Advertisement
ಅಮೆರಿಕ 1969ರಲ್ಲಿ ತನ್ನ ಮೊದಲ ಮಾನವ ಸಹಿತ ಅಪೋಲೋ ಮಿಷನ್ ಸಂದರ್ಭದಲ್ಲಿ ಮೊದಲ ಬಾರಿಗೆ ಚಂದ್ರನ ಮೇಲೆ ಧ್ವಜ ಸ್ಥಾಪಿಸಿತ್ತು. ತದನಂತರ 1969ರಿಂದ 1972ರವರೆಗೂ ಅಮೆರಿಕ 12 ಗಗನಯಾತ್ರಿಗಳನ್ನು ಚಂದ್ರನ ಮೇಲ್ಮೆ„ಯಲ್ಲಿ ಇಳಿಸಿತ್ತು. ಈ ಯೋಜನೆಗಳ ವೇಳೆ ಒಟ್ಟು 382 ಕೆಜಿಯಷ್ಟು ಕಲ್ಲು ಮತ್ತು ಮಣ್ಣಿನ ಮಾದರಿ ಸಂಗ್ರಹಿಸಲಾಗಿತ್ತು.
ನ.23ರಂದು ಚೀನ ಉಡಾಯಿಸಿದ Chang’e-5 ಡಿ.1ರಂದು ಚಂದ್ರನ ಮೇಲೆ ಇಳಿದಿತ್ತು, ಈಗ ಮಾದರಿಗಳನ್ನು ಸಂಗ್ರಹಿಸಿ ಅದು ಭೂಮಿಯತ್ತ ತನ್ನ ಪಯಣ ಬೆಳೆಸಿದ್ದು, ಡಿ.16ರಂದು ಬಂದಿಳಿಯುವ ನಿರೀಕ್ಷೆಯಿದೆ. ಈ ಮಾದರಿಗಳನ್ನು ಹೊತ್ತು ಗಗನನೌಕೆಯೇನಾದರೂ ಯಶಸ್ವಿಯಾಗಿ ಬಂದಿಳಿದರೆ, ಅಮೆರಿಕ, ರಷ್ಯಾ ಅನಂತರ ಚಂದ್ರನ ಅಂಗಳದಿಂದ ಕಲ್ಲು, ಮಣ್ಣಿನ ಮಾದರಿ ತಂದ ಮೂರನೇ ರಾಷ್ಟ್ರ ಎಂಬ ಗರಿಮೆಗೂ ಚೀನ ಪಾತ್ರವಾಗಲಿದೆ.