Advertisement
ಅಂತಾರಾಷ್ಟ್ರೀಯ ಭೌಗೋಳಿಕ ಗುಪ್ತಚರ ತಜ್ಞ ಡಾ| ರೆನ್ನಿ ಬಾರ್ಬಿಯಾಜ್ ಅವರು ನೀಡಿರುವ ಪುರಾವೆ ಗಳೊಂದಿಗೆ ಲೋಪ್‌ನೂರ್ ಸ್ಯಾಟ್‌ಲೈಟ್ ಫೋಟೋಗಳನ್ನು ಪತ್ರಿಕೆ ಹಂಚಿ ಕೊಂಡಿದ್ದು, ಚೀನದ ಪರಮಾಣು ಪರೀಕ್ಷೆಯ ಸನ್ನದ್ಧತೆಗಳ ಕುರಿತು ಮಾಹಿತಿ ನೀಡಿದೆ. ಆ ಪ್ರಕಾರ, 1964ರ ಅ. 16ರಂದು ಚೀನ ತನ್ನ ಮೊದಲ ಪರಮಾಣು ಪರೀಕ್ಷೆ ನಡೆಸಿದ ಲೋಪ್‌ನೂರ್‌ನಲ್ಲಿ ಮತ್ತೆ ಚಟುವಟಿಕೆಗಳು ಗರಿಗೆದರಿದೆ. ಲೋಪನೂರ್‌ನ ಉಪಗ್ರಹದ ಫೋಟೋಗಳಲ್ಲಿ ಕ್ಷಿಪಣಿಗಳನ್ನು ಸಂಗ್ರಹಿಸುವಂಥ ಬಂಕರ್‌ಗಳು, ಪರಮಾಣು ಪರೀಕ್ಷೆಗೆ ಪೂರಕವಾದ ಸುರಂಗಗಳನ್ನು ಕೊರೆದಿರುವುದು ಕಂಡು ಬಂದಿದ್ದು, ಚೀನ ಶೀಘ್ರದಲ್ಲೇ ಪರಮಾಣು ಸಜ್ಜಿತ ಕ್ಷಿಪಣಿಗಳ ಸಿಡಿತಲೆಗಳನ್ನು ಈ ಪ್ರದೇಶದಲ್ಲಿ ಪರೀಕ್ಷೆಗೆ ಒಳಪಡಿಸಬಹುದು ಎನ್ನಲಾಗಿದೆ. Advertisement
China: ಪರಮಾಣು ಪರೀಕ್ಷೆಗೆ ಚೀನ ಸಿದ್ಧತೆ?
01:00 AM Dec 23, 2023 | Team Udayavani |
Advertisement
Udayavani is now on Telegram. Click here to join our channel and stay updated with the latest news.