೋಜನೆಗಳನ್ನು ಮಾಡುವ ಬದಲು ಪೂರ್ವ ಲಡಾಖ್ ನ ತಗ್ಗು ಪ್ರದೇಶಗಳಲ್ಲಿ ಚೀನಾ ಶಾಶ್ವತ ವಸತಿ ವ್ಯವಸ್ಥೆಗಳಂತಹ ಕಾರ್ಯ ಮಾಡುತ್ತಿದೆ ಎಂದು ವರದಿ ಮಾಡಿದೆ.

ಇದನ್ನೂ ಓದಿ:ಹೃದಯ ಶ್ರೀಮಂತಿಕೆ : ಪತ್ನಿಯ ಆಭರಣ ಮಾರಾಟ ಮಾಡಿ ಉಚಿತ ಆಕ್ಸಿಜನ್ ನೀಡುತ್ತಿರುವ ವ್ಯಕ್ತಿ

ಫೆಬ್ರವರಿಯಲ್ಲಿ ಪಾಂಗೊಂಗ್ ತ್ಸೊ ವಲಯಗಳಿಂದ ಭಾರತೀಯ ಮತ್ತು ಚೀನಾದ ಸೈನಿಕ ಪಡೆ ಹಿಂತೆಗೆದುಕೊಳ್ಳುವಿಕೆ ನಿಧಾನವಾಗಿದ್ದರೂ, ಉತ್ತಮ ಭರವಸೆಯ ವಾತಾವರಣವನ್ನು ಸೃಷ್ಟಿಸಿತ್ತು. ಆದರೆ ಕಾಂಗ್ಕ್ಸಿವಾರ್, ಅಕ್ಸಾಯ್ ಚೀನ್‌ನ ಉತ್ತರ ಮತ್ತು ಟಿಬೆಟ್‌ನ ಲಡಾಖ್ ಗಡಿಯ ರುಡೋಕ್ ನಡುವೆ ಚೀನದಿಂದ ನಿರ್ಮಿಸಲಾದ ಹೊಸ ಶಾಶ್ವತ ವಸತಿ ಸೌಕರ್ಯಗಳು ಭಾರತದ ಎಚ್ಚರಿಕೆಗೆ ಕಾರಣವಾಗಿದೆ.

ರಾಜತಾಂತ್ರಿಕವಾಗಿ ಚೀನಾ ಒಂದು ನಡೆಯನ್ನು ಮಾಡುತ್ತಿದ್ದರೆ, ಇತ್ತ ಘರ್ಷಣೆ ಉಂಟಾಗಬಹುದಾದ ಪ್ರದೇಶಗಳನ್ನು ಚೀನಾದ ಸೈನ್ಯವು ಸದ್ದಿಲ್ಲದೆ ಬಲಪಡಿಸಿದೆ ಅಕ್ಸಾಯ್ ಚೀನಾದ ಉತ್ತರ ಭಾಗದಲ್ಲಿ ಚೀನಾ ಮಿಟಲಿರಿ ಕಟ್ಟಡಗಳು ಸೇರಿದಂತೆ ಹಲವು ಶಾಶ್ವತ ವ್ಯವಸ್ಥೆಗಳನ್ನು ಮಾಡಿಕೊಂಡಿದೆ ಎಂದು ವರದಿ ತಿಳಿಸಿದೆ.

Advertisement

ಇದನ್ನೂ ಓದಿ: ಇಂಟರ್ನೆಟ್‌ ಸಮಸ್ಯೆಯಿಂದ ಪಡಿತರ ವಿತರಣೆ ತೊಡಕು: ಗುಡ್ಡದ ಮೇಲೆ ನೆಟ್‌ವರ್ಕ್‌ಗಾಗಿ ಹುಡುಕಾಟ

ಈ ನಡುವೆಯೇ, ಶುಕ್ರವಾರ ಭಾರತದ ವಿದೇಶಾಂಗ ಸಚಿವ ಜೈಶಂಕರ್‌ ಅವರು, ಚೀನಾ ವಿದೇಶಾಂಗ ಸಚಿವ ವಾಂಗ್‌ ಯಿ ಜೊತೆ ದೂರವಾಣಿ ಮೂಲಕ ಮಾತುಕತೆ ನಡೆಸಿದ್ದಾರೆ. ಆದಷ್ಟು ಬೇಗ ಪೂರ್ವ ಲಡಾಖ್‌ ನಿಂದ ಸೇನೆ ಹಿಂಪಡೆಯುವ ಪ್ರಕ್ರಿಯೆ ನಡೆಯಬೇಕು. ಶಾಂತಿ-ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಮಾಡಿಕೊಂಡ ಒಪ್ಪಂದವನ್ನು ಪ್ರಾಮಾಣಿಕವಾಗಿ ಪಾಲಿಸಬೇಕು ಎಂದೂ ಚೀನಾಗೆ ಜೈಶಂಕರ್‌ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next